ಈ ಮೌನವಾ ತಾಳೆನು
"ಈ ಮೌನವಾ ತಾಳೆನು, ಕೂಗಾಡೊ ದಾರಿಯ ಕಾಣೆನು, ಓ ನಾಯಿ"...
ಇದೇನಪ್ಪಾ, ಒಂದ್ ಛೊಲೊ ಹಾಡನ್ನ್ ಹಾಳ್ ಮಾಡಾಕತ್ತಾನ್ ಇವಾ, ಬ್ಯಾರೆ ಎನು ಸಿಗ್ಲಿಲ್ಲ್ ಎನು ಇವಂಗ್ ಅನಬ್ಯಾಡ್ರಿ.
ನನ್ office ಮುಗೀದು ಸುದ್ದ್ ರಾತ್ರಿ ೧೨ಕ್ಕ, ಮತ್ ಮನಿಗ್ ಮುಟ್ಟುದುಕ್ಕ ೧-೧.೩೦ ಆಗ್ತಾದ. ದೆವ್ವ ಓಡ್ಯಾಡೊ time ಅದು(ಅಂತಾ ಮನ್ಯಾಗ ಹೆಳ್ಯಾರು, ಇಲ್ಲಿ ತಂಕಾ ಒಂದನ್ನು ನೊಡಿಲ್ಲಾ ನಾ). ಆ timeನಾಗ, ರಾತ್ರಿ ಪಾಳ್ಯಾಗೀರೋ ಗೂರ್ಖಾ ಬಿಟ್ಟ್ರ road ತುಂಬಾ ನಾಯಿಗೊಳ್ದೆ ಕಾರುಬಾರು.ಇದು ನೀವ್ ಬೆಂಗ್ಳೂರಿನಾಗ ಇದ್ದ್ರ ಗೊತ್ತ ಇರ್ತೈತಿ. ಅವು ಸುಮ್ಮ ಇರ್ತಾವ? ಇಲ್ಲ.ಆವಾಗ್ ಆವಾಗ್ ಹೋಗು car, tempo ಹಿಂದ ಓಡ್ಯಾಡ್ತವ, ಮತ್ ಗೂರ್ಖಾ ಬಿಟ್ಟ ಬ್ಯಾರೆ ಯಾರರೇ ಬಂದ್ರ ಬೊಗಳಾಕ ಶುರು. ನಂಗು ರೂಢಿ ಆಗಿಬಿಟ್ಟಾದ ಈಗ. ಓಂದ್ ದಿನಾ ನಿಮ್ಮ luckಗೆ ಅವು ಬೊಗಳಲಿಲ್ಲಾ ಅಂದ್ರ ಛೊಲೊ ಅನ್ಸಂಗಿಲ್ಲಾ ನೊಡ್ರಿ. ನಂಗು ಹಂಗ ಆತು ಇವತ್ತ.
ನಮ್ಮ ಮನಿ ಕೆಳಗಿನ ಮನ್ಯಾಗ ಒಬ್ಬಾಕಿ ಇರ್ತಾಳ. ಅದೇನ್ ಮಹಾ ವಿಶ್ಯಾ, ಒಬ್ಬಾಕಿ ಎಲ್ಲಿ ಬೇಕಾದ್ರು ಇರ್ತಾಳ ಅನ್ನಾಕತ್ತಿರೆನ, ಆದ್ರ ನಾ ಹೆಳೂದು ಬ್ಯಾರೆ ಆದ. ಅಕಿನು ಒಂದ್ ದೊಡ್ಡ software ಕಂಪನ್ಯಾಗ ಕೆಲ್ಸ ಮಡ್ತಾಳ, ನನ್ನಂಗ.ಅಕೀನು ದೆವ್ವಗಳ ಜೊಡಿನೆ ಮನಿಗ್ ಬರೂದು, ಮತ್ತ್ ನನ್ನಂಗ. ಭಾಳ ಆದ್ರ ಒಂದ್ ೫-೧೦ ನಿಮಿಷ diff ನಮ್ ಇಬ್ರಿಗು ಮನಿ ಬಂದ ಸೇರಾಕ. ಅಕಿ ಮನ್ಯಾಗ ಹೊಗುವಾಗ, ನಮ್ಮ ಮನೆ ಮಾಲಿಕ್ರ ನಾಯಿ ಕುಯ್ಯಿ ಅನ್ನಂಗಿಲ್ಲ, ಅದೆ ಜಾಗನಾಗ ನಾ ಪ್ಯಾಟುನಿಗಿ ಹತ್ತಾಕ್ ಚಾಲು ಮಾಡಿದ್ರ ಶುರು ಆಗ್ತಾದ ನೊಡ್ರಿ, ೧೦ ನಿಮಿಷ ಉಸಿರು ಬಿಟ್ಟು ಬಿಡದೆ ಬೊಗಳೂದು. ಹಾಳಾದ್ ನಾಯಿ.
ಹಂ.. ಈಗ ವಿಷಯಕ್ಕ ಬರೂನ. ನಿನ್ನೆ ಆ ಹುಡುಗಿ ಗಾಡಿ ಅಕಿನ್ drop ಮಾಡಾಕ್ ಬಂದಾಗ, ನಮ್ ಏರಿಯಾದ, ಎಲ್ರಿಗು ಛೊಲೊ ಅನ್ಸು ನಾಯಿ ಮ್ಯಾಗ ಹಾದು ಅದನ್ನ್ ಕೊಂದ ಬಿಟ್ಟ್ತು. ನಾನು ನಿನ್ನೆ ರಾತ್ರಿನೆ ಅದರ ಹತ್ರ ನಿಂತ್ಕೊಂಡು ೨ ನಿಮಿಷಾ ಮೌನಾಚಾರಣೆನು ಮಾಡಿ, ಆ ಗಾಡಿ driverಗೆ "ರ್ರೀ, ಎನ್ರಿ, ಈ ನಾಯಿನ ಯಾಕ್ ಸಾಯಸಿದ್ರೀ. ನಮ್ಮ್ ಮನಿ ಮಾಲಿಕ್ರ ನಾಯಿನಾದ್ರು ಸಾಯ್ಸಿದ್ರೆ ನಾಲ್ಕ ಮಂದಿಗೆ ಖುಶಿ ಆಗ್ತಿತ್ತು" ಅದಕ್ಕ ಅವಾ "ನಾ ಬೇಕಂತ ಸಾಯ್ಸಿಲ್ಲರ್ರಿ, ಅದು ಗಾಡಿ ಕಾಲಿಗೆ ಸಿಕ್ಕು ಸತ್ತು. ನೀವ್ ಹೇಳು ನಾಯಿನ ಬೇಕಂದ್ರ ನಾಳಿಗಿ ಸಾಯ್ಸೂನು ಅಂತ, ರೋಡಿಗಿ ಬಿಡ್ರಿ ಅದನ್ನ" ಅಂದ.ನನ್ ಕರ್ಮಕ್ಕೆ ಆ ನಾಯಿ ಮನಿ ಬಿಟ್ಟು ಹೊರಗ ಬರಾಂಗಿಲ್ಲ, ಉತ್ತರಕುಮಾರನಂಗ ಮನ್ಯಾಗ ಇರ್ತಾದ.
ಆಫೀಸಿಗೆ ಹೊಗ್ಬೇಕು ನೊಡ್ರಿ, ಅದಕ್ಕ ಮುಂಜಾನೆ ಬರೊಬ್ಬರಿ ೧೧ಕ್ಕ ಎದ್ದು ರೇಡಿ ಆಗಿ, ಕೆಳಗ ಇಳಿದ್ರ, ಆ ನಾಯಿ ಮುಂದ ಇರು ಕಟ್ಟಿ ಮ್ಯಾಗ ೭-೮ ಮಂದಿ ಅಳಕೋಂತ ಕುಂತಾರ, ಬರಿ ಅವ್ರು ಅಷ್ಟೇ ಆಗಿದ್ರ ಸುಮ್ಮ್ ಹೊಗ್ತಿದ್ದೆ. ಸತ್ತ ನಾಯಿ ಗೆಳ್ಯಾ ನಾಯಿಗೊಳು, ಮಯ್ಯಾಗ ಜೀವಾ ಇರ್ಲಾರ್ದಂಗ ಬಿದ್ದಾರ. ನಾನು ಎನಾರ ಮಾಡಿ,ಅವು ಬೊಗಳು ಹಂಗ ಮಾಡ್ಬೇಕು ಅಂತ ಅವುಗಳ ಹತ್ರ ಹೋದ್ರೆ, ಉಹುಂ ಕಯ್ಯಿನು ಇಲ್ಲಾ ಕುಯ್ಯಿನು ಇಲ್ಲಾ. ಎಲ್ಲಾ ತಮ್ಮ ಗೆಳ್ಯಾನ ಮಿಸ್ ಮಾಡ್ಕೊಳ್ಳೋದು ನೊಡಿ, ನಂಗು ಭಾಳ ಕೆಟ್ಟ ಅನ್ನಿಸ್ತು.
ಈಗ ಈ ಹರ್ಷ ಅವರಿಂದ ಪುನೀತ ಅವರ "ರಾಮ್" ಸಿನೇಮಾದ್ದು ಒಂದು ಹಾಡಿನ ಹಾಗೆ "ಒಂದ್ ಶ್ವಾನ ಪುರಾಣ" ಓದಿದ್ರಿ. ಧನ್ಯವಾದಗಳು.
ವಿಷೇಷ ಸೂಚನೆ: ಈ ಕಥೆಯ ಎಲ್ಲ ಪಾತ್ರಗಳು ನೈಜ ಹಾಗು ಜೀವಂತ (ಆ ಶ್ವಾನ ಒಂದ್ ಬಿಟ್ಟು, ಕ್ಷಮೆ ಇರಲಿ;ಶಾಂತಿ ಸಿಗಲಿ)