ಈ ದೇಹ
ಈ ದೇಹ ನಾನಲ್ಲ,, ನಾನೇ ನಾನಾಗಿರುವೆ,
ಈ ಜಗದಲ್ಲಿ ನಾನಿರುವಿಕೆಯ ಗುರುತುಮಾತ್ರ
ಈದೇಹ.
ಬಾಲ್ಯದಲ್ಲಿ ಎಳೆತಾಗಿ, ಯೌವ್ವನದಲ್ಲಿ ಪ್ರೌಢವಾಗಿ,
ಮುಪ್ಪಿನಲ್ಲಿ ಕೃಶವಾಗಿ, ಮೃತ್ಯುವಿನಲ್ಲಿ ಮಣ್ಣಾಗುವ,
ಈ ದೇಹ .
ತೊಗಲು ಹೊದಿಕೆಯ, ಮೂಳೆಮಾಂಮ್ಸದ ಪಂಜರ,
ಪಂಚೇಂದ್ರಿಗಲ ಪೀಠ. ಇದರ ಉಸಿರಾಟ,
ಹರಿಯುವ ರಕ್ತ, ಕೇವಲನನಗಾಗಿ, ನಾನಿರುವಿಕೆಗಾಗಿ.
ನಾನೆಂದರೆ.... ಆತ್ಮ,
ಈದೇಹದಲ್ಲಿ
ನೆಲೆಸಿರುವ ಜೀವಾತ್ಮ, ನಾನು
ನಾನೆಷ್ಟೋಬಾರಿ ಈದೇಹ ತೊರೆದಿದ್ದೇನೆ,
ನಿಂತು ಇದನ್ನು ಕಂಡಿದ್ದೇನೆ,
ಶವದಂತೆ ಕಾಣುವ ಇದು ಕೇವಲ ಮೂಳೆ ಮಾಂಮ್ಸದ,
ಚಲನೆಯ ಆಕಾರವಷ್ಟೆ,
ನಾನಿರುವಿಕೆಯ ಶಾಕ್ಷಾಧಾರ ವಷ್ಟೆ.
ಈದೇಹ.....
ಉಸಿರುನಿಂತರೇ , ಮಣ್ಣಾಗುವ ಬೂದಿಯಾಗುವ,
ಕೊಳೆತುನಾರುವ ನನ್ನಗುರುತಿನ ಸಾಧನಮಾತ್ರ..
ಪಶುಪಕ್ಷಿ ಗಳಂತೆ,
ಗಂಡುಹೆಂಣ್ಣಿನ ತೃಶೆಯ ಫಲವಾಗಿ
ಧರೆಯಬದುಕಿಗಾಗಿ ರೂಪಗೂಂಡ ಆಕಾರ ಮಾತ್ರ,
ಈದೇಹ,
ಈ ಜಗದ ಭೋಗ, ಸುಪ್ಪತ್ತಿಗೆ, ಚಪಲ ಚೆಲ್ಲಾಟ,
ವ್ಯಾಮೋಹ, ಸ್ವಾರ್ಥ ಹೋರಾಟ ಕೇವಲ
ಈ ದೇಹಕ್ಕಾಗಿ ಮಾತ್ರ, ನನಗಾಗಿ ಅಲ್ಲ.
ಈ ದೇಹ
ನಾನುಡಿದಂತೆ ನುಡಿಯವುದು, ನಾ ಮಾಡುವ
ಚಿಂತನೆ ಇದು ಮಾಡದು, ನನ್ನಾಜ್ನೆಪಾಲಿಸುವುದು,
ನನ್ನಕರ್ಮಗಳ ಸಾಕ್ಷಿ ಇದಾಗುವುದು.
ಬೆತ್ತಲಾದ ಈ ದೇಹಕ್ಕೆ,
ಸಂಸ್ಕೃತಿಯ ಹೊದಿಕೆ ಹೊದಿಸಿದ ನಾನೆ
ಇದರ ಕರ್ಮಗಳ ಹೊಣೆಗಾರ.
ನನ್ನಂತೆ ವರ್ತಿಸುವ ಈ ದೇಹಕ್ಕೆ ಪುಷ್ಟವಾಗಿರಿಸಲು,
ಹೋರಾಟದ ,ನಶ್ವರಬದುಕಿನ ವ್ಯಾಮೋಹ,
ತೞುತ್ತಿದೆ ನನಗೆ ಈರ್ಷ್ಯತುಂಬಿದ ಕುಯುಕ್ತಿಗಳ ದಾರಿಗೆ,
ಈ ದೇಹ ಸಾಕುವ,
ಕಾಮ ಕ್ರೋಧ ಲೋಭ ಮದ ಮೋಹ ಮತ್ಸರದ ಸೆರಗೆ
ಈದೇಹ ನಾನಲ್ಲ, ನಾನೇ ನಾನಾಗಿರುವೆ........................
Comments
ಉ: ಈ ದೇಹ
In reply to ಉ: ಈ ದೇಹ by mmshaik
ಉ: ಈ ದೇಹ