ಇಲಿ ಕೊಲ್ಲುವುದು ಹೇಗೆ?

ಇಲಿ ಕೊಲ್ಲುವುದು ಹೇಗೆ?

ಬರಹ

ಇಲಿಗಳ ಕಾಟ ಎಲ್ಲಿ ಇರೋಲ್ಲ ಹೇಳಿ? ಯಾರ ಮನೇಲಿ ಇರೋಲ್ಲ ಹೇಳಿ? ಮನೆ ಇಂದ ಹಿಡಿದು ವಿಧಾನ ಸೌಧ ತನಕ ಎಲ್ಲ ಕಡೆ ನು ಇವುಗಳದ್ದೇ ಕಾಟ. ( ವಿಧಾನ ಸೌಧ ದಲ್ಲಿ ಭಾರಿ ಹೆಗ್ಗಣ ಗಳೆ ಇವೆ). ಇಲಿ ಗಳನ್ನ ಸಾಯಿಸಲಿಕ್ಕೆ ಹಲವಾರು ಮಾರ್ಗ ಗಳು ಇವೆ. ಆದರೆ ಬೋನು , ವಿಷ.. ಇವೆಲ್ಲ ಬಹಳ ಹಳೆಯ ವಿಧಾನ. ಹೊಸ ಕೊಲ್ಲುವ ತಂತ್ರ ಗಳಿಗೆ ನಾನು ಸಂಶೋದನೆ ನಡೆಸಿ , ಈ ಕೆಳಕಂಡ ವರದಿ ತಯಾರಿಸಿರುವೆ. ನೀವು ಓದಿ, ನಿಮ್ಮ ಮನೆ / ಆಫೀಸ್ ನಲ್ಲಿ ಇರುವ ಇಲಿ ಕಾಟ ವನ್ನು ಕಡಿಮೆ ಮಾಡಿ ಕೊಳ್ಳಿ.

1. ನಿಮ್ಮ ಗರ್ಲ್ ಫ್ರೆಂಡ್ ರಾತ್ರೆ ಕಾಲ್ ಮಾಡಿದಾಗ ( ಅವಳೆಲ್ಲಿ ಮಾಡ್ತಾಳೆ, ಬರಿ ಮಿಸ್ ಕಾಲ್ ಕೊಡ್ತಾಳೆ) "ಅನಿಸುತ್ತಿದೆ ಯಾಕೋ ಇಂದು" ಹಾಡನ್ನ ಹೇಳೋಕೆ ಹೇಳಿ, ಅದನ್ನ ಇಲಿ ಗೆ ಕೇಳಿಸಿ... ಆ ಗಾಧರ್ಬ ಗಾನಕ್ಕೆ ಇಲಿ ಕೋಮ ಸ್ಥಿತಿ ಗೆ ಹೋಗಿ, ನಿದಾನಕ್ಕೆ ಸತ್ತೋಗುತ್ತೆ. ಆಗಲೂ ಸಾಯಲಿಲ್ಲ ಎಂದರೆ ಭೈರವಿ, ಆನಂದ ಭೈರವಿ... . ಕೊನೆಗೆ ಪಾತಾಳ ಭೈರವಿ ರಾಗ ಟ್ರೈ ಮಾಡೋಕೆ ಹೇಳಿ. ( ಇಲಿ ಸತ್ತಿರುತ್ತೆ ಬಿಡಿ, ಆದರೆ ಈ ವಿಷ್ಯಾನ ನಿಮ್ ಗರ್ಲ್ ಫ್ರೆಂಡ್ ಗೆ ಹೇಳಬೇಡಿ. ನನಗೆ ನಿಮ್ಮ ಜೀವ ಮುಖ್ಯ!!! )

2. ಇಲಿಗೆ ಸ್. ನಾರಾಯಣ್ ನಿರ್ಧೇಶನದ, ಅವನ ಮಗನ ಹೊಸ ಸಿನೆಮಾ ತೋರಿಸಿ. ಇಲಿ ಆತ್ಮ ಪಂಚ ಭೂತ ಗಳಲ್ಲಿ ಲೀನ ಆಗುತ್ತೆ.

3. ಅದಕ್ಕೆ --- ಗೌಡರು ಹ್ಯಾಪು ಮೊರೆ ಹಾಕ್ಕೊಂಡಿರೋ ಫೋಟೋ ತೋರಿಸಿ, ( --- ಗೌಡರು ನಗುತ್ತಾ ಇರುವ ಫೋಟೋ ಯಾರು ನೋಡಿಲ್ಲ ಬಿಡಿ) ಇಲಿಗೆ ಜೀವನದಲ್ಲಿ ಜೀಗುಪ್ಸೇ ಬಂದು ಆತ್ಮ ಹತ್ಯೆ ಮಾಡಿಕೊಳ್ಳುತ್ತೆ.

4. ಇಲಿಗೆ ಸರ್ಕಾರಿ ಶಾಲೆ ಯಲ್ಲಿ ಮಾಡಿದ ಬಿಸಿ ಊಟವನ್ನು ಬಡಿಸಿ... ಫುಡ್ ಪಾಯ್ಸನ್ ನಿಂದ ಇಲಿ ಸತ್ತೋಗುತ್ತೆ.

5. ಪೀಜ್ಜ ಹಟ್ ನಿಂದ ಅದಕ್ಕೆ ಪೀಜ್ಜ ತಂದು ತಿನ್ನಿಸಿ, ಆಮೇಲೆ ಪೆಪ್ಸೀ ಕುಡಿಸಿ.. ಇಂಥದನ್ನೆಲ್ಲ ತಿಂದ ಮೇಲೂ ಬದುಕಿರಾ ಬೇಕಾ? ಅಂತ ಯೋಚಿಸುತ್ತೆ..

6. ಇಲಿನ ಟೆರೇಸ್ ತನಕ ಒಡಿಸಿ ಕೊಂಡು ಹೋಗಿ.. ಆಮೇಲೆ ಅದಕ್ಕೆ ಮುಂದೆ ಒಡೊಕೆ ತೋಚದೆ.. ಮೇಲಿಂದ ಬಿದ್ದು ಸತ್ತೋಗುತ್ತೆ. ( ನ್ಯಾಚುರಲ್ ಡೆತ್!! )

7. ಇಲಿಗೆ ಬಿಸಿ ಬಿಸಿ ಕಾಫೀ ಕುಡಿಸಿ, ಅದರ ಬಾಯೀ ಸುಟ್ಟು ಹೋಗಿ, ಬಕ್ಕೆ ಆಗಿ, ತಿನ್ನೋಕೆ ಆಗದೇ.. ಹಸಿವಿನಿಂದ ಸಾಯುತ್ತೆ.

8. ಒಂದು ಗಂಡು / ಹೆಣ್ಣು ಇಲಿ ನ ಹುಡುಕಿ ಅದಕ್ಕೆ ಮದುವೆ ಮಾಡಿ ಬಿಡಿ. ಸಂಸಾರ ತಪತ್ರಯ ತಡೆಯೋಕೆ ಆಗದೇ ಇಲಿ ಸತ್ತೋಗುತ್ತೆ.

9. ಇಲಿನ ನಿಮ್ ಆಫೀಸ್ ಗೆ ಕೆಲ್ಸಕ್ಕೆ ತಗೊಳಿ. ನಿಮ್ ಮ್ಯಾನೇಜರ್ ಕಾಟ ತಡೆಯೋಕೆ ಆಗದೇ ಇಲಿ ಸತ್ತೋಗುತ್ತೆ. (ಆಫೀಸ್ ಪ್ರೆಶರ್).

10.ಇಲಿನ ವಿಪ್ರೊ, ಸೆಪೀಯೆಂಟ್, ಸತ್ಯಂ, TCS , ಮುಂತಾದ ಕಡೆ ಕೆಲ್ಸಕ್ಕೆ ಹಾಕಿ, ಜಾಬ್ ಇನ್‌ಸೆಕ್ಯೂರಿಟೀ ಇಂದ ಇಲಿ ದೇವರ ಪಾದ ಸೇರುತ್ತೆ.

11. ಇಲಿನ ಸಾಫ್ಟ್‌ವೇರ್ ಕಂಪನೀ ಗೆ ಸೇರಿಸಿ, ಅಲ್ಲಿನ BD ಅದನ್ನ ಕ್ಲೈಂಟ್ ಹತ್ತಿರ ಹುಲಿ ಅಂತ ಹೇಳ್ತಾನೇ, PM ಅದನ್ನ ನಾಯಿ ಅಂತ ಅಂದುಕೋತಾನೆ, TL ಕೆಲ್ಸಾ ಬರದೇ ಇರೋ ಗೂಬೆ ಅಂತ ಅಂದುಕೋ ತಾನೆ. ಇಲಿಗೆ ತಾನು ಇಲಿನೊ, ಗೂಬೆನೊ.. ಏನು ಗೊತ್ತಾಗದೇ ಕನ್ಫ್ಯೂಸ್ ಆಗಿ, ಮೆಂಟ್ಲೂ ಆಗಿ........

12. ಆದ್ರೂ ಸಾಯಲಿಲ್ಲ ಅಂದ್ರೆ ಇಲಿಗೆ ಆನ್‌ಸೈಟ್ ಕಳಿಸ್ತೀವಿ ಅಂತ ಹೇಳಿ.... ಅದು ಕಾದು ಕಾದು ಕಾದು.............

13. ಇಷ್ಟೆಲ್ಲಾ ಮಾಡಿನು ಇಲಿ ಸಾಯಲಿಲ್ಲ ಅಂದ್ರೆ ಇಲಿಗೆ ಚೆನ್ನಾಗಿ ಕಚಗುಲಿ ಕೊಡಿ, ಇಲಿ ಕುಶಿ ಆಗಿ ನಗುತ್ತಾ ಇರಬೇಕಾದ್ರೆ ಅದರ ಬಾಯೀ ಒಳಗೆ ನಿದ್ದೆ ಮಾತ್ರೆ ಹಾಕಿ, ಅದು ತಿಂದೂ ನಿದ್ದೆ ಮಾಡಿದ ಮೇಲೆ ಅದನ್ನ ಒಂದು ಕಲ್ಲಿನ ಮೇಲೆ ಇತ್ತು, ತಲೆ ಮೇಲೆ ಇನ್ನೊಂದು ಕಲ್ಲು ಎತ್ತಕಿ ಸಾಯ್ಸಿ.