ಈ
ಏನೇ ಹೇಳು ಬೆಂಗಳೂರಲ್ಲಿ,ನಾನು/ನೀನು ಒಂದು ಸೈಟು ತೆಗೆದು ಕೊಳ್ಳಬೇಕೆಂಬುವುದು ನಿಜ ಆಗುತ್ತೋ ಇಲ್ಲೋ ಗೊತ್ತಿಲ್ಲ,ಏಕೆಂದರೆ ಒಂದು ಸೈಟು ಹೋಗಲಿ,ಒಂದು ಸ್ಕ್ವೇರ್ ಫೂಟ್ ಜಾಗ ತೆಗೆದುಕೊಳ್ಳುವುದೂ ದುಸ್ತರವಾಗಿಬಿಟ್ಟಿದೆ.ಮೊನ್ನೆ ನನ್ನ ಗೆಳೆಯ ಹೇಳ್ತಾ ಇದ್ದ,ಬೆಂಗಳೂರಲ್ಲಿ 30*40 ಯಷ್ಟು ಸೈಟು ಇದ್ದ ಬಿಟ್ಟರೆ,ಬದುಕು ಸೆಟ್ಲ ನೋಡಪಾ ಅಂತ.ಆದರೆ ಏನು ಮಾಡೋದು ಈ ಸೈಟುಗಳ ಬೆಲೆ ದಿನೇ ದಿನೇ ಗಗನಕ್ಕೇ ಏರುತ್ತಾ ಇದೆ.
ಈ ಸೈಟುಗಳಲ್ಲಿ ನಾನಾ ಬಗೆಯ ಸೈಟುಗಳಿವೆ.ಶ್ರೀಮಂತರು ಪ್ರತಿಷ್ಟಿತ ವ್ಯಕ್ತಿಗಳು ನಗರಗಳಲ್ಲಿ ಮನೆಕಟ್ಟಿಕೊಳ್ಳಲುತೆಗೆದುಕೊಳ್ಳುವ ಸೈಟುಗಳು,ಪ್ರತೀಷ್ಟಿತ ವ್ಯಕ್ತಿಗಳು ಹೊಂದಿರುವ ತಮ್ಮ ಸ್ವಂತದ ವೆಬ್ ಸೈಟುಗಳು,ಹುಡುಗರು,ಹುಡಿಗಿಯರನ್ನು ಪಟಾಯಿಸಲು ಹಾಕುವ ಸೈಟುಗಳು!!!,ನಾನಾ ರೀತಿಗಳು.ಮನೆಕಟ್ಟಲು ಸೈಟನ್ನು ತೆಗೆದುಕೊಳ್ಳುತ್ತೆನೆಯೋ ಅಥವಾ ಇಲ್ಲವೋ ಗೊತ್ತಿಲ್ಲ.ಆದರೆ ಈ ವೆಬ್ ಸೈಟಿನಲ್ಲಿ ಒಂದು ಅಕೋಂಟುನ್ನು ಹೊಂದುವುದು ಎಷ್ಟು ಮುಖ್ಯ ಅನ್ನೋದು ನನಗೆ ಈಗ ಗೊತ್ತಯ್ತು.ನಾನು ಒಂದು ಬ್ಯಾಂಕಿನಲ್ಲಿ ಕೋಟಿ ಇಟ್ಟು,ಅದನ್ನು ನಮಗೆ ಬೇಕಾದಾಗ ತೆಗೆದುಕೊಳ್ಳುವುದು ಅಥವಾ ಅದನ್ನು ಅಲಿಯೇ ಇಟ್ಟು ದ್ವಿಗುನವಾಗುವವರೆಗೆ ಕಾದು,ಮತ್ತೆ ಎಷ್ಟು ವರುಷ ಇಟ್ಟರೆ ಹೆಚ್ಚು ಹಣ ಆಗುತ್ತೆ ಎನ್ನುವ ದುರಾಸೆ ಯಾರಿಗೆ ಬೇಕು ಮಾರಯ್ತಿ.ಆದರೆ ವೆಬ್ ಸೈಟಿನಲ್ಲಿ ಒಂದು ಸಾರಿ ಅಕೊಂಟು ಮಾಡಿ ನೋಡು,ನಿನ್ನ ಭಾವನೆಗಳನ್ನು ಈ ಖಜಾನೆಯಲ್ಲಿ ಶೇಖರಿಸಿಟ್ಟು ನೋಡು,ಒಂದೇ ದಿನ ಲಕ್ಷಾಂತರ ಜನ,ಅದನ್ನು ಒಂದೇ ಕ್ಲಿಕ್ಕಿನಲ್ಲಿ ಅರ್ಥಮಾಡಿಕೊಳ್ಳುತ್ತಾರೆ.ಅಮೀಖಾನ್ ನಂತಹ ವ್ಯಕ್ತಿಗಳು ಹೆಸರನ್ನೂ ಮತ್ತು ಲಾಲೂಪ್ರಸಾದ್ ನಂತವರು ಸ್ವಾರ್ಥ !!!! ಹೆಸರನ್ನೂ ಮಾಡಿದ್ದಾರೆ.ಆದರೆ ಅದೂ ಕೂಡ ಅವರ ಭಾವನೆಗಳಿಗೆ ಹಿಡಿದ ಇನ್ನೊಂದು ಮುಖದ ಕನ್ನಡಿ.ಮನುಷ್ಯ ಈ ಸ್ವಾರ್ಥಕ್ಕಿಂತ ಭಾವನೆಗಳಿಗೆ ಬೆಲೆಕೊಟ್ಟು ,ಪ್ರತಿಯೊಂದು ಹೆಜ್ಜೆಯಲ್ಲೂ ಕಲಿಯುವಿಕೆಯನ್ನು ತನ್ನ ಸಾಧನವನ್ನಾಗಿ ಮಾಡಿಕೊಂಡರೆ ಎಷ್ಟು ಹಿತ ಅಲ್ಲವೆ.
ಮೊನ್ನೆ ಸಂಪದದಲ್ಲಿ ಒಂದು ಅಕೊಂಟ್ ನ್ನು ಓಪನ್ ಮಾಡಿದೆ.ಸಂಪದವೆಂಬುವುದು ನಮ್ಮದೇ ಆದ ಒಂದು ಬ್ಲಾಗ್ ಹೊಂದಲು ಅವಕಾಶ ಮಾಡಿಕೊಡೊವ ಒಂದು ಸೈಟು.ಅದರ ಅಡಿ ಬರಹ "ಹಳೆ ಬೇರು,ಹೊಸ ಚಿಗುರು". ಅಂತ.ಹಾಂ ಇದರಲ್ಲಿ ನಾವು ಕನ್ನಡದಲ್ಲೇ ಬರೆಯಬೇಕು.
ಅವರಿಗಾಗಿಯೇ ಸಿದ್ದಪಡಿಸಿರುವ ಒಂದು ಸೈಟು.ಇದರಲ್ಲಿ ಈಗಾಗಲೇ ಸಾವಿರಾರು ಜನ ಸದಸ್ಯರಾಗಿದ್ದಾರೆ.ಬಹುತೇಕ ಜನ ಆನ್ ಲೈನ್ ನಲ್ಲೂ ಸಿಗುತ್ತಾರೆ.ಇದರಲ್ಲಿ ನನ್ನದೇ ಆದ ಒಂದು ಬ್ಲಾಗನ್ನು ಕ್ರೀಯೆಟ್ ಮಾಡಿದೆ.ನಾವು ನಮ್ಮ ಅನಿಸಿಕೆಗಳನ್ನು,ಆತ್ಮವಿಮರ್ಶೆಣೆ,ಕಥೆ,ಕವನ,ವ್ಯಾಪರ ಮುಂತಾದವುಗಳ ಬಗ್ಗೆ ಬರೆಯಬಹುದು.ಇದೊಂದು ರೀತಿ ಫ್ರಿಲ್ಯಾನ್ಚೆ ಹುದ್ದೆ ಇದ್ದ ಹಾಗೆ.ನಾನು ಒಂದು ದಿನ ನಿನಗೆ ಬರೆದ ಪತ್ರಗಳಲ್ಲಿ ಕೆಲಯೊಂದನ್ನು ನನ್ನ ಬ್ಲಾಗಿ ಗೆ ಸೇರಿಸಿದೆ.ನೂರಾರು ಜನ ಅದನ್ನು ಹಿಟ್ ಮಾಡಿದರು.ಕೆಲವೊಂದು ಜನ ಅವುಗಳಿಗೆ ಪ್ರತೀಕ್ರಿಯೇನು ಕಳುಹಿಸಿದರು.ಇದರಿಂದ ನಾನು ಕಳೆದುಕೊಳ್ಳುವುದು ಕೇವಲ ಕೆಲವು ರೂಪಾಯಿಗಳನ್ನು.."ಭಾವನೆಗಳು" ಎಂಬ ಅತೀ ಸೂಕ್ಷ್ಮ ಸಂಕೋಲೆ ಗಳಿಗೆ ಬೆಲೆ ಕೊಡದ ನೀನು,ಸ್ವಾರ್ಥವನ್ನೇ ನಿನ್ನ ಜೀವನದ ಬಂಡವಾಳವಾಗಿರಿಸಿಕೊಂಡೆ.ಇಡೀ ಲೋಕ ನಿನ್ನ ಪದತಲದಲ್ಲಿ ಸೇವೆ ಮಾಡಬೇಕು ಎನ್ನುವ ನಿನ್ನ ನಿಷ್ಟುರ ನಡತೆಗಿಂತ,ನಿನ್ನ ನೆನಪಿನ ಕೊಂಡಿಯಲ್ಲಿ ಸಿಕ್ಕು ದಿನವೂ ಬಳಲುವುದರಿಂದ,ಏನು ಪ್ರಯೋಜನವಿಲ್ಲವೆಂಬುದು ಈಗ ನನಗೆ ಅರಿವಾಗತೊಡಗಿದೆ.
ದಿನವೆಲ್ಲಾ, ಉಸಿರು ತಾಕುವಷ್ಟು ಹತ್ತಿರದಲ್ಲಿ ಕುಳಿತುಕೊಂಡು,ನಮ್ಮದೆ ಆದ ಕನಸಿನ ವಿಹಾರದಲ್ಲಿ ಸಂಚರಿಸಿ,ಎಷ್ಟೋಂದು ಭಾವನೆಗಳನ್ನು ವಿನಿಮಯ ಮಾಡಿಕೊಂಡರೂ...ಅವುಗಳಿಗೆ ಬೆಲೆ ಇಲ್ಲದಂತೆ ನಡೆದುಕೊಂಡ ನಿನಗೂ,ಸಾವಿರಾರು ದೂರದಲ್ಲಿ ಕುಳಿತು,ನಾನು ಬರೆದ ಬರಹದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ,ಅವುಗಳನ್ನೋದಿ ಸಾಂತ್ವಾನಿಸುವ ಜನರಿಗೂ ಎಷ್ಟೊಂದು ವ್ಯತ್ಯಾಸ.ನಿನ್ನ ಸ್ವಾರ್ಥವೆಂಬ "ವೆಬ್" ನಲ್ಲಿ ಸಿಲುಕಿ ಸಾಯುವುದಕ್ಕಿಂತ,ಈ ವೆಬ್ ಸೈಟಿನಲ್ಲಿ,ಒಂದು ಅಕೊಂಟು ಹೊಂದಿ ನಮ್ಮ ಭಾವನೆಗಳ ಖಜಾನೆಯನ್ನು ಹೊಂದುವುದು ಎಷ್ಟು ಸಮಂಜಸವಲ್ಲವೇ...!!1
ಈ ಸೈಟುಗಳಲ್ಲಿ "ವೆಬ್ ಸೈಟು" ಎಂಬುದು '"ಅಂತರ್" ಮನಸ್ಸುಗಳ ಸಂಪರ್ಕಕೊಂಡಿಯಾಗಿದೆ......