ಇಳೆಗಿಳಿದ ಮುಂಗಾರಿನ ಮೊದಲ ಮಳೆ

ಇಳೆಗಿಳಿದ ಮುಂಗಾರಿನ ಮೊದಲ ಮಳೆ

ಬರಹ

ಮಳೆ ಬಂತು ಮುಂಗಾರು ಮಳೆ ಬಂತು

ಇಳೆ ನೆನೆದು ಚೈತ್ರ ನಲಿಯಿತು

ಬಾನಿಂದ ಮಳೆ ಬಂತು ಭರಣಿ ಮಳೆ ಬಂತು

ಧರಣಿಯೊಡಲು ತಣಿಯಿತು "ಪ"

ಸರ್ವಜಿತುವಿನ ಮೊದಲ ಮಳೆ ಉತ್ಸವಕ್ಕೆ

ಗಂಟೆ ಗಟ್ಟಲೆ ಹಚ್ಚಿದ ಗುಡುಗು ಸಿಡಿಲಿನ ಮದ್ದುಗುಂಡು

ಮಿಂಚಿನ ಮತಾಪು ಕಡ್ಡಿಯ ಸುಸ್ವಾಗತ ಮಳೆಗೆ "ಮಳೆ"

ವರ್ಷದಾದಿಯ ಮೊದಲ ದೀಪಾವಳಿಯಾಯ್ತು

ಭರಣಿಯು ಧರಣಿಯ ತಣಿಸಿದಂದು

ಸರ್ವಜಿತುವಿನ ಮುಂಗಾರಿನ ಮಳೆಯಾಯ್ತು "ಮಳೆ"

ಧರೆಯ ಮರಗಿಡ ಹಸಿರಿನಿಂದ ನಳ ನಳಿಸುತ್ತಿದೆ

ಮಾಮರದಿ ಕೋಗಿಲೆ ಇಂಚರದಿ ಕೂಗಿದೆ 

ಹೊ(ಓ)ಣಗಿದ್ದ ಬಯಲಲ್ಲಿ ಹಸಿರ ಚಿಗುರು ಕಾಣುತಿದೆ "ಮಳೆ"

ನೊಂದ ರೈತ ಮನಕೆ ಸಣ್ಣ ಬರವಸೆ ಮೂಡಿದೆ

ಧರಣಿಗೆ ಭರಣಿಯು ಬಿದ್ದರೆ ಸಂಮೃದ್ದಿ ಎಂಬ

ನಾಣ್ನುಡಿಯ ಬರವಸೆಯಲಿ ಮನ ನಂಬಿದೆ  "ಮಳೆ"

ಮುಂಗಾರಿನ ಮಳೆ ಇಳೆಗಾಗಿದೆ ಎಲ್ಲ ಮನಕೆ

ಬರವಸೆಯ ಮೇಣದ ಬತ್ತಿ ಹತ್ತಿಸಿದೆ

-ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ