ಈಗ ಹೇಗೆ ಬರೆದರು?

ಈಗ ಹೇಗೆ ಬರೆದರು?

ಕವನ

ಈಗ ಹೇಗೆ ಬರೆದರೂ ಸಾಹಿತ್ಯ;

ಒಗ್ಗರಣೆ ಹಾಕದಿದ್ದರೂ

ಸಾಂಬಾರು ಆಗುವ ಹಾಗೆ !

ಬರೆದದ್ದೇ ಕವನ, ಲೇಖನ !!

ಓದಿದ್ದೇ ವಾಚನ ಪ್ರವಚನ !!!

 

ಅವರ ಕಡೆ ಬೆರಳು ತೋರಿಸಿ

ಅವರೇ ಹಾಗೆಂದರು ಅದಕ್ಕೆ

ನಾನು ಹೀಗೆ ಬರೆದೆ ನಿಮ್ಮ ತಲೆ ಕೊರೆದೆ ! 

ಚರಂಡಿಯಲ್ಲಿ ನೀರು ಹೋಗುವ ಹಾಗೆ,

ಒಳ್ಳೆಯದೋ ಕೆಟ್ಟದ್ದೋ ಬರೆದು ,ಯಾರದೋ ಮುಖಕ್ಕೆ ಉಗಿದರೆ ?  ಏನಾಗುವುದೆಂದರೆ ?

ಮೇಲೆ ಉಗುಳಿದರೆ ತನ್ನ ಮುಖಕ್ಕೇ ಬೀಳುವುದೆಂಬ ಜ್ಞಾನವಿಲ್ಲದೆ?

 

ಊರು ಸುತ್ತುವುದಿಲ್ಲ, ಕೇಳಿ ಕಲಿಯುವುದಿಲ್ಲ

ನೋಡಿ ತಿಳಿದುಕೊಳ್ಳುವುದು ಇಲ್ಲವೇ ಇಲ್ಲ!

ನಾನು ಬರೆದಿರುವುದೇ ವೇದವಾಕ್ಯ

ಉಳಿದುದೆಲ್ಲವೂ ಮೃದು 

ವಾಕ್ಯವೆನ್ನುತ್ತಾ ವಾದವನು ಮಾಡಿ ನೋವ ಕೊಟ್ಟು ಸಾಗುವುದೆನ್ನುವವನಿಗೆ 

ಎಲ್ಲಿಲ್ಲದ ಖುಷಿಯಾದರೆ ಅದೇ ಇನ್ನೊಬ್ಬರಿಗೆ ಕಸಿವಿಸಿಯಾಗದಿರಲಿ!

-ಹಾ ಮ ಸತೀಶ

 

ಚಿತ್ರ್