ಇವಳೇನಾ ?

ಇವಳೇನಾ ?

ಬರಹ

ಇವಳೇನಾ ?

ಪಕ್ಕದ ಬೀದಿಯಲಿ ನನ್ನ ನೋಡಿ
ನಸು ನಕ್ಕ ಚೆಲುವೆ ಇವಳೇನಾ? ||

ಮುಡಿಯ ತುಂಬೆಲ್ಲ ಹೂವ ಮುಡಿದು
ಹಣೆಯಲಿ ರಾರಾಜಿಪ ಕುಂಕುಮವ ಧರಿಸಿ
ಗೆಜ್ಜೆಯ ದನಿಯಲಿ ನಾಚಿ ನನ್ನಾ ಮಾತನಾಡಿಸಿದ
ಸುಮತಿ ಸೌಂದರ್ಯವತಿ ಇವಳೇನಾ? ||
ಕಣ್ಣಂಚಿನ ಪ್ರೀತಿಯಲಿ ನನ್ನಾ ಸೆಳೆದು
ಪ್ರೀತಿಯ ರಾಗವನೆ ಹಾಡಿ ನೀಳ ಕೇಶ
ರಾಶಿಯಲಿ ಪ್ರೀತಿಯನೆ ಹರಿಸಿ ಪ್ರೇಮ
ಸಾಗರದಲಿ ನನ್ನಾ ತೇಲಿಸಿದ ಗುಣವತಿ ಸಾವಿತ್ರಿ ಇವಳೇನಾ? ||
ಮಲ್ಲಿಗೆಯಂತಹ ನಗುವ ನನ್ನೆಡೆಗೆ ಚೆಲ್ಲಿ
ಮುಂಗುರುಳ ಬಲೆಯಲ್ಲಿ ನನ್ನ ಸೆಳೆದು
ಪ್ರೀತಿಯ ಜಾಲದಲಿ ನನ್ನ ಸೆಳೆದು
ಪ್ರೀತಿಯ ಮಾಯಾ ಜಲದಲಿ ಸಿಲುಕಿಸಿದಾ ಹುಡುಗಿ
ನಾ ಮೆಚ್ಚಿ ವರಿಸಿದಾ ಮಧುಮತಿ ನೀನೇನಾ? ||