ಈ ಮನುಷ್ಯನಿಗರಿವಿದೆಯೇ, ಎರಡು ತಿಂಗಳ ಹಿಂದಾಗಿದ್ದ, ನರಬಲಿಯ ದುರಂತ ?

ಈ ಮನುಷ್ಯನಿಗರಿವಿದೆಯೇ, ಎರಡು ತಿಂಗಳ ಹಿಂದಾಗಿದ್ದ, ನರಬಲಿಯ ದುರಂತ ?

ಬರಹ

ಈತ ಕುಳಿತಿರುವ ಜಾಗ, ದಕ್ಷಿಣ ಮುಂಬೈನ, ’ ಮೆರಿನ್ ಡ್ರೈವ್,’ ನ ಕಡಲಿನ ಬದಿಯಲ್ಲಿ ನಿರ್ಮಿಸಿರುವ, ಕಟ್ಟೆಯ ಮೇಲೆ. ಏನಿದೆ ವಿಶೇಷ ಇದರಲ್ಲಿ, ಅಂತೀರಾ ? ಅನೇಕರು, ಇಲ್ಲಿಗೆ ಬರ್ತಾರೆ, ಕೂತಿರುತ್ತಾರೆ. ಆಮೇಲೆ ಎದ್ದುಹೋಗುತ್ತಾರೆ. ನಿಜ. ಆದರೆ, ಈ ಜಾಗದಲ್ಲಿ ಹೋದವರ್ಷ, ಕುಳಿತುಕೊಳ್ಳಲು ಜನ ಹೆದರುತ್ತಿದ್ದರು. ಯಾಕೆ ಅಂತೀರೋ, ಆತನ ಹಿಂದೆ, ಕಾಣಿಸುವುದು, ’ಒಬೆರಾಯ್ ಹೋಟೆಲ್.” ಅದರ ಬದಿಯಲ್ಲಿ, ಎನ್. ಸಿ. ಪಿ . ಎ. ರಂಗ-ಮಂದಿರ ! ನಿಮಗೆ ನವೆಂಬರ್, ೨೦೦೮, ರ, ೨೬ ರಂದು ಆದ ಅಮಾಯಕರ ಹತ್ಯೆಗಳ ಕಧೆ, ನೆನಪಿರಬೇಕಲ್ಲಾ ? ಅದೇ ’ಒಬೆರಾಯ್ ಹೋಟೆಲ್,’ ನಲ್ಲಿ ಬಂದಿಳಿದುಕೊಂಡಿದ್ದ ಪರ್ಯಟಕರು, ಅನುಭವಿಸಿದ ನರಕಯಾತನೆ, ಗುಂಡಿನ ಮಳೆ, ಜನರ ಸಾವುನೊವುಗಳ ಆಕ್ರಂದನಗಳು, ನಂತರ ಸೇನಾಪಡೆಬಂದು, ಮಾಡಿದ ವಿಮೋಚನಾ ಸಾಹಸ, ಇವೆಲ್ಲಾ ಮರೆಯಲು ಸಾಧ್ಯವೇ ಮುಂಬೈಕರರಿಗೆ ?

ಕಾಲ, ತನ್ನ ಅನಂತ ಗರ್ಭದಲ್ಲಿ ಎಲ್ಲವನ್ನೂ ಅಡಗಿಸಿಕೊಳ್ಳುತ್ತಾ ಹೊಸ-ಹೊಸ, , ಒಳ್ಳೆಯ ಅಥವಾ ಕೆಟ್ಟ ಸನ್ನಿವೇಶಗಳನ್ನು ಈ ವಿಶ್ವದ ರಂಗಮಂಚಕ್ಕೆ ಪರಿಚಯಿಸಲು, ಪರೆದೆ ಎಳೆಯುವ ಕೆಲಸವನ್ನು ಸದಾ ಮಾಡುತ್ತಾ ಬಂದಿದೆಯಲ್ಲವೇ ! ಇನ್ನೇನು ಹೊಸಕಾರ್ಯಕ್ರಮಗಳನ್ನು ಹಾಕಿಕೊಂಡಿದೆಯೋ, ಈ ಕಾಲ ?

ಕಾದು ನೋಡುವುದನ್ನು ಬಿಟ್ಟರೆ, ಯಾವ ಜ್ಯೋತಿಷಿ ಇದನ್ನು ಹೇಳಬಲ್ಲ ?

ಚಿತ್ರ. ವೆಂ.