ಈ ಜೀವನ..

ಈ ಜೀವನ..

   ಈ ಜೀವನವೇ ಈ ತರಹ ಎಂದು ಕಾಡುವ ಪ್ರಶ್ನೆ ಮನದಲ್ಲಿ ಮನೆ ಮಾಡಿ ಕುಳಿತಿದೆ. ಉತ್ತರ ಹುಡುಕುವ ದಾರಿಯಲ್ಲಿ ತಗ್ಗಿ-ನುಗ್ಗಿ,

ಎದ್ದು-ಬಿದ್ದು,ಹುಡುಕಿದರು ಸಿಗದಂಥ ಪ್ರಶ್ನೆಗೆ ದೊರೆಯದಂಥ ಉತ್ತರ ಸಿಗುವ ಸ್ಥಳವೆಲ್ಲೂ ಕಾಣುವುದಿಲ್ಲ.ಜೀವನದ ದಾರಿಯಲ್ಲಿ ಸರಳ

ಸುಖದ ಹಾಗೇ, ವಿರಳ ದುಃಖದ ಕಷ್ಟವನ್ನು ಅನುಭವಿಸು ಎಂದು ಜೀವನವು ಪಾಠದ ಸರಮಾಲೆಯನ್ನು ಹೊತ್ತು ಮನುಷ್ಯನ ಮನಸ್ಸಿನ

ದಾರಿಯಲ್ಲಿ ಹೊಕ್ಕಿ ತನ್ನದೇ ಆಡಳಿತವನ್ನು ಚಲಿಸುತ್ತದೆ.

   ಮಾನವ ತಾನೇ ಶ್ರೇಷ್ಠ ಎಂದು ತಿಳಿದರೂ ಪರಿತಪಿಸುವ ಮನವ ಆ ಮಾನವ ಹೊಂದಿಹ, ಹಲವಾರು ಹೆಸರು ಈ ಜೀವಗಳಿಗೆ

ಪಾಪಿ ಜೀವ ನನ್ನದು, ಪುಣ್ಯ ಜೀವ ನನ್ನದು , ಕರ್ಮ ಜೀವ ನನ್ನದು ಎಂದು ಗೊಣಗುವ ಮನಗಳ ಸಂಖ್ಯೆಯ ಬೆಲೆ ಎಷ್ಟು ಎಂದು 

ಲೆಕ್ಕ ಸಿಗುವುದಿಲ್ಲ. ಜೀವನವೆಂಬ ನದಿಯಲ್ಲಿ ಮನುಷ್ಯನ ಮನವು ಅಲ್ಲೋಲ ಕಲ್ಲೋಲವಾಗಿ ತನ್ನ ಕೈಗೆ ತಾನೆ ಸಿಗದ ರೀತಿ ಆಳವಾಗಿ

ಸಿಲುಕಿಕೊಳ್ಳುತ್ತಾನೆ.

  ಮನ ಆಸೆಯೆಂಬ ಆಕಾಂಕ್ಷೆಯನ್ನು ಹೊಂದಿ ಗಗನ ಮುಟ್ಟುವಷ್ಟರಲ್ಲಿ ತಟ್ಟನೆ ಕೆಳ ಬಿದ್ದು ಗಾಜಿನ ನೂರು ಚೂರಿನ ಹಾಗೆ ಒಂದೊಂದು

ಚೂರಿನ ಹಾಗೆ ಒಂದೊಂದು ಚೂರಲ್ಲಿ ತನ್ನನ್ನು ಹುಡುಕಿ ಜೋಡಿಸುವಷ್ಟರಲ್ಲಿ ಜೀವನವು ಅಂತಿಮ ಹಂತಕ್ಕೆ ಬಂದು ಮುಟ್ಟಿರುತ್ತದೆ.ಇದು

ಪಾಪಿ ಜೀವ ಎಂದು ತೆಗಳುವ, ಪರಿತಪಿಸುವ, ಕಾಡುವ ಮನದ ಕಾಣದ ಆಸೆಗೆ ಜೀವನದಲ್ಲಿ ನೊಂದಿ, ಜೀವನದ ರುಚಿ ಕಹಿ-ಕಹಿ

ಯಾಗಿ ಬಿಡುತ್ತದೆ.

   ಮಾನವ ಮೌನಿಯಾದರೊಂದು ಬಗೆ, ಮಾತನಾಡಿದರೊಂದು ಬಗೆ. ಕೆಲವೊಂದು ಸಾರಿ ಈ ಮನವು ನಾನೇಕೆ ಆ ಹಕ್ಕಿ ಆಗಲಿಲ್ಲ

ನಾನೇಕೆ ಆ ಕಲ್ಲು ಬಂಡೆ ಆಗಲಿಲ್ಲ? ಎಂಬ ಅರ್ಥವಿಲ್ಲದ ಪ್ರಶ್ನೆಗೆ ಉತ್ತರ ಹುಡುಕಲು ಆರಂಭಿಸುತ್ತದೆ. ಈ ಪ್ರಶ್ನೆಗೆ ಸರಿಯಾದ ಉತ್ತರ 

ಹುಡುಕಲು ಆರಂಭಿಸುತ್ತದೆ. ಈ ಪ್ರಶ್ನೆಗೆ ಸರಿಯಾದ ಉತ್ತರ ದೊರೆಯದು ಎಂದು ತಿಳಿದರೂ ಕೂಡ ನದಿಯಲ್ಲಿ ಮುತ್ತು ಹುಡುಕಿದ ಹಾಗೆ

ತಮ್ಮ ಜೀವನವೆಂಬ ಪದಕ್ಕೆ ತಾವೇ ಪ್ರಶ್ನಾರ್ಥಕ ಚಿಹ್ನೆಯನ್ನು ಸೂಚಿಸಿ ಬಿಡುತ್ತಾರೆ.

     ಕೆಳ ಬೀಳುವ ಮುತ್ತಿನ ವೇಗದ ಹಾಗೆ ಮನಸ್ಸಿನಲ್ಲಿಯೇ ಭಾವನೆಗಳು ವೇಗವಾಗಿ ಚಲಿಸುತ್ತವೆ.ಬೊಗಸೆಯಲ್ಲಿ ನೀರು ಸಂಗ್ರಹಿಸಿಡಲು 

ಸಾಧ್ಯವೇ ? ಇಲ್ಲ ,ಸುಲಭವಾದ ಪ್ರಶ್ನೆಯಲ್ಲ. ಹೀಗೆ ಜೀವನವೆಂಬುದು ಬೊಗಸೆಯಲ್ಲಿ ಅನೇಕ ಅಣುದ್ರವ್ಯಗಳನ್ನು ಹೊಂದಿರುವ  

ನೀರೆಂದರೆ ಸ್ನೇಹ, ಪ್ರೀತಿ, ಸುಖ, ದುಃಖ, ನಂಬಿಕೆ, ಅಪನಂಬಿಕೆ, ಮುಗ್ಧತೆ, ಕಥೋರತ್ವ ಹೀಗೆ ಹಲವಾರು ಅಣುಗಳಿಂದ ಕೂಡಿದ

ನೀರಿನ ದ್ರವ್ಯವನ್ನು ಈ ಜೀವನವೆಂಬ ಪುಟ್ಟ ಬೊಗಸೆಯಲ್ಲಿ ಸಂಗ್ರಹಿಸಲು ಹೇಗೆ ಸಾಧ್ಯ? ನಾವು ನೀರಿನ ಕೆಲ ಹನಿಗಳನ್ನು ಮಾತ್ರ

ಸ್ವಲ್ಪ ಸಮಯದವರೆಗೆ ಸುರಕ್ಷಿತವಾಗಿಡಬಹುದು. ಕೆಲ ಕಾಲದ ಸುಖವನ್ನು ನಾವು ಖುಷಿಪಟ್ಟು ಆನಂದಿಸುವೆವು. ಆದರೆ ಕೆಲವು ಸಲ

ದುಃಖದ ಸಂಗತಿಯಿಂದ ಕೊರಗಿ ಜೀವನವೇ ಬೇಸರವಾಗಿ ಬಿಡುತ್ತದೆ.ಹೀಗೆ ಹಲವಾರು ಸುಲಭ ಮತ್ತು ಕಠೋರ ಮೆಟ್ಟಿಲುಗಳನ್ನು

ಹತ್ತಿ ಜೀವನದ ಅಂತ್ಯ ಮೆಟ್ಟಿಲು ಮುಟ್ಟುವ ಆಸೆಯಲ್ಲಿ ಮನುಷ್ಯ ಜೀವಿಸಲು ಬಲು ಇಷ್ಟ ಪಡುತ್ತಾನೆ.

   ಮನ ಒಡೆದರೆ ಮಾನ ಹೋಯಿತು ಎಂದು ತಿಳಿದು ಮನಸ್ಸಿನ ಭಾವಗಳನ್ನು ಬಚ್ಚಿಟ್ಟುಕೊಳ್ಳುತ್ತಾನೆ. ಜೀವನವೇ ಹೀಗೆ 

   ಸುಖ ಸುಖವೆಂದು ಕೊರಗುವರಿಲ್ಲಿ 

   ದುಃಖ ದುಃಖವೆಂದು ಚಿಂತಿಸುವರಿಲ್ಲಿ

   ಸುಖ ದುಃಖಗಳೆರಡು ಜೀವನದಲ್ಲಿ 

   ನೀ ಮಾನವಧರ್ಮ ಮರೆಯದಿರಯ್ಯಾ

ಎಂದು ಹೇಳಲು ಇಷ್ಟ ಪಡುವೆ. ಸುಖವೆಂದರೇನು? ಮನಸ್ಸಿನ ತೃಪ್ತಿ. ಸಂಪತ್ತು/ಹಣ ಮಾನವನ ದೇಹವನ್ನು ತೃಪ್ತಿಪಡಿಸಬಹುದು.

ಅಂತರಂಗವಾದ ಮನಸ್ಸಿನ ತೃಪ್ತಿ ಜೀವಕ್ಕೆ ಬಹಳ ಸಮೀಪವಾದುದು. ಜೀವಂತ ಸಂಬಂಧಗಳು ಮಾತ್ರ ಮನಸ್ಸನ್ನು ಅರ್ಥಿಸಿಕೊ

ಳ್ಳುವವು. ಹೀಗಾಗಿ ಒಳ್ಳೆಯ ಸಂಅಬಂಧಗಳನ್ನು ನಾವು ಜೀವನದಲ್ಲಿ ಹೊಂದಿದ್ದರೆ ಕೆಡಕನ್ನು ನಾವು ಕಾಣಲಾರೆವು.

   ಮನದ ಸುಖವು ಮರೆಯಲಾರದಂಥ ನೆನಪನ್ನು ನೀಡುತ್ತದೆ ಮತ್ತು ಜೀವನದಲ್ಲಿರುವ ದುಃಖ ಆ ಮುಗ್ಧ ಮನಸ್ಸಿನ ನೆನಪನ್ನು

ಮರೆಸುತ್ತದೆ. ಜೀವನದಲ್ಲಿ ಸುಖ-ದುಃಖಗಳು ಒಂದೊಂದಾಗಿ ಬರುತ್ತವೆ. ಯಾವುದೇ ಪರಿಸ್ಥಿತಿಯಲ್ಲಿ ಮಾನವ ತನ್ನ ಮನೋಬಲ,

ಆತ್ಮನಂಬಿಕೆ, ಪ್ರೀತಿ, ಸತ್ಯ, ತ್ಯಾಗ, ಧೈರ್ಯ, ತಾಳ್ಮೆ ಈ ಎಲ್ಲ ಭಾವನೆಗಳನ್ನು ಹೊಂದಿದ್ದರೆ ಜೀವನವನ್ನು ಸರಳವಾಗಿ

ಸುಗಮವಾಗಿ ಜೀವಿಸುತ್ತಾನೆ.

ಜೀವನವೆಂಬ ವಿಷಯವೇ ಹೀಗೆ-

ಮುಗಿಯಲಾಗದ ಕಥೆ

ಮರೆಯಲಾಗದ ಕನಸು

ಅನುಭವಿಸಲಾಗದ ಸುಖ 

ಎದುರಿಸಲಾಗದ ದುಃಖ

ವರ್ಣಿಸಲಾಗದಷ್ಟು ಸುಂದರ

ಮನಮೋಹಕ ಈ ಜೀವನ

( ಈ ಪಿಸುಮಾತು ನನ್ನ ಪ್ರಯತ್ನವಿದೆ ಮಾತ್ರ)

Comments