ಉಟ್ಟ ಬಟ್ಟೆ ಕಳಚಿದೆ..

ಉಟ್ಟ ಬಟ್ಟೆ ಕಳಚಿದೆ..

ಕವನ

ಉಟ್ಟ ಬಟ್ಟೆಯಲ್ಲೆ

ಹೊರ ಹೊರಟಿದ್ದಾನೆ

ಆಧುನಿಕ ಬೊದ್ಧ ?!

ಹೊಸ ವೇಷಗಳ ನಡುವೆ

ಕೊಳೆತ ಮನಸುಗಳ

ಶೋಕರಹಿತ ಸಂಸಾರಿ

 

ನನ್ನ ಧ್ಯೇಯವೇ ಜನರ

ಮನಸ್ಸುಗಳ ನನ್ನತ್ತ ವಾಲಿಸಿ

ಬದ್ಧತೆಯ ಹೆಸರಿನಲ್ಲಿ ಹಣ ಮಾಡುವುದು

ದೋಚಿದ ಸಂಪತ್ತಿನಲ್ಲಿ

ಪುಡಿ ಕಾವಲು ನಾಯಿಗಳ

ಸಾಕಿ ಉಳಿದಿರುವುದರಲ್ಲಿ

ಮಹಡಿಮನೆ ಅಂತಸ್ತಿನ

ವೈಭೋಗ ಮದಿರೆ ಮದಿರೆಯರು !

 

ನುಸಿಯೂ ಸುಳಿಯದ ನುಸುಳದ

ಕೋಟೆಯಲ್ಲಿ ಜನಸಾಮಾನ್ಯರ

ಬದುಕಿಗೆ ಪಾಠ , ಲೀಲೆಯಾಟ !

ನೃತ್ಯ ನಾಟ್ಯ ಸಂಗೀತ ನಾಟಕದಲ್ಲಿ

ಮೈಮರೆವಾಟದಲ್ಲಿ ಸಂತರ ವಾಣಿ ಪ್ರವಚನಗಳು !

 

ನಿದಿರೆಯೇ ಇಲ್ಲದ ರಾತ್ರಿಗಳಲ್ಲಿ

ಅದ್ಭುತ ಆಲಿಂಗನ ಸ್ಪರ್ಷ ಸಂವಹನ ಅನಾದಿ ಅಂತ್ಯ

ಶ್ಯಮಂತಕ ಮಣಿ ಹರಣ

ನಾಟಕದ ತಿವಿಕ್ರಮ ನಾನೇ ನಾನಾಗಿ ಪ್ರಕಟ !

ಆಗುತ್ತಲೇ ಮಸಣ ಕಾಯುವ

ಸತ್ಯ ಹರಿಶ್ಚಂದ್ರನ ಹೆಸರ ಬಳಸಿ

ನ್ಯಾಯ ದೇವತೆಯಾದೆ ?!

-ಹಾ ಮ ಸತೀಶ

 

ಚಿತ್ರ್