ಈ ದೂರವನ್ನು ಅನುಭವಿಸಲಾರೆನು

ಈ ದೂರವನ್ನು ಅನುಭವಿಸಲಾರೆನು

ಕವನ

ನಿನ್ನ ನೋಡಿ ಕವಿಯಾದೆನು ನಾನು

ಆದರೇನು ಮಾಡಲಿ ನೀನೆ ಒಂದು ಕವಿತೆ

ಬೇರೇನು ಬರೆಯಬಲ್ಲೆನು ನಿನ್ನ ಬಗ್ಗೆ ನಾನು..

ಕಣ್ಣು ತೆರೆದರೂ ನೀನೆ ಮುಚ್ಚಿದರೂ ನೀನೆ..

ನಿನ್ನ ಸವಿಯಾದ ಮಾತುಗಳನ್ನು

ಹಂಬಲಿಸುತಿದೆ ನನ್ನ ಮನಸು..

ಎಷ್ಟು ದಿವಸ ಕಾಯಬೇಕು...

ನನ್ನ ಮನಸ್ಸು ಅರ್ಥವಾಗುತ್ತಿಲ್ಲವೇ ನಿನಗೆ..

ಇದು ಇಂದು ನೆನ್ನೆಯ ಬಂಧವಲ್ಲ..

ಜನ್ಮಜನ್ಮದ ಅನುಬಂಧವೆನಿಸುತೆದೆ..

ನಮ್ಮಿಬ್ಬರ ಇಷ್ಟಗಳು ಕಲೆತರೂ 

ಮನಸುಗಳು ಕಲೆತರೂ..

ಈ ದೂರವನ್ನು ಅನುಭವಿಸಲಾರೆನು..

ನಿನ್ನ ಬರುವಿಕೆಗೆ ಕಾದು ಕುಳಿತಿದ್ದೇನೆ ಗೆಳತಿ

Comments