ಇಲಿನಾಯ್ ರಾಜ್ಯದ, ವಿಲ್ಮೆಟ್ಟೆ, ಹಳ್ಳಿಯ ಬಳಿಯಲ್ಲಿರುವ 'ಬಹಾಯಿ ಪ್ರಾರ್ಥನಾಮಂದಿರ'

ಇಲಿನಾಯ್ ರಾಜ್ಯದ, ವಿಲ್ಮೆಟ್ಟೆ, ಹಳ್ಳಿಯ ಬಳಿಯಲ್ಲಿರುವ 'ಬಹಾಯಿ ಪ್ರಾರ್ಥನಾಮಂದಿರ'

ಬರಹ

ನಾವು, (ನನ್ನ ತಮ್ಮ, ಅವರಮಗಳು, ರಜನಿ, ನನ್ನಮಗ ಪ್ರಕಾಶ್) ಚಿಕಾಗೋನಗರದ ’ಅಕ್ಕ ಕನ್ನಡವಿಶ್ವಸಮ್ಮೇಳನ,’ ವನ್ನು ಮುಗಿಸಿದ ನಂತರ ಅಲ್ಲಿನ ಹತ್ತಿರದ ಪ್ರದೇಶಗಳಲ್ಲಿ ಅಡ್ಡಾಡಿಕೊಂತ ನೋಡುತ್ತಾ ಹೋದೆವು. ಎಷ್ಟೋ ಪ್ರದೇಶಗಳು ನಮ್ಮಮನಸ್ಸನ್ನು ಸೂರೆಗೊಂಡವು. ಅವುಗಳಲ್ಲಿ ’ಮಿಚಿಗನ್ ಮಹಾಸರೋವರ’, ’ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿ’, ’ಸಿಯರ್ಸ್ ಗಗನಚುಂಬಿ ಕಟ್ಟಡ’, ಕೊನೆಯಲ್ಲಿ ’ಬಹಾಯಿ ಮಂದಿರ,’ ! ಅವುಗಳ ವಿವರಗಳನ್ನು ಸಂದರ್ಭೋಚಿತವಾಗಿ ತಿಳಿಸುತ್ತಾಹೋಗುತ್ತೇನೆ

ಅಮೆರಿಕದ ಇಲಿನಾಯ್ ರಾಜ್ಯದ ’ವಿಲ್ಮೆಟ್ಟೆ,’ ನಲ್ಲಿ ನಿರ್ಮಿಸಲ್ಪಟ್ಟ ’ಕಮಲದಮೊಗ್ಗಿನಾಕಾರದ ಬಹಾಯಿ ಮಂದಿರ,’ ವನ್ನು, ೩೦ ವರ್ಷಗಳ ಪರಿಶ್ರಮದಿಂದ ೧೯೫೩ ರಲ್ಲಿ ಮುಗಿಸಲಾಗಿ ಜನತೆಗೆ ಅರ್ಪಣೆಮಾಡಲಾಯಿತು. ವಿಲ್ಮೆಟ್ಟೆ, ಕುಕ್ ಕೌಂಟಿಯಲ್ಲಿರುವ ಪುಟ್ಟ ಊರು. ಇದು ಇಲಿನಾಯ್ ರಾಜ್ಯದ ಚಿಕಾಗೋನಗರದ ಉತ್ತರದಲ್ಲಿದೆ. ಇದಕ್ಕೆ ಹತ್ತಿರದಲ್ಲಿ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯವಿದೆ. ಅಲ್ಲದೆ ಇದು ಮಿಚಿಗನ್ ಮಹಾಸರೋವರಕ್ಕೆ ತೀರಾಸಮೀಪದಲ್ಲಿದೆ.ತಮ್ಮಪ್ರಾರ್ಥನೆಗಳನ್ನು ಮೌನವಾಗಿ ಹೇಳಲು ಹಾಗೂ ಭಗವಂತನನ್ನು ಧ್ಯಾನಿಸಲು ಆರಾಧನಾಮಂದಿರದಲ್ಲಿ ಪ್ರತಿಯೊಬ್ಬನಾಗರಿಕನಿಗೂ ಸ್ವಾತಂತ್ರವಿದೆ. ಇದಕ್ಕೆ ಜಾತಿ, ಮತ, ಧರ್ಮ, ದೇಶ, ಲಿಂಗ, ಬಡವ-ಬಲ್ಲಿದರ ಬೇಲಿಯಿಲ್ಲ. ಇನ್ನುಳಿದ ಬಹಾಯಿಮಂದಿರಗಳು, ನವದೆಹಲಿ, ಪನಾಮನಗರ, ಕಂಪಾಲ, ಫ್ರಾಂಕ್ ಫರ್ಟ್, ಸಿಡ್ನಿ ಹಾಗೂ ಏಪಿಯದಲ್ಲಿವೆ. ಫ್ರೆಂಚ್ ಕೆನಡಾದ ಕಟ್ಟಡಶಿಲ್ಪಿ, 'ಲೂಯಿಸ್ ಬೊರ್ಜೀಸ್ ' ರವರಿಂದ ಕಟ್ಟಲ್ಪಟ್ಟಿತು. ಈ ಸುಂದರ ಬಹಾಯಿ ಪ್ರಾರ್ಥನಾಮಂದಿರ, ಬಿಳಿಕಾಂಕ್ರೀಟ್ ಹಾಗೂ ಅಮೃತಶಿಲೆಗಳಸಮಯೋಚಿತ ಬಳಕೆಯಿಂದ ನಿರ್ಮಿಸಲಾಗಿದೆ. ಹತ್ತಿರದಲ್ಲಿ ವಾಸವಾಗಿದ್ದವರ ಪೈಕಿ ಪ್ರಖ್ಯಾತ ದಿವಂಗತ ಹಾಲಿವುಡ್ ನಟ, ’ಚಾರ್ಲ್ಟನ್ ಹೇಸ್ಟನ್,’ ರವರು ಪ್ರಮುಖರು.

ಜಗತ್ತಿನ ೩೪೦ ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಬಹಾಯಿಧರ್ಮದ ಅನುಯಾಯಿಗಳು ವಾಸಿಸುತ್ತಿದ್ದಾರೆ. ಈ ಧರ್ಮ ನಮ್ಮದೇಶಕ್ಕೆ ೧೮೭೨ ರಲ್ಲಿ ಬಂದಿತ್ತು. ಒಟ್ಟು ೧೦ ಸಾವಿರ ಬಹಾಯಿ ಅಧ್ಯಾತ್ಮಿಕ ಸಭೆಗಳಿವೆ. ಈ ಜನಸಮುದಾಯ ಸುಮಾರು ೩,೫೦೦ ಕ್ಕೂ ಹೆಚ್ಚಿನಜಾಗಗಳಲ್ಲಿ ವಾಸ್ತವ್ಯಹೂಡಿದ್ದಾರೆ. ೧೯೫೩ ರಲ್ಲಿ ನವದೆಹಲಿಯಲ್ಲಿ ಜಾಗವನ್ನು ಖರೀದಿಸಿ ಕಟ್ಟಲಾದ ಭಾರತದಮಂದಿರ, ಏಳನೆಯದು. ೧೯೮೦ ರ ಏಪ್ರಿಲ್ ೨೧ ರಂದು ಕಟ್ಟಡನಿರ್ಮಾಣ ಪ್ರಾರಂಭವಾಗಿದ್ದು, ೧೯೮೬ ರ ಡಿಸೆಂಬರ್ ೨೪ ರಂದು ಮಾನವಜನಾಂಗಕ್ಕೆ ಸಮರ್ಪಣೆಮಾಡಲಾಯಿತು.

ಬಹಾಯಿ ಧರ್ಮದಬಗ್ಗೆ ಒಂದೆರಡುಮಾತು :

ಬಹಾಯಿ ಧರ್ಮವನ್ನು ೧೮೪೪ ರಲ್ಲಿ, ’ಬಹ ಉಲ್ಲ,’ ರೆಂಬ ಭಗವಂತನ ಸಂದೇಶವಾಹಕರು ಸ್ಥಾಪಕರು. ಇವರು, ೧೮೧೭ ರನವೆಂಬರ್ ೧೨ ರಂದು ಪರ್ಷಿಯದೇಶದ ಪ್ರಸಿದ್ಧ ಕುಟುಂಬವೊಂದರಲ್ಲಿ ಜನಿಸಿದರು. ಇವರನ್ನು ಇರಾಕ್ ನ ಬಾಗ್ದಾದ್ ನಗರಕ್ಕೆ, ಗಡಿಪಾರ್ ಮಾಡಲಾಯಿತು. ಪುನಃ ಅವರನ್ನು ಕ್ರೈಸ್ತರ ಪವಿತ್ರ ಕಾರಾಗೃಹ ನಗರ ಅಕ್ಕಾಕ್ಕೆ, ಗಡೀಪಾರ್ ಮಾಡಲಾಯಿತು. ಇವರ ಹಣೆಬರದಲ್ಲಿ ಬರೀ ಗಡಿಪಾರ್, ಸೆರೆಮನೆವಾಸದ ಶಿಕ್ಷೆ ಮತ್ತು ಕಷ್ಟ-ಸಂಕಷ್ಟಗಳೇ ತುಂಬಿದ್ದವು. ಹೀಗೆ ಅವರು, ೧೮೯೨ ರಲ್ಲಿ ಸ್ವರ್ಗಸ್ಥರಾದರು. ಅವರು ತಮ್ಮ ಬೋಧನೆಗಳನ್ನು ಸಾವಿರಾರು ಪತ್ರಗಳಲ್ಲಿ ಬರೆಯುತ್ತಾಹೋದರು. "ಇಡೀಮಾನವಜನಾಂಗ ಒಂದು ; ಹಾಗೂ ಇಡೀಪೃಥ್ವಿಯೇಒಂದು ರಾಷ್ಟ್ರ, ಮತ್ತು ಮಾನವಜನಾಂಗ-ಅದರ ಪ್ರಜೆಗಳು," ಎಂಬುದೇ ಅವರ ಪ್ರಮುಖ ಸಂದೇಶ !

--ನನ್ನ ಚಿತ್ರಸಂಗ್ರಹದಿಂದ