ಈ ಸುಪ್ತಚೇತನಕೆ ಗಾನವಾಗಿ ನೀ ಬಾ

ಈ ಸುಪ್ತಚೇತನಕೆ ಗಾನವಾಗಿ ನೀ ಬಾ

ನಲುಮೆಯ ನಲ್ಲೆ ನಿನ್ನ ನೆನಪು ನನಗಾದಷ್ಟು ನಿನಗಾಗುತ್ತಿಲ್ಲವೇ? ನಾನೋ ಭೋರ್ಗರೆವ ಸಮುದ್ರ ನೀನು ಹುಣ್ಣಿಮೆಯ ಚಂದ್ರ ನನಗೆ ಮಾತೇ ಪ್ರಪಂಚ ನಿನಗೆ ಮೌನವೇ ಪ್ರಪಂಚ ನಾ ಚಿಲಿಪಿಲಿ ಹಕ್ಕಿಯಾದರೆ ನೀ ಅದರ ಗೂಡಾಗಿರುವೆ ನಾ ಗುಡುಗು ಸಿಡಿಲು ಸುರಿಸುವ ಕಾರ್ಮೋಡವಾದರೆ ನೀ ದಿವ್ಯಮೌನದ ಆಗಸವಾಗಿರುವೆ ನಾ ಧುಮ್ಮಿಕ್ಕುವ ಜಲಪಾತವಾದರೆ ನೀ ನಿಶ್ಯಬ್ಧದ ಹೊಳೆಯಾಗಿ ಹರಿಯುತ್ತಿರುವೆ ಈ ಸುಪ್ತಚೇತನಕೆ ಗಾನವಾಗಿ ನನ್ನಲ್ಲಿ ನೀ ಲೀನವಾಗು ಬಾ

Comments