ಈಗೊಂದು ಕನಸು !!!
ಕಾಲಿಗೆ ಮುಳ್ಳು ಚುಚ್ಚಿದಂತೆ , ಇಕ್ಕಳಕ್ಕೆ ಸಿಗಿಸಿ ಎಳೆದು ತೆಗೆದೇ , ರಕ್ತ ಬಾರದು . ಚುಚ್ಚಿದಂತೆ ಚೂಪಾದ ನೋವು, ಮತ್ತೆ
ಬೆಳಕಿಗೆ ಕಾಲು ತೋರಿ ಮುಳ್ಳು ಹುಡುಕಿದೆ , ಹುಡುಕುತ್ತ , ಹುಡುಕುತ್ತ ಮೇಲೆ ಏರಿ ಎದೆಯ ತಲುಪಿದೆ ... ನೋವು ನಿಲ್ಲದು ..
ಎದೆಯ ತಲುಪಿದಂತೆ ಗೊಂದಲ , ಬರಿ ಕವಲುಗಳೇ ತುಂಬಿದ ವ್ರತ್ತ !!
ಎಂತದ್ದೋ ಸದ್ದು ಎಚರಿಸಿದಂತೆ , ಭಯಕ್ಕೆ ಬಿದ್ದೆ , ಯಾವುದೋ ಒಂದು ದಾರಿ ಇಡಿದು ನಡೆಯಾರಮ್ಬಿಸಿದೆ ..
ಒಂದೇ ಸಮನೆ ಏರುತ್ತ ಸಾಗಿ ಏದುಸಿರು ಬಿಡುತ್ತ ಬಸವಳಿದೆ , ನಂತರ ಮುಳ್ಳಿನದು ನೋವು ನೆನಪಾಯಿತು .. ಆದರೆ ಈಗ ಸಂಕಟ ಉಸಿರ ಮಟ್ಟಿಗೆ ಬಂತು ನಿಂತಿತ್ತು , ಎದೆಯ ಮುಳ್ಳು ಮೊಂಡಾಗಿ ನೋವ ನೀಡದು ..
ಅಯ್ಯೊ !! ಮುಳ್ಳ ಎದರಿಸಿ ಓಡ ನಿಂತು ದಾರಿ ತಪ್ಪಿ ಎತ್ತ ಸಿಲುಕಿದೆ , ಯೋಚಿಸಿ ನಿಂತೇ .. ಈಗ ಬೆಳಕು ಕಾಣದು , ಭೀತಿ
ನೆತ್ತಿ ಏರಿದಂತೆ , ಮತ್ತದೇ ಸದ್ಧು .. ಇಷ್ಟು ದೂರ ನಡೆವಾಗ ಯಾರೋ ಜೊತೆ ಇದ್ದದು ಈಗ ಒಂಟಿಯಾದಂತೆ , ಸಣ್ಣಗೆ ನಡುಕ !
ಯಾರು ! ಯಾರು ಕಳೆದು ಹೋದದ್ದು ?? ನಾನೇ ಕೇಳಿ ಕೇಳಿ ದಣಿದೆ ..
ಕತ್ತಲಿಗೆ ಕಣ್ಣು ಕಟ್ಟಿದಂತೆ , ನಿಶಬ್ದ ಶುರುವಾಯಿತು ..
ದಿಕ್ಕು , ದೆಸೆ ಏನು ಕಾಣದು ಕಾಲುಗಳ ಹೆಜ್ಜೆಯ ಮಾಪನ ಕಷ್ಟ ಸಾದ್ಯ ..
ಬೆಳಕ್ಕಿದರಷ್ಟೇ ಅಳತೆ, ಕತ್ತಲಿಗಾವ ದಿಕ್ಕು ??ಯಾವ ದಾರಿ ?? ಬೆಳಕು ನೀಡುವ ದ್ವಂದ್ವಗಳು ಇದಾವುದೋ ಶಾಶ್ವತ ಕತ್ತಲಲ್ಲಿ ಕಳೆದು ಹೋಗಿವೆ .. ಕತ್ತಲಿಗೆ ಎಲ್ಲ ಸಮನಾಗಿಸುವ ಕಲೆ ಹೇಗೆ ಸಿದ್ದಿಸಿತೊ ?? ಎಲ್ಲವು , ಎಲ್ಲರು ಕಪ್ಪು ..
ಹೀಗೆ ಉಸಿರ ಸದ್ದು ಮಾತ್ರ ಕೇಳುವ ದಾರಿಯಲ್ಲಿ (ಮತ್ತಾವ ಮೈಲಿಗಲ್ಲು ಕಾಣದಿಲ್ಲಿ !!) ನಡೆದು , ನಡೆದ ದಣಿವ ಊಹಿಸಲು
ಆಗದ ಅನಿವಾರ್ಯವಾಗಿ ಕಣ್ಣ ರೆಪ್ಪೆಯು ಮುಚಿದೆಯೊ , ತೆರೆದಿದೆಯೋ ಎಂದು ಅರಿಯಲಾಗದೆ ನಡೆವಾಗ , ಹಿಂದೆ ಯಾರೋ ಕಂಡಂತಾಗಿ ದಿಕ್ಕು ಬದಲಿಸಿ ನೋಡಲು ಕಳೆದ ಸಂಗಾತಿ ಸಿಕ್ಕಂತಿತು ..
ಅಲ್ಲಿಗೆ ಬೆಳಕು ಹರಿದು ದಾರಿ ಸಣ್ಣಗೆ ತನ್ನ ಮುದ್ರೆಯನ್ನು ಸಣ್ಣಗೆ ಭೂಮಿಗೆ ತಲುಪಿಸಿತ್ತು , ನನ್ನ ಸಂಗಾತಿ, ನನ್ನ ನೆರೆಳು !!
ಜೀವಕಂಟಿ ಬರಲು , ಒಂಟಿನಕ್ಕೆ ಸಾಂತ್ವಾನ ಮನದ ಒಳಗಿನ ದೊರೆಗೆ ಸಾದ್ಯ ಎನಿಸಿ ನಿಟ್ಟುಸಿರು ..!!!
Comments
ಉ: ಈಗೊಂದು ಕನಸು !!!
ಚೆನ್ನಾಗಿದೆ. ಇದು ಈಗ ಬಿದ್ದ ಕನಸೋ, ಹೀಗೆ ಬಿದ್ದ ಕನಸೋ? ಎರಡೂ ಹೊಂದುತ್ತದೆ.