ಇವರಲ್ಲಿ ಯಾರು ನೀವು?

ಇವರಲ್ಲಿ ಯಾರು ನೀವು?

ಕವನ

ಮರೆತಿರುವಿರಾ ನೀವು ನನ್ನ

ಮರೆಯಲು ಏನಿರಬಹುದು ಕಾರಣ

 

ಸ್ನೇಹವನ್ನು ನೀಡಿದವರು ನೀವು

ಪ್ರೀತಿಯನ್ನು ತೋರಿದವರು ನೀವು

ಧೈರ್ಯವನ್ನು ತುಂಬಿದವರು ನೀವು

ಗುರಿಯನ್ನು ತಲುಪಿಸಿದವರು ನೀವು

!!ಮರೆತಿರುವಿರಾ ನೀವು ನನ್ನ!

 

ಅಣ್ಣ ಎಂದವರು ನೀವು

ಹರಸಿ ಹಾರೈಸಿದವರು ನೀವು

ಸಲಹೆ ನೀಡಿದವರು ನೀವು

ಸಹಕಾರ ನೀಡಿದವರು ನೀವು

!!ಮರೆತಿರುವಿರಾ ನೀವು ನನ್ನ!!

 

ಗುರು ಎಂದವರು ನೀವು

ಕಲಿತು ಹೋದವರು ನೀವು

ಕಲಿಸಿ ಕೊಟ್ಟವರು ನೀವು

ಜ್ಞಾನದ ಮಹತ್ವ ತಿಳಿಸಿದವರು ನೀವು

!!ಮರೆತಿರುವಿರಾ ನೀವು ನನ್ನ!!

 

ಸಂಬಧವನ್ನು ಹೇಳಿದವರು ನೀವು

ಸಂಕಟವನ್ನು ಪಟ್ಟವರು ನೀವು

ಬಾಂಧವ್ಯವನ್ನು ಬೆಸೆದವರು ನೀವು

ಸಂಭ್ರಮವನ್ನು ಪಡುವವರು ನೀವು

!!ಮರೆತಿರುವಿರಾ ನೀವು ನನ್ನ!!

 

ಅನ್ನವನ್ನು ನೀಡಿದವರು ನೀವು

ಹಂಗಿಲ್ಲದೆ ಇದ್ದವರು ನೀವು

ನಿಂದಿಸಿ ನಗುವವರು ನೀವು

ವಂದಿಸಿ ನಡೆದವರು ನೀವು

!!ಮರೆತಿರುವಿರಾ ನೀವು ನನ್ನ!!

 

-ತುಂಬೇನಹಳ್ಳಿ ಕಿರಣ್ ರಾಜು ಎನ್

 

ಚಿತ್ರ್