ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ

ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ

 

 

 ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ

ಅಂದು ರಾಷ್ತ್ರೀಯ ಭಾವನೆ ಸಮಾಜದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿತ್ತು. ಬದುಕಿನಲ್ಲಿ ಒಂದು ಆದರ್ಶವಿತ್ತು. ನೀತಿ, ಮೌಲ್ಯ, ಚಾರಿತ್ರ್ಯರಹಿತ ಬದುಕು ಬದುಕಲ್ಲ ಎಂಬ ಎಚ್ಚರಿಕೆ ಇತ್ತು. ಆದರೀಗ ಪಾಶ್ಚಾತ್ಯ ಅಂಧಾನುಕರಣೆ, ಸಗಟು ಮತಗಳಿಗಾಗಿ ತುಷ್ಟ್ಟೀಕರಣದ ಮೂಲಕ ಸಮಾಜವನ್ನು ಒಡೆಯುವ ವಿಭಜನಕಾರಿ ರಾಜಕೀಯ, ಭೋಗವಾದದಿಂದಾಗಿ ಸಮಾಜದಲ್ಲಿ ಅಶಾಂತಿ, ಅನೈತಿಕತೆ, ಸ್ವಾರ್ಥ ವಿಜೃಂಭಿಸುವಂತಾಗಿದೆ.
 
         ’ಪ್ರಗತಿಪರ ಬಳಕೆ ಸಿದ್ದಾಂತ’ ಪ್ರತಿಪಾದಕ ಡಾ. ರವಿ ಭಾತ್ರಾ ಹೇಳುವಂತೆ, ದೇಶದಲ್ಲಿ ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ರೀತಿಯ ಸಂಪತ್ತೂ ಇದೆ. ಆದರೆ ಆಧ್ಯಾತ್ಮ ರಹಿತವಾಗಿ ಭೋಗಪ್ರಧಾನ ಭೌತಿಕವಾದದಿಂದ ಜನಜೀವನ ಉಸುಕಿನ ಮೇಲೆ ಕಟ್ಟಿದ ಕಟ್ಟಡದಂತಾಗಿಬಿಟ್ಟಿದೆ.
     
       ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ. ಇದು ಭೋಗಭೂಮಿಯಲ್ಲ, ತ್ಯಾಗ ಭೂಮಿ. ಇಂದು ವಿವ್ಯುನ್ಮಾನ ಮಾಧ್ಯಮ, ಚಲನಚಿತ್ರ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಅನೈತಿಕತೆಯೇ ವಿಜೃಂಭಿಸುತ್ತಿದೆ.
 
     ಅಹಂ ಬಿಟ್ಟುಬಿಡೋಣ ಪರಂಪರಾಗತವಾಗಿ ಬಂದಿರುವ ಸಂಪ್ರದಾಯ, ರಿವಾಜುಗಳು ಮನೆಯೊಳಗಿರಲಿ. ಸಂಸ್ಕಾರದಲ್ಲಿ ಯೋಗ್ಯ ಹಿಂದುವಾಗಿರೋಣ, ರಾಷ್ಟ್ರೀಯತೆಯಲ್ಲಿ ಭಾರತೀಯರಾಗಿರೋಣ! ಎಲ್ಲರೊಂದಿಗೆ ಬೆರೆಯುವಾಗ ವಿಶ್ವಮಾನವನಾಗಿರೋಣ.

 

Comments

Submitted by ಆರ್ ಕೆ ದಿವಾಕರ Wed, 04/17/2013 - 11:46

ಅತ್ಯದ್ಭುತ ಚಿಂತನೆ. ಕಾರ್ಯ-ಅಸಾಧ್ಯವೂ ಅಲ್ಲ. ಆದರೆ ಈಡೇರುವುದಿಲ್ಲ! ’ಅಹಂ ಬಿಟ್ಟುಬಿಡೋಣ’ - ಅದಕ್ಕೆ ಯಾರು ತಯಾರಿರುತ್ತಾರೆ? ಬಿಟ್ಟುಬಿಡುವುದು ಬೇಡ, ಪ್ರಾಮಾಣಿಕವಾಗಿ Compromise ಮಾಡಿಕೊಂಡರೂ ಸಾಕು, ದೇಶಕ್ಕೆ ಸುಭಿಕ್ಷ ತರಬಹುದು. ಆ ಒಮ್ಮತವನ್ನು ಎಲ್ಲಿಂದ ತರುವುದು? ತ್ಯಾಗ ವೈಯಕ್ತಿಕ ಔನ್ನತ್ಯಕ್ಕೆ In fact ಆಧ್ಯಾತ್ಮ ಎನ್ನುವುದೇ ವೈಯಕ್ತಿಕ ಸಾಧನೆ. ಸಮಾಜಕ್ಕಾದರೋ ’ಭೋಗ’ ಎನ್ನುವುದೇ ನಿಷಿದ್ಧವಾಗಬೇಕಾದ್ದಿಲ್ಲ. ಎಲ್ಲ ಆರ್ಥಿಕ ಕಳಕಳಿಯೂ ಭೋಗಕ್ಕಾಗಿಯೇ. ಭೋಗವೆಂದರೇ ಲಂಪಟತನ ಎಂದು ತೀರ್ಮಾನಿಸುವುದು ಪೂರ್ವಗ್ರಹ. ’ಇಹ’ ಪ್ರಪಂಚವನ್ನು - ಎಂದರೆ ನಾವು ’ಇರುವ’ ಪ್ರಪಂಚ ಎಂದೂ ಅರ್ಥೈಸಬಹುದು - ಅದನ್ನು ಹಸನುಗೊಳಿಸಬೇಕು. ’ಇಲ್ಲಿ’ ಸಂದರೆ, ’ಅಲ್ಲಿ’ ಸಲ್ಲುವುದು ಗ್ಯಾರಂಟಿ. ’ಸಂಸ್ಕಾರದಲ್ಲಿ ಯೋಗ್ಯ ಹಿಂದೂಗಳಾಗಿರೋಣ; ರಾಷ್ಟ್ರೀಯತೆಯಲ್ಲಿ ಭಾರತೀಯರಾಗಿರೋಣ’ ಮುತ್ತಿನಂತಹ ಮಾತು. ಯೋಗ್ಯ ಹಿಂದೂಗಳಂತೆ ಯೋಗ್ಯ ಮುಸಲ್ಮಾನರೂ, ಕಿಲಿಸ್ತಾನರೂ ಇದ್ದುಕೊಂಡು ಹೋಗಲಿ ಹೊರಗೆ ಮಾತ್ರಾ ಸಮಾನ ಭಾರತೀಯರು, ತಾನೇ? ಅಂತಹ ಉದಾರ ಸಂವಿಧಾನವೇ ನಮ್ಮದಾಗಿದೆ. ಅದರ ಜಾರಿಯನ್ನು ಅಧಮಾಧಮ ಅಯೋಗ್ಯರಿಗೆ ವಹಿಸುವಂತೆ ನಮ್ಮ ಚುನಾವಣಾ ವ್ಯವಸ್ಥೆ Corrupt ಆಗಿದೆ. ಅಂದರೆ ಹುಳಿತಿದೆ ಎಂದಷ್ಟೆ. ಮತದಾರ ಪ್ರಜೆಗಳ ಶೇ. 50+ ಪ್ರಾತಿನಿಧ್ಯ ಚುನಾಯಿತ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಿಕ್ಕುವವರೆಗೆ ನಮ್ಮ ರಾಜಕೀಯ ಮಾನುಷವಾಗುವುದಿಲ್ಲ; ತಾವು ಉಲ್ಲೇಖಿಸಿದ ಕ್ಷೇತ್ರಗಳ ಅನೈತಿಕತೆ ಕುಂದುವುದಿಲ್ಲ.