ಈದ್ಗಾ ತೀರ್ಪು..ಒಂದು ಅನಿಸಿಕೆ
ಬಹಳ ಹಿಂದೇನಲ್ಲ ಈದಗಾ ಮೈದಾನದಲ್ಲಿ ಗಣಪತಿಕಳಿಸುವಾಗ ಸಾಮೂಹಿಕವಾಗಿ
ಪಟಾಕಿ ಹಾರಿಸುತ್ತಿದ್ದರು ರಾತ್ರಿಯಆಗಸದಲ್ಲಿ ಅವು ಮೂಡಿಸುತ್ತಿದ್ದ ಚಿತ್ತಾರಗಳು ನೋಡುವುದೇ ಚೆಂದ. ಅಂಜುಮನ್ ಸಂಸ್ಥೆಯಿಂದ ಅಲ್ಲಿ ಕಟ್ಟಡ ತಯಾರಿ ನಡೆದಾಗ ಹುಬ್ಬಳ್ಳಿ ಮಂದಿ ಎಚ್ಚರಾದ್ರು
ದುರ್ಗದಬೈಲಿನ ಶಾಹಬಜಾರಿನ ಉದಾಹರಣೆ ಇತ್ತಲ್ಲ ದಾವೆ ಹೂಡಲಾಯಿತು ಹುಬ್ಬಳ್ಳಿ ನ್ಯಾಯಾಲಯದಲ್ಲಿ ಪಾಲಿಕೆ ಪರ ತೀರ್ಪು ಸಿಕ್ಕಿತು ಅಂಜುಮನ್ ಅವರು ಮೇಲ್ಮನವಿ ಸಲ್ಲಿಸಿ ಹೈಕೋರ್ಟ ಗೆ ಹೋದರು. ಅಲ್ಲಿಯೂ ಅವರಿಗೆ ಮುಖಭಂಗ. ನಡುವೆಅಲ್ಲಿ ಧ್ವಜ ಹಾರಿಸಿಯೆ ತೀರೋದು ಇದು ಬಿಜೆಪಿಯ ಹುನ್ನಾರ ಆಗಸ್ಟ್ ೧೫ , ಜನೇವರಿ ಇಪ್ಪತ್ತಾರು ಹುಬ್ಬಳ್ಳಿ ಮಂದಿ ಕರ್ಫ್ಯೂ ಅನುಭವಿಸಿದರು ಉಮಾಭಾರತಿ ಮುಂದೆ ಬಂದಾಗ ಜೊತೆಯಾದವರು ಯಡಿಯೂರಪ್ಪ ಹಾಗೂ ಇತರರು. ಪೋಲಿಸರು ಹಾರಿಸಿದ ಗುಂಡಿಗೆ ೬ ಜನ ಅಮಾಯಕರು ಬಲಿಯಾದರು.ಈದಗಾದಲ್ಲಿ ರಕ್ತ ಚೆಲ್ಲಾಡಿತು ರಾಜಕೀಯವಾಗಿ ಬಿಜೆಪಿಗೆ ಕರ್ನಾಟಕಕ್ಕೆ ಅನುಕೂಲಮಾಡಿಕೊಟ್ಟಿದ್ದೇ ಈದಗಾ ವಿವಾದ. ಇಬ್ರಾಹಿಂ ಕೇಂದ್ರಮಂತ್ರಿಯಾದಾಗ ಅಂಜುಮನ್
ದವರು ವರ್ಷಕ್ಕೆರಡು ದಿನ ಧ್ವಜ ಹಾರಿಸಲು ಒಪ್ಪಿಗೆ ಕೊಟ್ಟಿತು. ಆದರೂ ನ್ಯಾಯಾಲಯದಲ್ಲಿ ಹೋರಾಟ ನಡೆದಿತ್ತು. ಈಗ ಐತಿಹಾಸಿಕ ತೀರ್ಪು ಹೊರಬಿದ್ದಿದೆ ವರ್ಷಕ್ಕೆರಡು ಬಾರಿ ನಮಾಜು ಮಾಡಲು ಮಾತ್ರ ಅವರಿಗೆ ಅವಕಾಶ. ಇದು ಅಂಜುಮನ್ ಗೆ ದೊಡ್ಡಪೆಟ್ಟು...
ಈ ತೀರ್ಪು ಒಂದು ಐತಿಹಾಸಿಕ ಸಂಗತಿ ಅಲ್ಪಸಂಖ್ಯಾತರ ತುಷ್ಟೀಕರಣ ಇದು ಸ್ವಾತಂತ್ರ್ಯದಿಂದಲೂ ನಡೆದುಬಂದ ಪದ್ಧತಿ ಸುಪ್ರೀಮಕೋರ‍್ಟನ ಈ ತೀರ್ಪು ಹೊಸಯುಗಕ್ಕೆ
ನಾಂದಿ ಹಾಡೀತೆ ಕಾಯಬೇಕು.