ಈ ’ಸುರಬಯಾ’ ವೈರಸ್ ಗೆ ಪರಿಹಾರ ತಿಳಿಸಿ

ಈ ’ಸುರಬಯಾ’ ವೈರಸ್ ಗೆ ಪರಿಹಾರ ತಿಳಿಸಿ

Comments

ಬರಹ

ಇತ್ತೀಚೆಗೆ ನನ್ನ ಕಂಪ್ಯೂಟರ್ ಒಂದು ವೈರಸ್ ನಿಂದ ತೊಂದರೆಗೊಳಗಾಗುತ್ತಿದೆ.

ಅದು ’ಸುರಬಯಾ’ ವೈರಸ್. ಕಂಪ್ಯೂಟರ್ನಲ್ಲಿ ವಿಂಡೋಸ್ ಶುರುವಾಗುವಾಗ ಮತ್ತು ಮುಚ್ಚುವಾಗ ಅದು ಒಂದು ಸಂದೇಶವನ್ನು ತೋರಿಸುತ್ತದೆ. Don't kill me, i'm just send message from your computer Terima kasih telah menemaniku walaupun hanya sesaat, tapi bagiku sangat berarti ........something something ಹೀಗೆ ಏನೇನೋ ಇರುತ್ತದೆ. ಅದನ್ನು OK ಕೊಟ್ಟಮೇಲೆ ಮುಂದೆ ಹೋಗಬಹುದು. ಇಶ್ಟೆ ಆಗಿದ್ದರೆ ಪರವಾಗಿಲ್ಲ. ಆದರೆ ಇದು ಒಳಗಡೆ folderಗಳಿಗೆಲ್ಲಾ ಧಾಳಿ ಮಾಡಿ ಹಾಳು ಮಾಡುತ್ತಿದೆ. folder ಒಳಗಡೆ ಇರುವ fileಗಳು ಕಾಣುವುದಿಲ್ಲ. ಕೆಲವು fake folder ಗಳು ಸೃಷ್ಟಿಯಾಗುತ್ತವೆ. folder ಗಳನ್ನು ಡಿಲೀಟ್ ಮಾಡಿ refesh ಕೊಟ್ಟರೆ ಮತ್ತೆ ಬರುತ್ತವೆ. ಒಂದೊಂದು ವಿಂಡೋಗಳೂ ಬೇರೆಬೇರೆಯಾಗಿ ಓಪನ್ ಆಗಿ my computerನಿಂದ ಒಳಗೆ ಹೋಗಿ ಯಾವುದಾದರೂ ಫೈಲ್ ಓಪನ್ ಮಾಡುವವರೆಗೆ ಆರೆಂಟು ವಿಂಡೋಗಳು ತೆಗೆದುಕೊಳ್ಳುತ್ತವೆ.

ಈ ವಿಷಯವಾಗಿ ಇಂಟರ್ನೇಟ್ ನಲ್ಲಿ ಆ ವೈರಸ್ ತೆಗೆಯುವ ಬಗೆಯನ್ನು ಹುಡುಕಿ ಅದೇ ರೀತಿ ಮಾಡಿದೆ , ಆದರೂ ಕೂಡ ವರ್ಕೌಟ್ ಆಗುತ್ತಿಲ್ಲ. ನಾರ್ಟನ್, ಮೆಕ್ಯಾಫೆ ಮುಂತಾದ antivirusಗಳೂ ಅದನ್ನು ಹಿಡಿಯುತ್ತಿಲ್ಲ.

ಇದು ಎಲ್ಲಿಂದ ಬರುತ್ತದೆ? ಹಾರ್ಡ್ ಡಿಸ್ಕ್ ಪೂರ್ತಿ format ಮಾಡಿ ಹೊಸ ವಿಂಡೋಸ್ ಹಾಕಿದರೂ ಕೆಲವು ದಿನಗಳ ನಂತರ ಹಾಜರಾಗುತ್ತದೆ. pendriveನಿಂದ ಬರುತ್ತಿದೆ ಎಂದು ನನ್ನ ಅಂದಾಜು, ಆದರೆ pendrive ಪೂರ್ತಿ format ಮಾಡಿ ಹಾಕಿದರೂ ಕೂಡ ಮತ್ತದೇ ಗತಿ :(

ದಯವಿಟ್ಟು ಯಾರಾದರೂ ಪರಿಹಾರ ಸೂಚಿಸಿ. ಇದನ್ನು ತೆಗೆಯುವ ವಿಧಾನ ಮತ್ತು ಇದನ್ನು ಹಿಡಿಯುವ antivirusಗಳು ಯಾವುದಾದರೂ ಇದ್ದರೆ ಸಲಹೆ ಮಾಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet