ಈ ಜೀವನ ಅವಳು ಕೊಟ್ಟ ಭಿಕ್ಷೆ
ವಯಸ್ಸಿಗೆ ಬಂದವರು, ಪ್ರೀತಿ ಪ್ರೇಮದ ಬಲೆಗೆ ಬೀಳುವುದು ಸಹಜ, ಆದರೆ ನಮ್ಮ ಯುವಜನತೆ ಈ ಪ್ರೀತಿಗೆ ಬೀಳುವ ಮುನ್ನ ಕೊಂಚ ಯೋಚಿಸಲ್ಲಾ. ಎಂಬುವುದು ನಿಮಗೆ ಮುಂದಿನ ಓದಿನಿಂದ ತಿಳಿಯುತ್ತದೆ. “ ಪ್ರೀತಿಲಿ ಬಿಳುವುದು ಮಾಮೂಲಿ ಮಗಾ, ಆದರೆ ಅದರಲ್ಲಿ ಒಂದಸಲ ಬಿದ್ದರೆ ಏಳಕ್ಕೆ ಆಗಲ್ಲಾ. ನೋಡು. ನಮ್ಮ ವಿಶುನ ಗತಿ ಏನಾಗಿದೆ ಅಂತಾ " ಹೀಗೆ ಮಾತಾಡತ್ತಾ ಗೆಳೆಯರಾದ ವಿಶ್ವ , ರಾಘು,ಪ್ರೀತಿ ಹರಟೆ ಹೊಡಿಯುತ್ತಾ ಸರಕಾರಿ ಕಾಲೇಜಿನ ಕ್ಯಾಂಪಸ್ ನಲ್ಲಿ ನಿಂತಿದ್ದರು. ವಿಶ್ವನ ಮುಖದಲ್ಲಿ ಪ್ರೀತಿ ಕಳೊದುಕೊಂಡ ಛಾಯೆಯ ಜೊತೆಗೆ ಪರೀಕ್ಷೆಯಲ್ಲಿ ಫೇಲ್ ಆದ ಒಂದು ಕುರುಹು ಹೊಮ್ಮುತಿತ್ತು . ಆಗ ಆ ಲವ್ ಮಾಡಿದ ಮಾಹಾತ್ಮ ಹೇಳಿದ ಈ ಕಥೆ ಅವನ ಮಾತಲ್ಲೆ ಕೇಳಿ " ಅಮ್ಮ ಲೇಟ್ ಆಗುತ್ತಿದೆ ಬೇಗಾ ಟಿಫನ್ ತಾ ಅಮ್ಮ ಶಾಲೆಗೆ ತಡಮಾಡಿ ಹೋದರೆ ಮೇಸ್ಟ್ರು ಬೈತಾರೆ " ಇವನಿಗೆ ಶಾಲೆಯ ಎಷ್ಟು ಹಂಬಲ ಅಂದಿರಾ ಖಂಡಿತಾ ಇಲ್ಲಾ, ಅತಿ ಚಿಕ್ಕ ವಯಸ್ಸಿನಲ್ಲಿಯೆ ತನ್ನ ಕ್ಲಾಸ್ ಮೇಟ್ ಸೌಮ್ಯಾಳನ್ನು ನೋಡುವ ಆಸೆ ಹಾಗೂ ಅವಳ ಜೊತೆಗೆ ಬಸ್ ಲ್ಲಿ ಹೋಗುವ ಆಸೆ ಅಷ್ಟೆ . ಅದಕ್ಕಾಗಿ ಈ ಜೋರಾದ ಪೀಠಿಕೆ . ಇವರಿಬ್ಬರು ಇನ್ನು ಆರನೆ ತರಗತಿ ಓದುವ ವಯಸ್ಸು . ಆದರೆ ಇವರಿಗೇನು ಗೊತ್ತು ಬದುಕು ಹೇಗಿದೆ ಅಂತಾ . ವಿಶುನ ಮನೆಯಲ್ಲಿ ಅತಿಯಾದ ಬಡತನ ಒಬ್ಬನೆ ಮಗ ತಂದೆ ಊರಿನ ಗೌಡರ ಮನೆಯ ಆಳು ಹಗಲು ರಾತ್ರಿ ಎನ್ನದೆ ಮಗನ ಓದಿಗಾಗಿ ಕಷ್ಟ ಪಡುತ್ತಿದ್ದ. ಈತ್ತ ತಾಯಿಯು ದಿನಾಲು ದುಡಿದು ವಿಶುಗೆ ಯಾವ ಕೊರತೆಯು ಕಾಣದಂತೆ ನೋಡಿಕೊಳ್ಳುತ್ತಿದ್ದಳು. ಇಬ್ಬರು ತಂದೆ ತಾಯಿ ನಮ್ಮ ಈ ಕಠೋರ ಕಡು ಬಡತನ ನಮ್ಮ ಮಗನಿಂದ ಹೋಗಲಾಡುತ್ತದೆ. ನಮ್ಮ ಮಗ ನಮಗೆ ಮುಂದಿನ ಆಸರೆಯಾಗುತ್ತಾನೆ. ಎಂಬ ಮಹತ್ತರವಾದ ಬಯಕೆಯಲ್ಲಿ ಬದುಕಿನ ಬಂಡಿ ವಯಸ್ಸಾದರು ಭರವಸೆಯ ಹಳಿಯ ಮೇಲೆ ಎಳೆಯುತ್ತಲೆ ಮಗನನ್ನು ಡಿಗ್ರೀವರೆಗೂ ಓದಿಸಿದರು. ಜಾನಕಿ ಅತ್ಯಂತ ಚೂಟಿ ಹಾಗೂ ಜಾಣ ಹುಡುಗಿ ಶಾಲೆಯಲ್ಲಿ ಎಲ್ಲಾ ಶಿಕ್ಷಕರ ಮುದ್ದಿನ ಮತ್ತು ಫೇವರೇಟ್ Student ಎಲ್ಲದರಲ್ಲಿಯು ಮುಂದೆ ಮುಂದೆ ಏಕೆಂದರೆ ನಮ್ಮ ಈ ಶಾಲೆಯ ಎಲ್ಲಾ ಹುಡುಗರು ಆಕೆಯ ಹಿಂದೆ ಹಿಂದೆ. ಶ್ರೀಮಂತ ಕುಟುಂಬದ ಸೌಮ್ಯ ದಿನಾಲು ಮೃಷ್ಠಾನ್ನದಲ್ಲಿ ಕೈ ತೊಳೆಯುತ್ತಿದ್ದಳು. ಅವಳ ನಡೆ ನುಡಿ ಎಲ್ಲವು ಚೆಂದ ಸದ್ಗುಣ ಸಂಪನ್ನೆಯಾಗಿದ್ದಳು. ಆದರೆ ಯಾಕೋ ಗೊತ್ತಿಲ್ಲಾ ಈ ಬಡಪಾಯಿ ವಿಶ್ವನ ಪಾಲಿಗೆ ಕರಾಳ ಮನಸ್ಸು ಮಾಡಿದಳು. ಇವರಿಬ್ಬರ ಪ್ರೀತಿಯ ವಿಷಯ ಪ್ರಾರಂಭವಾಗಿದ್ದು ಅತಿ ಚಿಕ್ಕ ವಯಸ್ಸಿನಲ್ಲಿಯೆ ಇವರಿಬ್ಬರಿಗೂ ವ್ಯತ್ಯಾಸ ಒಂದೆ ವಿಶ್ವ ಯಥೇಚ್ಚವಾಗಿ ಪ್ರೀತಿಸುತ್ತದ್ದಾ. ಆದರೆ ಸೌಮ್ಯ ಪ್ರೀತಿಸುತ್ತಿರಲಿಲ್ಲಾ. ಹೀಗೆ ಚಿಕ್ಕಂದಿನ ಒಂದು ಚಿಕ್ಕ ಘಟನೆ ಹೇಳುವುದಾದರೆ. “ ಅಂದು ಶಾಲೆಯ ವಾರ್ಷಿಕೊತ್ಸವ ಕಾರ್ಯಕ್ರಮ ಹತ್ತನೆಯ ತರಗತಿ ಮುಗಿಸುವ ಸಂದರ್ಭ ವೇದಿಕೆ ಮಾತಾಡಲು ಸಜ್ಜಾಗಿರುತ್ತದೆ. ಆಗ ವಿದ್ಯಾರ್ಥಿಗಳು ಅವರ ಅನಿಸಿಕೆ ಹೇಳಬೇಕು ಎಂದು ನಿರೂಪಕರು ಹೇಳುತ್ತಾರೆ. ಆಗ ಮಾತಾಡಿದ ನಮ್ಮ ವಿಶ್ವ ಬರಿ ಅವನ ಪ್ರೀತಿಯ ಬಗ್ಗೆ ಪ್ರೀತಿಸುತ್ತಿದ್ದ ಹುಡುಗಿಯ ಬಗ್ಗೆ ಮಾತಾಡಿದ್ದ. “ ಗೆಳೆಯರೆ ನಾವಿಂದು ಇಲ್ಲಿಂದ ಅಗಲಬಹುದು ಆದರೆ ನಾನು ನನ್ನ ಹುಡುಗಿಯಿಂದ ಯಾವತ್ತು ಅಗಲುವುದಿಲ್ಲಾ ಅವಳ ಮನಸ್ಸು ಹೃದಯಗಳಿಂದ ಯಾವತ್ತು ಮಾಸುವುದಿಲ್ಲಾ ಎಂದು ಅವಳ ಹೆಸರು ಹೇಳದೆ ಲವ್ ಯುವ ಚಿನ್ನಾ ಅಂದಿದ್ದ . ನನ್ನ ಹುಡುಗಿಯನ್ನು ಮನದಾಳದಲ್ಲಿ ಇಟ್ಟುಕೊಂಡಿದ್ದೇನೆ " ಅಂದಿದ್ದ. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಂದೆ ತಾಯಿ ಈ ಮಾತು ಕೇಳಿ ತಂಗಾದರು. ಅವರ ನೋರು ಕನಸು ನುಚ್ಚು ನೂರಾದವು. ನಂತರ ಮಾತಾಡಿದ ಸೌಮ್ಯ " ಗೆಳೆಯರೆ ನಾವಿನ್ನು ಚಿಕ್ಕವರು ನಮಗೆ ಇನ್ನು ಬದುಕು ತುಂಬಾ ದೊಡ್ಡದಿದೆ . ಅನುಭವಿಸಬೇಕು. ಈ ಭೂಮಿಗೆ ಬಂದಮೇಲೆ ನಾವೆಲ್ಲಾ ಏನ್ನನ್ನಾದರು ಸಾಧಿಸಬೇಕು. ಎಲ್ಲರು ನಮ್ಮ ಈ ಸಮಾಜವನ್ನು ಪ್ರೀತಿಸಬೇಕು ತಂದೆ ತಾಯಿಯರ ಆಸೆ ಈಡೇರಿಸಬೇಕು. ಅದಕ್ಕಾಗಿ ನಾವೆಲ್ಲಾ ಚೆನ್ನಾಗಿ ಓದಿ ಮುಂದೆ ಬರೋಣ " ಈ ಮಾತು ಮುಗಿದ ತಕ್ಷಣ ಎಲ್ಲರು ಚೆಪ್ಪಾಳೆಗಳ ಸುರಿಮಳೆ ಸುರುಸಿದರು.