ಈ ಬದುಕು ಪ್ರೀತಿಸು-ಸಂಭ್ರಮಿಸು...
ಬದುಕುಂಟು ಅನುಭವಿಸಲು,
ಬದುಕುಂಟು ಸಂಭ್ರಮಿಸಲು,
ಬದುಕುಂಟು ಪ್ರೀತಿಸಲು,
ಬದುಕಿನ ಜೊತೆ ನಿತ್ಯ ಸಾಗಲು,
ಈ ಬದುಕುಂಟು ಬದುಕಿ ಬಾಳಲು,
ಬದುಕುಂಟು ಬದುಕಿನಲ್ಲಿ ನೋವುಂಟು-ನಲಿವುಂಟು,
ಏನಿರಬಹುದು ಈ ಬದುಕಿನ ಜೊತೆ ನಮ್ಮ ನಂಟು..
ಬದುಕಿದರೆ ಹೀಗೆ,
ಬದುಕಲೇಬೇಕು ಹೀಗೆ,
ಬದುಕೆಂದರೆ ಹೇಗೆ,
ಬಗೆಹರಿಯದು ಈ ಬದುಕಿನ ಬಗೆ..
ಹಳೆಯ ನೆನಪುಗಳು,
ಈಗಿನ ಅನುಭವಗಳು,
ಮುಂದಿನ ದಿನಗಳ ಯೋಚನೆಗಳು,
ಬರಿಯ ನೋವುಗಳು- ಕಷ್ಟಗಳು- ಚಿಂತೆಗಳು,
ಬದುಕಿನ ಪೀಕಲಾಟಕಗಳು-ಬಗೆಹರಿಯದ ಕೊಡವೆಗಳು,
ಬದುಕನ್ನು ಸಂಭ್ರಮಿಸುವುದು ಹೇಗೆಂದು ಅರಿಯದ ಮನಸುಗಳು,
ಇದರಲ್ಲೇ ಮುಗಿಯುವ ಸೆಕೆಂಡುಗಳು,
ಸಂಭ್ರಮಿಸುವುದೆಲ್ಲಿ ಎಂಬ ಹಲವು ಪ್ರಶ್ನಾರ್ಥಕಗಳು...
ಎಲ್ಲಿದ್ದರೇನು-ಹೇಗಿದ್ದರೇನು,
ಏನಿದ್ದರೇನು ಏನಿಲ್ಲದಿದ್ದರೇನು,
ಬಡವನಾದರೇನು ಶ್ರೀಮಂತರಾದರೇನು,
ಪ್ರತಿಕ್ಷಣ ಅನುಭವಿಸಬೇಕು ಜೀವನವನ್ನು,
ಸವಿಯಬೇಕು ಉಚಿತವಾಗಿ ಸಿಗುವ ಸಂತೋಷವನ್ನು..
ಹಣಕೊಟ್ಟು ಕೊಂಡುಕೊಳ್ಳಲಾಗದು ಸಂತೋಷ,
ಸಂತೋಷ ಪಡಲು ಅತ್ಯಮೂಲ್ಯ ಪ್ರತಿ ನಿಮಿಷ,
ಸಂಭ್ರಮಿಸಲು ಕಾರಣ ಹುಡುಕದಿರಿ,
ನಕ್ಕು ನಲಿಯುತ್ತಾ ನೋವಾ ಮರೆಯುತಾ ಖುಷಿಯಾಗಿರಿ...
-ಶಾಂತಾರಾಮ ಶಿರಸಿ
