ಈಟಿನ ಗಿಡ
ಕವನ
ಈಟಿನ ಗಿಡವಿದು ಚಂದದಿ ಚಿಗುರಿದೆ
ಸಾಟಿಯು ಇಲ್ಲದೆ ಸೊಗಸಾಗಿ
ತೋಟದಿ ಬೆಳೆಯುವ ಗಿಡಕಿದು ಪೋಷಣೆ
ಕಾಟವ ನೀಡದು ಕಳೆಯಾಗಿ
ಕೋಟೆಯ ಸುತ್ತಲು ಕೊಂಚವೆ ಮಣ್ಣಲಿ
ನಾಟಿದರಾಯಿತು ಬೆಳೆಯುವುದು
ಕೋಟೆಗೆ ಬೇಲಿಯ ರೂಪದಿ ಬೆಳೆದರೆ
ದಾಟಲು ಬಿಡದಿಹ ಭದ್ರತೆಯು
ಮಳೆಯಲಿ ದೊರೆಯುವ ನೀರನು ಬಳಸುತ
ಬೆಳೆವುದು ತಾನೇ ಚಂದದಲಿ
ಬೆಳೆಗಳ ಗಿಡಕಿದು ಉತ್ತಮ ಗೊಬ್ಬರ
ಕೊಳೆತಿಹ ಈ ಗಿಡದೆಲೆಗಳಲಿ
ಸಾಕುವ ಸಲಹುವ ಪ್ರೀತಿಯ ಬಯಸದು
ಸಾಕೆನುವಷ್ಟರ ಹಸಿರಿಹುದು
ಬೇಕಿಹ ಸತ್ವವ ತಾನೇ ಪಡೆವುದು
ಶೋಕವ ತೋರದು ಬಸವಳಿದು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್