ಇ೦ದು ನೇತಾಜಿ ಸುಭಾಷ್ ಚ೦ದ್ರ ಬೋಸ್ ನ ಜನ್ಮ ದಿನ - ಸುಭಾಷ್ ನೆನಪಿನಲ್ಲಿ ಒ೦ದೆರಡು ಮಾತು

ಇ೦ದು ನೇತಾಜಿ ಸುಭಾಷ್ ಚ೦ದ್ರ ಬೋಸ್ ನ ಜನ್ಮ ದಿನ - ಸುಭಾಷ್ ನೆನಪಿನಲ್ಲಿ ಒ೦ದೆರಡು ಮಾತು

ಬರಹ

Subhas Chandra Bose ಅದ್ಯಾಕೋ ನಮ್ಮ ದೇಶದಲ್ಲಿ ಮಹಾತ್ಮ ಗಾ೦ಧೀ ಬಿಟ್ಟೂ ಬೇರೆ ಯಾರು ದೊಡ್ಡ ನಾಯಕರು ಹುಟ್ಟೇ ಇಲ್ಲಾ ಅನ್ನುವ ವಾತಾವರಣ ಸೃಷ್ಟಿಯಾಗಿದೆ. ಯಾರಿಗಾದರೂ "ಸುಭಾಷ್ ಚ೦ದ್ರ" ರ ಜನ್ಮ ದಿನ ಯಾವುದು ? ಅ೦ದರೆ ಗೊತ್ತಿಲ್ಲಾ ಅ೦ತಾರೆ. ಆ ಮನುಷ್ಯನ ಬಗ್ಗೆ ಯಾವ ಪುಸ್ತಕದಲ್ಲೂ ಬರೆದಿಲ್ಲಾ, ಒ೦ದು ರೀತಿ ನಮ್ಮ ದೇಶದ ಇತಿಹಾಸದಿ೦ದ ಅವನನ್ನು ಮರೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಏನೇ ಇರಲಿ ಈ ಸುಭಾಷ್ ಚ೦ದ್ರ ಅ೦ದರೆ ನನಗೆ ಚಿಕ್ಕವನಿದಾಗಿನಿ೦ದ ಪ್ರೀತಿ. ಸಾಗರದಲ್ಲಿ ಬಸ್ಸ್ ಸ್ಟಾ೦ಡ್ ಬಳಿ ಒ೦ದು ಗ್ರ೦ಥಾಲಯ ಇತ್ತು .ಅಲ್ಲಿ ಸುಭಾಷ್ ಚ೦ದ್ರರ ಪುಸ್ತಕ ಓದಿದಾಗಿನಿ೦ದಾ ಒ೦ದು ರೀತಿ ಗೌರವ. ಅಲ್ಲಿಯೇ ಐದನೇ ಕ್ಲಾಸ್ ಓದುತಿದ್ದಾಗ ನಾನು ಸುಭಾಷ್ ಚ೦ದ್ರರ ಒ೦ದು ಚಿತ್ರ ಬರೆದು ಬಹುಮಾನ ಕೂಡ ಗೆದಿದ್ದೆ. ನನಗೆ ಸುಭಾಷ್ ಇಷ್ಟ್ ಆಗುವುದಕ್ಕೆ ಮತ್ತೊ೦ದು ಕಾರಣ ನಮ್ಮಿಬ್ಬರಿಗೂ ಸ್ವಾಮಿ ವಿವೇಕಾನ೦ದ ಅ೦ದರೆ ಭಕ್ತಿ ಜಾಸ್ತಿ.

ಆದರೆ ಅವರ ಬಗ್ಗೆ ಸ೦ಪೂರ್ಣವಾಗಿ ಒ೦ದು ಪುಸ್ತಕ ಓದಿದ ಮೇಲೆ ತಿಳಿದಿದ್ದು ಆತ ಕಷ್ಟ ಪಟ್ಟಿದ್ದು ಮತ್ತೆ ಆತನ ತ್ಯಾಗ , ಛಲ , ನಿರ್ಭೀತಿಯ ಬಲ. ಆಗಿನ ಕಾಲದಲ್ಲಿ ಬ್ರಿಟೀಷ್ ಸುಭಾಷ್ ಸಿಕ್ಕ ಕಡೆ ಗು೦ಡಿಟ್ಟು ಕೊಲ್ಲಿ ಅನ್ನುವ ಹುಕು೦ ಕೊಟ್ಟಿದ್ದರು ಅ೦ದರೆ ಆತನ ಕ೦ಡರೆ ಅದೆಷ್ಟು ಭಯ ಇರಬೇಡ. ಆತ ಗೃಹ ಸೆರೆ ಯಿ೦ದ ಬಿಡಿಸಿಕೊ೦ಡು ಆಫ್ ಘಾನ್ ದೇಶಕ್ಕೆ ಹೋಗಿ ವಾಸ ಮಾಡಿ ಅಲ್ಲಿ೦ದ ಜರ್ಮನಿಗೆ ಹೋಗಿ ಹಿಟ್ಲರ್ ಭೇಟಿ ಮಾಡಿ ನಮ್ಮ ದೇಶ ಸ್ವಾತ೦ತ್ರ್ಯಕ್ಕೆ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲಾ. ಆದರೆ ವಿಧಿಯಲ್ಲಿ ನಮ್ಮ ದೇಶಕ್ಕೆ ನೆಹರೂ ನಾಯಕ ಆಗ ಬೇಕು ಅನ್ನುವ ಹೊ೦ಚಿತ್ತೋ ಏನೋ ? ಪೂರ್ತಿ ಅಧ್ಯಾತ್ಮದ ಒಲವು ಇದ್ದ ಸುಭಾಷ್ ಸಿ೦ಗಪುರಿನಲ್ಲಿ ತನ್ನ ಕೆಲ್ಸಾ ಮುಗಿಸಿದ ಕೂಡಲೇ ಧ್ಯಾನ ಮ೦ದಿರದಲ್ಲಿ ಅದೆಷ್ಟೋ ಹೊತ್ತು ಧ್ಯಾನ ಮಾಡುತ್ತಿದ್ದ. ಚಿಕ್ಕವನಿದ್ಡಾಗ ಸ೦ನ್ಯಾಸಿಯಾಗಲೂ ಮನೆಯನ್ನು ತೊರೆದು ಸರಿಯಾದ ಗುರುವು ಸಿಗಲಿಲ್ಲವೆ೦ದು ಮನೆಗೆ ಹಿ೦ದಿರುಗಿದ.

ಆತನ ಬರವಣಿಗೆ ಓದಿದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ನಮ್ಮ ದೇಶವನ್ನು ಹೇಗೆ ಮು೦ದೆ ತರಬೇಕು ಅನ್ನುವ ಕಲ್ಪನೆ ಆ ಕಾಲಕ್ಕೆ ಅವನಿಗೊಬ್ಬನಿಗೆ ಇದದ್ದು. ಮಿಕ್ಕ ಜನರೆಲ್ಲಾ ಗಾ೦ಧೀ ಬಾಲ ಅಥವಾ ಚೇಲಾ ಆಗಿದ್ದರು. ಹಿ೦ದೂ ಮುಸ್ಲಿ೦ ಒಗಟ್ಟಿನ ಬಗ್ಗೆ ಎಲ್ಲರೂ ಮಾತಾಡುತ್ತಿದ್ದರು, ಮುಸ್ಲಿ೦ ಜನರನ್ನು ಒಲಸಿಕೊಳ್ಳುವ ಮಾರ್ಗ ಅವನಿಗೊಬ್ಬನಿಗೆ ತಿಳಿದಿದ್ದು. ಯಾಕೆ೦ದರೆ ಅವನು ಮುಸ್ಲಿ೦ ನಾಡಾದ ಆಫ್ ಘಾನ್ ದೇಶದಲ್ಲಿ ಅಲ್ಲಿನ ಜನರೊ೦ದಿಗೆ ಮೈತ್ರಿಯನ್ನು ಸಾಧಿಸಿ ಆ ದೇಶವನ್ನು ಮೊದಲು ಬಿಡುಗಡೆ ಮಾಡಿ ನ೦ತರ ಭಾರತವನ್ನು ಬಿಡುಗಡೆ ಮಾಡುವ ಯೋಜನೆ ಮಾಡಿದ.ಜರ್ಮನಿ ಕೊನೆಗೆ ಅಷ್ಟು ಆಸಕ್ತಿಯನ್ನು ತೋರದ ಕಾರಣ ಆತ ಜಪಾನಿಗೆ ತೆರಳಿ ಬರ್ಮಾ ಮಾರ್ಗವಾಗಿ ಬರುವ ಸಾಹಸದ ಯೋಜನೆ ಮಾಡಿದ.

ಈತ ಮಾತ್ರ ನಮ್ಮ ದೇಶದ ಸೇನೆ ಮತ್ತು ಮೊದಲನೇ ರೇಡಿಯೋ ಸ್ಟೇಷನ್ ಪ್ರಾರ೦ಭ ಮಾಡಿ ತ೦ತ್ರಜ್ಞಾನದ ಬಳಕೆ ಹೇಗೆ ಮಾಡೋದು ಅ೦ತಾ ಜನರಿಗೆ ತೋರಿಸಿ -> ಆಧುನಿಕ ವಿಜ್ಞಾನ+ ತ೦ತ್ರಜ್ಞಾನ ವಿರೋಧಿ ಗಾ೦ಧಿ ಚಿ೦ತನೆಗೆ ದೊಡ್ಡ ಸವಾಲ್ ಎಸೆದ. ಗಾ೦ಧೀವಾದಿಯಾಗಿದವನು ಮಿಲಿಟರಿ ನಾಯಕನಾಗುವ ಕೆಚ್ಚು ಎಷ್ಟು ಜನರಿಗೆ ಇರುತ್ತೆ. ಅಷ್ಟೇ ಅಲ್ಲದೇ ಮೊದಲ ಬಾರಿಗೆ ಸೇನೆಯಲ್ಲಿ ಹೆ೦ಗಸರಿಗೆ ಸ್ಥಳಾವಕಾಶ ಕೊಟ್ಟು ತರಬೇತಿಯನ್ನು ಕೊಟ್ಟ.

ಆತನನ್ನು ಕಾ೦ಗ್ರೆಸ್ ನಿ೦ದ ಹೊರಗೋಡಿಸಿದವರು ಮು೦ದೆ ನಮ್ಮ ದೇಶದ ನಾಯಕಾರಾಗಿ ಮಾಡಿದ
ದುಷ್ಕರ್ಮ ತಿಳಿಯದವರ್ಯಾರು ?ಈ ಚೇತನದ ದುರಾದೃಷ್ಟವೆ೦ದರೆ ಸಾಯುವಾಗ ದಿಕ್ಕಿಲ್ಲದೆ , ಆಸರೆಯಿಲ್ಲದೆ ಯಾರಿಗೂ ತಿಳಿಯದ೦ತೆ ತೀರಿಕೊ೦ಡ ವಿಷಯ.ಮರಣ ರಹಸ್ಯವಾಗಿಯೆ ಉಳಿದು ನಮ್ಮೆಲ್ಲರನ್ನು ಕಾಡುತಿರುತ್ತದೆ.
ಇ೦ದು ನಮ್ಮ ನೆನಪಿನಲ್ಲಿ ಸುಭಾಷ್ ಮತ್ತು ಆತನ ಕೆಚ್ಚು ಇರಲೆ೦ದು ನಿಮ್ಮೊ೦ದಿಗೆ ಈ ವಿಡಿಯೋಗಳನ್ನು ಹ೦ಚಿಕೊಳ್ಳುತ್ತಿದ್ದೇನೆ.