ಇವರೇಕೆ ಹೀಗೆ ??

ಇವರೇಕೆ ಹೀಗೆ ??

ಕವನ

ಬಿಟ್ಟರೆ ಇವರನ್ನು ಅವರ‌ ಅವರ‌ ಪಾಡಿಗೆ
ಇವರ‌ ಮನಸ್ಸು , ಮಾತು ಬೆಣ್ಣೆಯ‌ ಗಡಿಗೆ
ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ
ಮತ್ತು ಒಪ್ಪದೆ ನೊಡಿ , ಅವ್ರ‌ ಇಷ್ಟ‌ , ಬೇಡಿಕೆಗಳಿಗೆ
ಆಗ‌ ಮುಖಗಳಾಗುವವು ಕಾರದ‌ ಸ೦ಡಿಗೆ .
ಎಷ್ಟೇಳಿದರು ಸ್ವಲ್ಪ‌ ಕೂಡ‌ ತಲುಪುವುದಿಲ್ಲ‌ ಇವರ‌ ಮ೦ಡೆಗೆ
ಹೀಗಿರುವಾಗ‌ ಬುದ್ದಿ ಹೇಳಿ ವ್ಯರ್ತಮಾಡುವುದೇಕೆ ನಮ್ಮ‌ ಗಳಿಗೆ,
ಮುನಿಸಿಕೊಳ್ಳಬೇಡಿ ಇ೦ಥವರ‌ ಕೋಪ‌ ತಾಪಗಳಿಗೆ
ಇ೦ತಿದ್ದು ನೋಡಿ ಸ೦ಭ೦ದ‌ ರುಚಿಯಾದ‌ ಹೋಳಿಗೆ :)
ಆದರೂ ‍____ ಇವರೇಕೆ ಹೀಗೆ????????????

ಚಿತ್ರ್