ಇಷ್ಟಾದ ಮೇಲು ನಾವು ಹುಡುಕಿ ಅರಿಯ ಬೇಕಾದ್ದು ಶೂನ್ಯವನ್ನು ಮುಟ್ಟುವುದು ಹೇಗೆ ಯೆಂದು ?
ನಾ ಕಂಡ ಜೀವನ ಸಾರ ಹೀಗಿದೆ ನೋಡಿ
ಜೀವನದಲ್ಲಿ ಯಾರು ಕೂಡ ಬಂದುಗಳಲ್ಲ
ನಾವು ಕೂಡ ಯಾರಿಗೂ ಬೇಕಾದವರಲ್ಲ
ಆದರು ಕೂಡ ಬದುಕೊ ಆಸೆ ನಾವು ಬಿಡೋದಿಲ್ಲ
ಹುಟ್ಟಿದ ಮೇಲೆ ಬದುಕಬೇಕು ಬದುಕಿದ್ದೀವಿ
ಹುಟ್ಟಿದ ಮೇಲೆ ಸಾಯಲೇ ಬೇಕು ಸಾಯುತ್ತಿವಿ
ಹುಟ್ಟು ಸಾವಿನ ನಡುವೆ ಎಷ್ಟು ದಿವಸ ಅಂತ ಗೊತ್ತಿಲ್ಲ ಆದರು ಇದ್ದಿವಿ
ಸಾವದಮೇಲೆ ಎಲ್ಲಿ ಜೀವನ ಹುಡುಕುತ್ತಿದ್ದಿವಿ.
ನಾನು ನಾನಾದರೂ ಕಷ್ಟ ನೀವು ಏನಾದರು ಕಷ್ಟ
ಬದುಕು ಹಸನಾದರು ನೋಡುವವರಿಗೆ ಕಷ್ಟ
ಜೊತೆಯಲ್ಲಿ ಬರುವವರ ನಂಬುವುದು ಕಷ್ಟ
ನಾವು ಬಯೋಸೋದು ಯಾವುದು ನಡೆಯದಿರೆ ಇದು ಯಾರ ಇಷ್ಟ .
ದೇವನಿದ್ದಾನೆಂದರೆ ಎಲ್ಲಿ ಎಂಬ ಪ್ರಶ್ನೆ
ಎಲ್ಲೆಲ್ಲು ಎಂದರೆ ಏನು ಮಾಡುತ್ತಿರುವನೋ ಎಂಬ ಪ್ರಶ್ನೆ
ನೋಡುತ್ತಿದ್ದಾನೆ ಎಂದರೆ ಅವನೇಕೆ ಎಂಬ ಪ್ರಶ್ನೆ
ನಿನನ್ನು ಕಾಡುತ್ತಾನೆಂದರೆ ಅವ ನಿಜ ದೇವರೇ ಎಂಬ ಪ್ರಶ್ನೆ .
ಜೀವನದಲ್ಲಿ ನಾವು ಏನೋ ಸಾದಿಸುವ ಹಂಬಲ
ಏನು ಎಂದು ಹುಡಿಕಿದರೆ ಏನಿರಬಹುದೆಂಬ ಕುತೂಹಲ
ಹುಡುಕಿದ್ದು ಸಿಕ್ಕರೆ ಸಾದಿಸೆಯೇ ತೋರುವ ಛಲ
ಇಷ್ಟೆಲ್ಲ ಆದ ಮೇಲೆ ಮತ್ತೆ ತಿರುಗಿ ನೋಡಿದರೆ ಶೂನ್ಯವೆಂಬ ಫಲ.