ಇಬ್ಬನಿ
ಕವನ
ಇಬ್ಬನಿ ಕರಗಿದೆ ಸೂರ್ಯನ ಬೆಳಕಿಗೆ
ಹಬ್ಬದ ರೀತಿಯೆ ಕಾಣುವ ಸಿರಿ
ತಬ್ಬಿದ ಎಲೆಗಳ ಮೇಲ್ಗಡೆ ಹನಿಯದು
ಕಬ್ಬದ ಸಾಲಲಿ ನಡೆಯುವ ಪರಿ
ಚೆಲುವಿನ ಬನದಲಿ ಸುಂದರ ಪುಷ್ಪವು
ಒಲವಿನ ಚೆಲುವನು ನೋಡುತ ನಡೆ
ಕಲೆಯುತ ಸೇರುತ ಸಂತಸ ಪಡುತಲಿ
ಹಲುಬದೆ ಜೊತೆಯಲಿ ಸಾಗುತ ನಡೆ
ಬಣ್ಣದ ಲೋಕದಿ ಕಣ್ಣನು ಹಾಯಿಸು
ತಣ್ಣನೆ ಗಾಳಿಯು ಬೀಸುತಲಿರೆ
ಚಿಣ್ಣರು ಬಂದರು ನಲಿಯುತ ನಿಂತರು
ಹಣ್ಣನು ಸವಿಯುತ ಸುತ್ತುತಲಿರೆ
ಹರೆಯದ ವಿಸ್ಮಯ ಲೋಕದಿ ಸುತ್ತುತ
ತರತರ ಕಾವ್ಯವ ಬರೆಯುತಲಿರೆ
ಬರವದು ಕಳೆಯುತ ನೆಲವದು ಬೆಳಗಲು
ಪುರದಲಿ ಸಂತಸ ಕಾಣುತಲಿರೆ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ್