ಇನ್ನೊಂದು ಒಳೆಯ ಝೆನ್ ಕಥೆ :- ಒಮ್ಮೊಮ್ಮೆ ಹಾಗಾಗುತ್ತದೆ!
ಬರಹ
ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ
"ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಹೇಳುತ್ತಾನೆ.
ಆಗ ಗುರು
" ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡ" ಎನ್ನುತ್ತಾನೆ
ಸ್ವಲ್ಪ ದಿನಗಳ ನಂತರ ಶಿಷ್ಯನು ಮತ್ತೆ ಗುರುವಿನ ಬಳಿ ಹೋಗಿ
"ಗುರುಗಳೆ , ನನ್ನ ಧ್ಯಾನ ಯಶಸ್ವಿಯಾಗಿದೆ, ಸಾಧನೆ ಅದ್ಭುತವಾಗಿದೆ, ಜ್ಞಾನ ನನಗೆ ಲಭಿಸಿದೆ ಅನ್ನಿಸುತ್ತಿದೆ" ಎಂದು ಹೇಳೂತ್ತಾನೆ .
ಆಗ ಗುರುವು
" ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡ" ಎನ್ನುತ್ತಾನೆ .