ಇವರಿಗೆ 'ಮತಾಂತರ'ಪದದ ಅರ್ಥವಾದರೂ ತಿಳಿದಿದೆಯೇ...?
ಇವರಿಗೆ'ಮತಾಂತರ'ಪದದ ಅರ್ಥವಾದರು ತಿಳಿದಿದೆಯೇ..?
ವ್ಯಕ್ತಿಯೊಬ್ಬ ತಾನು ಹುಟ್ಟಿದ ಧರ್ಮದಿಂದ ತನ್ನದಲ್ಲದ ಮತ್ತೊಂದು ಧರ್ಮಕ್ಕೆ ಸ್ವ ಇಚ್ಛೆಯಿಂದ ಹೋದರೆ ಅದು 'ಮತಾಂತರ'.ಕುತ್ತಿಗೆಯ ಹತ್ತಿರ ಖಡ್ಗ ಹಿಡಿದು ನಮ್ಮ ಧರ್ಮಕ್ಕೆ ಬಾ,ಇಲ್ಲವಾದರೆ ನಿನ್ನ ರುಂಡ-ಮುಂಡ ಬೇರೆಬೇರೆ ಮಾಡುತ್ತೇನೆ ಅಂತ ಹೆದರಿಸಿ ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುವುದು 'ಬಲವಂತದ ಮತಾಂತರ'.ನಮ್ಮ ಧರ್ಮಕ್ಕೆ ಬನ್ನಿ ನೀವು ರಾತ್ರಿ ಬೆಳಗಾಗುವುದರೊಳಗೆ ನಿಮ್ಮ ಕಷ್ಟಕಾರ್ಪಣ್ಯಗಳಿಂದ ಮೇಲೆದ್ದು ಬರುತ್ತೀರಿ ಅಂತ ಆಸೆ ತೋರಿಸಿ,ಕನಸುಗಳನ್ನು ಮಾರಿ ಧರ್ಮಾಂತರ ಮಾಡಿಸೋದು 'ಆಮಿಷದ ಮತಾಂತರ'.ಈ ಮೇಲಿನೆರಡು ಕಾರಣಗಳಿಂದ ವ್ಯಕ್ತಿಯೊಬ್ಬ ತನ್ನ ಮಾತೃಧರ್ಮವನ್ನು ಬಿಟ್ಟು ಅನ್ಯಧರ್ಮಕ್ಕೆ ಮತಾಂತರವಾಗಿ ಮತ್ತೆ ಅವನು ಸ್ವ ಇಚ್ಛೆಯಿಂದ ಮೂಲ ಧರ್ಮಕ್ಕೆ ಬಂದರೆ ಅದು ಮತಾಂತರ ಹೇಗಾಗುತ್ತದೆ ಸ್ವಾಮಿ. .?ಅದು ಶುದ್ಧೀಕರಣ.ಬಟಾಟೆಯೊಂದಕ್ಕೆ ದೇವರ ನೀರು ಚಿಮುಕಿಸಿದ ಕೂಡಲೆ ಅದು ಚಿಕನ್ ಆಗುತ್ತದೆಯೇ. ? ಅಥವಾ ಬಟಾಟೆಯ ತುದಿಯೊಂದನ್ನು ಕತ್ತರಿಸಿ ಅದರ ಮೇಲೊಂದು ಟೋಪಿ ಇಟ್ಟ ಕೂಡಲೇ ಅದು ಚಿಕನ್ ಆಗಲು ಸಾಧ್ಯವಿದೆಯೇ..? ಇಲ್ಲಾ.ಅದೇನೇ ಮಾಡಿದರು ಬಟಾಟೆ ಬಟಾಟೆಯಾಗಿಯೇ ಉಳಿಯುತ್ತದೆ.ಈ ದೇಶದಲ್ಲಿರುವ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಗಳು ಧರ್ಮ ಆಚರಣೆಯಲ್ಲಿ ಭಿನ್ನರಾಗಿರಬಹುದು ಅವರ ವಂಶವಾಹಿ ಹಿಂದುಗಳದ್ದು.ಇದನ್ನು ಸುಬ್ರಹ್ಮಣ್ಯ ಸ್ವಾಮಿಯವರು ವೈಜ್ಞಾನಿಕವಾಗಿ ದಾಖಲೆ ಸಮೇತ ಸಾಬೀತು ಮಾಡಿದ್ದಾರೆ.ಇತ್ತೀಚೆಗೆ ಆಗ್ರಾದಲ್ಲಿ ಕೆಲ ಮುಸ್ಲಿಂ ಕುಟುಂಬಗಳು ಮಾತೃ ಧರ್ಮಕ್ಕೆ ಮರಳಿದಾಗ ಅದನ್ನು ಬಲವಂತದ ಮತಾಂತರ,ಧಾರ್ಮಿಕ ಷಡ್ಯಂತ್ರವೆಂದು ಕರೆಯಲಾಯಿತು.ಕೆಲ ಮುಸ್ಲಿಂ ಬಾಂಧವರು ಇದರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದರು.ಆಶ್ಚರ್ಯವೆಂದರೆ..ಇರಾಕ್, ಪಾಕಿಸ್ತಾನ, ಸಿರಿಯಾ, ಲಿಬಿಯ ಅಷ್ಟೇ ಏಕೆ ಭಾರತದಲ್ಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ ನಡೆಯುವ ಬಲವಂತದ ಮತಾಂತರ ಇವರ ಕಣ್ಣಿಗೆ ಇದುವರೆಗೆ ಕಾಣಿಸದಿರುವುದು.ಇಷ್ಟು ದಿನ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದ್ದ ಪ್ರಗತಿಪರರು ಈಗ ಹಿಂದೂಗಳು ಮತಾಂತರ ಮಾಡುತ್ತಿದ್ದಾರೆ ಅಂತ ಬಾಯಿಬಾಯಿ ಬಡ್ಕೊತ್ತಿದ್ದಾರೆ.ವಿರೋಧಿಸುವುದಾದರೆ ಎಲ್ಲಾ ರೀತಿಯ ಮತಾಂತರವನ್ನು ವಿರೋಧಿಸಿ.ಆದಕ್ಕು ಮೊದಲು ಮತಾಂತರ ಯಾವುದೂ ಶುದ್ಧೀಕರಣ ಯಾವುದೂ ಅಂತ ತಿಳಿದುಕೊಳ್ಳಿ.
-@ಯೆಸ್ಕೆ
Comments
ಉ: ಇವರಿಗೆ 'ಮತಾಂತರ'ಪದದ ಅರ್ಥವಾದರೂ ತಿಳಿದಿದೆಯೇ...?
ಸರಿಯಾದ ವಿಶ್ಲೇಷಣೆ.
In reply to ಉ: ಇವರಿಗೆ 'ಮತಾಂತರ'ಪದದ ಅರ್ಥವಾದರೂ ತಿಳಿದಿದೆಯೇ...? by kavinagaraj
ಉ: ಇವರಿಗೆ 'ಮತಾಂತರ'ಪದದ ಅರ್ಥವಾದರೂ ತಿಳಿದಿದೆಯೇ...?
ಧನ್ಯವಾದಗಳು ಕವೀಜಿ