ಇರುಳು ಮಲ್ಲಿಗೆ

ಇರುಳು ಮಲ್ಲಿಗೆ

ಕವನ

ಮುಗಿಲ ಬಾನ ತೋಟದಲ್ಲಿ

ಅರಳಿ ನಿಂತಿದೆ ಇರುಳ ಮಲ್ಲಿಗೆ 

ಮುಡಿಯಲೋಡಿ ಬಂದ ಚಂದ್ರ

ಮೆರಗ ನೋಡಿ ನಾಚಿ ನಿಂತ ಮೆಲ್ಲಗೆ 

 

ಎಲ್ಲಿ ನೋಡಲಲ್ಲೆ ಹೊಳೆವ ಮಲ್ಲಿಗೆ

ಬಾನ ತುಂಬ ಮಿನುಗು ಚುಕ್ಕಿ ಮಲ್ಲಿಗೆ

ರಾಶಿರಾಶಿ ಮಲ್ಲಿಗೆ ನೋಡಿ ನಿಂತ

ಚಂದ್ರ ಒಳಗೊಳಗೆ ನಗುತ ಮೆಲ್ಲಗೆ

 

ಅರಳಿ ನಿಂತ ಮಲ್ಲಿಗೆ ಕಂಡು

ಆಸೆಯೇ ಬಂದಳು ಪುಟಾಣಿ 

ಮುಡಿಗೆ ತುಂಬಾ ರಾಶಿ ಹೂ ಎನುತ 

ಕೈಚಾಚಿ ಕೀಳ್ವೆನೆಂದಳು ಈಗಲೇ 

 

ಅರಳಿ ಮಿಂಚೊ ಇರುಳ ಮಲ್ಲಿಗೆ

ನೋಡಿ ಮಗು ಕುಣಿಯಿತು ಮೆಲ್ಲಗೆ

ಎಷ್ಟೊಂದು ಮಲ್ಲಿಗೆ ಸಿಗವು ನಮಗೆ

ಏಕಮ್ಮ ಅಂತ ಕೇಳಿತು ಆಮ್ಮಗೆ

 

ಸೂರ್ಯ ಬರಲು ಮೆಲ್ಲಗೆ

ಎಲ್ಲ ಹೂ ಹೋದವು ಎಲ್ಲಿಗೆ

ಬಿಸಿಲ ಏರಿ ಗಗನಕೆ ಬರಲು

ಕಾಣದಾದವು ಇರುಳ ಮಲ್ಲಿಗೆ

 

ಇರುಳ ಮಲ್ಲಿಗೆ ಕಾಣದೆ ಚಂದ್ರ

ನೊಂದು ಸಣ್ಣಗಾದ ಅಲ್ಲಿಯೆ 

ಕಾದು ಕುಳಿತ ದಿನವೇ ಚಂದ್ರ

ಮತ್ತೆ ನೋಡಲು ಮಿಂಚು ಮಲ್ಲಿಗೆ

 

-ಬಂದ್ರಳ್ಳಿ ಚಂದ್ರು, ತುಮಕೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್