'ಉಡುಪಿ' - ಕೃಷ್ಣನ ನೆಲೆವೀಡು, ಹೋಟೆಲ್ ಉದ್ಯಮಿಗಳ, ಜಾಣ-ಜಾಣೆಯರ ತವರುಮನೆ !
ಶ್ರೀ ಕೃಷ್ಣನ ಪವಿತ್ರ ದೇವಾಲಯವಿರುವ, ’ಕರ್ನಾಟಕದ ಉಡುಪಿ ಕ್ಷೇತ್ರ,’ ಮಹಿಮೆಯನ್ನು ಎಷ್ಟು ವರ್ಣಿಸಿದರೂ ಕಡಿಮೆಯೆ ! ’ಉಡುಪ ” ನೆಂದರೆ ಚಂದ್ರನೆಂದು ಅರ್ಥ. ಅದರ ಬಗ್ಗೆ ಅನೇಕ ದಂತ ಕಥೆಗಳು ಪ್ರಚಲಿತದಲ್ಲಿವೆ.
’ಒಡಿಪು’ ಎಂಬ ’ತುಳು’ ಹೆಸರೇ ಮುಂದೆ ಕಾಲಾನುಕ್ರಮದಲ್ಲಿ ’ಉಡುಪಿ’ ಯೆಂದಾಯಿತೆಂದು ಹಲವರ ಅಭಿಪ್ರಾಯ. ಉಡುಪಿಗೆ ಸಮೀಪದಲ್ಲಿರುವ ಮಲ್ಪೆಕಡಲತೀರದಲ್ಲಿರುವ ’ವಡಬಾಂಡೇಶ್ವರ ದೇವಾಲಯ’ ದ ಕಾರ್ಯ ನಿರ್ವಾಹಕರಿಂದ ಈ ಹೆಸರು ಬಂದಿದೆಯೆಂದು ಮತ್ತೆ ಕೆಲವರು ನಂಬುತ್ತಾರೆ. ’ಉಡು’ [ನಕ್ಷತ್ರಗಳು] ಮತ್ತು ’ಪ’ [ಒಡೆಯ] ಎಂಬ ಎರಡು ಸಂಸ್ಕೃತ ಪದಗಳಿಂದ ಬಂತೆಂದು ಮತ್ತೆ ಕೆಲವರ ನಂಬುಗೆ. ಅಂದರೆ ಚಂದ್ರನೆಂದು ಪ್ರತೀತಿಯಿದೆ. ಹಾಗೆ ಚಂದ್ರನ ತಪಃ ಭೂಮಿಯಾಗಿದೆ!
ಒಂದು ದಂತ ಕಥೆಯ ಪ್ರಕಾರ, ಶಾಪಗ್ರಸ್ತನಾದ, ಚಂದ್ರನ ಬೆಳಕು ಕ್ಷೀಣಿಸಿತಂತೆ. ಆತನ ೨೭ ಹೆಣ್ಣುಮಕ್ಕಳು (ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಕ್ಷರಾಜನ ೨೭ ಹೆಣ್ಣುಮಕ್ಕಳನ್ನು ಕೊಟ್ಟು ಮದುವೆ ಮಾಡಿದರಂತೆ] ಚಂದ್ರನು ತನ್ನ ಪರಿವಾರ ಸಮೇತನಾಗಿ ಶಾಪವಿಮೋಚನೆಗಾಗಿ ತನ್ನ ಕಾಂತಿಯನ್ನು ಮತ್ತೆ ಪಡೆಯಲು ಶಿವನನ್ನು ಕುರಿತು ’ಉಡುಪಿಯ ಚಂದ್ರಮೌಳೇಶ್ವರ ದೇವಾಲಯ’ದಲ್ಲಿ ಪ್ರಾರ್ಥನೆ, ತಪಸ್ಸನ್ನು ಆಚರಿಸಿದನು.’ಭೋಲೆನಾಥ’ನು ಚಂದ್ರನ ಶ್ರದ್ಧೆಗೆ ಮೆಚ್ಚಿ, ವಿಶಾಪವನ್ನು ಅನುಗ್ರಹಿಸಿದನು.
ಮತ್ತೊಂದು ವೃತ್ತಾಂತದ ಪ್ರಕಾರ, ೨೭ ಜನರಲ್ಲಿ ಒಬ್ಬಳಾದ ರೋಹಿಣಿಯಲ್ಲಿ ಚಂದ್ರನು ಅತಿಯಾದ ಒಲವನ್ನು ತೋರಿಸದ್ದರಿಂದ ಬೇರೆ ಪತ್ನಿಯರು, ಅಸೂಯೆಗೊಂಡು ತಮ್ಮ ತಂದೆಗೆ ದೂರುಕೊಟ್ಟಾಗ ದಕ್ಷನು ಶಾಪವನ್ನು ಕೊಟ್ಟನಂತೆ. ಅದರ ಪರಿಹಾರಕ್ಕಾಗಿ ’ಅಬ್ಜಾಕಾರಣ್ಯ’ ದಲ್ಲಿ ನಕ್ಷತ್ರಗಳ ರಾಜ ಚಂದ್ರನು, ತಪಸ್ಸನ್ನಾಚರಿಸಿದಾಗ, ಶಿವನು ಪ್ರತ್ಯಕ್ಷನಾಗಿ, ಶಾಪವಿಮೋಚನೆಮಾಡಿದನಂತೆ. ಆಂದರೆ ೧೫ ದಿನ ಕಳಾಹೀನನಾಗಿರುವುದಾಗಿಯು ಮುಂದಿನ ೧೫ ದಿನಗಳಲ್ಲಿ ಕಾಂತಿ ವೃದ್ಧಿಸುವುದಾಗಿಯೂ ಶಾಪ ವಿಮೋಚನಾವರವನ್ನು ಕೊಟ್ಟನು.
ಉಡುಪಿಯು, ’ಶ್ರೀ ಮಧ್ವಾಚಾರ್ಯ’ರು ೧೩ ನೆಯ ಶತಮಾನದಲ್ಲಿ ಸ್ಥಾಪಿಸಿದ ಕೃಷ್ಣ ಮಠಕ್ಕೆ ಹೆಸರುವಾಸಿಯಾಗಿದೆ. ಪುರಾಣದ ಪ್ರಕಾರ, ಒಮ್ಮೆ ಚಂಡಮಾರುತಬಂತು. ’ಮಲ್ಪೆಯ ಕಡಲಿನ ಬಳಿ’, ಅಲ್ಲೇ ಆಹ್ನಿಕಗಳನ್ನು ನೆರೆವೇರಿಸುತ್ತಿದ್ದ ಮಧ್ವರು, ಬಿರುಗಾಳಿಯಿಂದ ತತ್ತರಿಸಿ ದಿಕ್ಕುಗೆಟ್ಟು ಸಾಗುತ್ತಿದ್ದ ಹಡಗನ್ನು ಕಂಡರು. ತಮ್ಮ ತಪಃ ಶಕ್ತಿಯಿಂದ ಅದನ್ನು ಸುರಕ್ಷಿತವಾಗಿ ದಡಕ್ಕೆ ತಂದರು. ಹಡಗಿನ ನಾವಿಕರು ಆನಂದಹೊಂದಿದವರಾಗಿ, ಮಧ್ವಾಚಾರ್ಯರಿಗೆ, ತಮ್ಮ ಬಳಿಯಿದ್ದ ಗೋಪೀಚಂದನದ ಶ್ರೀಕೃಷ್ಣ ಮತ್ತು ಬಲರಾಮರ ವಿಗ್ರಹಗಳನ್ನು ಉಡುಗೊರೆಯಾಗಿ ಕೊಟ್ಟರಂತೆ. ಅದರಂತೆ, ಆಚಾರ್ಯ ಮಧ್ವರು, ಮಲ್ಪೆಯಲ್ಲಿ ಬಲರಾಮರ ವಿಗ್ರವನ್ನು ಪ್ರತಿಷ್ಠಾಪಿಸಿದರು. ಈ ದೇವಾಲಯಕ್ಕೆ ’ವಡಬಾಂಡೇಶ್ವರ’ ಹೆಸರಾಯಿತು.
ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಉಡುಪಿಯ ಕೃಷ್ಣ ಮಠ, ಪ್ರಸಿದ್ಧಿಯಾಯಿತು. ಅಲ್ಲಿನ ಪೂಜೆಯ ಜವಾಬ್ದಾರಿಯನ್ನು ತಮ್ಮ ೮ ಜನ ಶಿಷ್ಯರಿಗೆ ಒಪ್ಪಿಸಿದರು. ಕೃಷ್ಣ ಮಠದ ಬಳಿಯಲ್ಲಿ ಅವರ ಮಠಗಳಿವೆ. ’ಆಷ್ಟಮಠ’ಗಳೆಂದು ಹೆಸರಾಗಿವೆ. ಉಡುಪಿ ಕ್ಷೇತ್ರವು, ’ಶ್ರೀ ಮಧ್ವಾಚಾರ್ಯ’ರ ೧೩ ನೆಯ ಶತಮಾನದಲ್ಲಿ ಸ್ಥಾಪಿಸಿದ ’ಕೃಷ್ಣ ಮಠ’ಕ್ಕೆ ಪ್ರಸಿದ್ಧಿಯಾಗಿದೆ. ಕೃಷ್ಣ ಮಠದ ಬಳಿಯಲ್ಲಿ ೮ ಮಠಗಳಿವೆ. ಅವನ್ನು ’ಆಷ್ಟಮಠ’ಗಳೆಂದು ಕರೆಯುತ್ತಾರೆ. ಅವುಗಳ ಹೆಸರುಗಳು ಹೀಗಿವೆ.
* ’ಪೇಜಾವರ’,
* ’ಪುತ್ತಿಗೆ’,
* ’ಪಲಿಮಾರು’,
* ’ಅದಮಾರು’,
* ’ಸೋಧೆ’,
* ’ಕನಿಯೂರು’,
* ’ಶಿರೂರು’
* ’ಕ್ರಿಷ್ಣ ಪುರ’.
ಅಂದಿನಿಂದ ಪ್ರತಿದಿನದ ಪೂಜೆಗಳನ್ನು ಅಷ್ಟಮಠದ ಯತಿವರ್ಯರು ನಿರ್ವಹಿಸುತ್ತಾ ಬಂದಿದ್ದಾರೆ. ಪ್ರತಿ ೨ ವರ್ಷದಂತೆ, ಪರ್ಯಾಯ ಕಾಲದಲ್ಲಿ ೨ ವರ್ಷಕ್ಕೊಮ್ಮೆ, ಆಡಳಿತದ ಹೊಣೆಯನ್ನು ಮತ್ತೊಂದು, ಸ್ವಾಮಿಗಳ ನೇತೃತ್ವದಲ್ಲಿ ಮಠಕ್ಕೆ ಒಪ್ಪಿಸಲಾಗುತ್ತದೆ. ೧೬ ನೆ ಯ ಶತಮಾನದಲ್ಲಿ ’ಶ್ರೀ ವಾದಿರಾಜಯತಿ’ಗಳ ಸಮಯದಲ್ಲಿ ’ಕನಕದಾಸ’ ನೆಂಬ ದೈವ-ಭಕ್ತನು ಕೃಷ್ಣನ ಆರಾಧನೆಗೆಂದುಉಡುಪಿಗೆ ಬಂದನು, ಆತನು ಕೃಷನ ಪರಮ ಭಕ್ತನಲ್ಲದೆ, ಅನೇಕ ಕಿರ್ತನೆಗಳನ್ನು ರಚಿಸಿ ತನ್ನ ಮಧುರಕಂಠದಿಂದ ಹಾಡುತ್ತಿದ್ದನು. ದೇವಾಲಯದಲ್ಲಿ ಬ್ರಾಹ್ಮಣರಿಗೆ ಮಾತ್ರ ದರ್ಶನ ಮೀಸಲಾಗಿತ್ತು. ಕನಕದಾಸನು ಕೆಳಜಾತಿಯವನಾಗಿದ್ದರಿಂದ ಅವನಿಗೆ ಪ್ರವೇಶದೊರೆಯಲಿಲ್ಲ. ತಕ್ಷಣವೇ ಕಣ್ಣಿಗೆ ಗೋಚರಿಸಿದ ಒಂದು ಕಿಂಡಿಯಿಂದ ಪರಮಾತ್ಮನನ್ನು ನೋಡಲು ಕನಕನು ಪ್ರಯತ್ನಿಸಿದ. ಬೇರೆ ಎಲ್ಲ ದೇವರ ವಿಗ್ರಹಗಳು ಗರ್ಭಗುಡಿಯ ಮುಂದೆ ಭಕ್ತರಿಗೆ ಕಾಣಿಸುವಂತೆ ಇವೆ. ಕನಕನು ಕಿಂಡಿಯಿಂದ ನೋಡಿದಾಗ ದೇವರ ಬೆನ್ನು ಮಾತ್ರ ಕಾಣಿಸುತ್ತಿತ್ತು. ಇದರಿಂದ ಕನಕನಿಗೆ ತೃಪ್ತಿಯಾಗಲಿಲ್ಲ. ಆಗ ಕೃಷ್ಣನೇ ಕನಕನ ಭಕ್ತಿಗೆ ಮೆಚ್ಚಿ, ತಾನೇ ಅವನಿಗೆ ಕಾಣಿಸುವಂತೆ, ತಿರುಗಿಕೊಂಡು ದರ್ಶನವನ್ನು ಕೊಟ್ಟನಂತೆ. ಈಗಲೂ ಆ ಕಿಂಡಿ ಕನಕನ ಕಿಂಡಿಯೆಂದು ಪ್ರಸಿದ್ಧಿಯಾಗಿದೆ. ಮುಂದೆ ಅವರೇ ಕನಕದಾಸರೆಂದು ಹೆಸರಾದರು. ಅವರು ರಚಿಸಿದ ಕೀರ್ತನೆಗಳು ಜಗತ್ಪ್ರಸಿದ್ಧವಾಗಿವೆ.
’ರಥ ಬೀದಿ’ [ನಾಲ್ ಬೀದಿ]
ಕನಕನ ಕಿಂಡಿಯನ್ನು ಅಲಂಕರಿಸಿ, ಅದಕ್ಕೆ ೧೦ ಅವತಾರದ ಸುಂದರ ಚಿತ್ರಗಳನ್ನು ಕೆತ್ತಿ. ವಿಷ್ಣುವಿನ ಅವತಾರದ,ಎಲ್ಲಾ ಚಿತ್ರಗಳನ್ನೂ ಸುಂದರವಾಗಿ ಕೆತ್ತಿದ್ದಾರೆ. ೯ ಚಿಕ್ಕ ರಂಧ್ರಗಳಿಂದ ಚಿಕ್ಕ ಬಾಲಕೃಷ್ಣನ ಮೂರ್ತಿಯನ್ನು ನೋಡಬಹುದು. ಪುಟ್ಟ ಬಾಲಕೃಷನು ಬಲಗೈನಲ್ಲಿ ಕಡಗೋಲು, ಮತ್ತು ಎಡಗೈನಲ್ಲಿ ಹಗ್ಗವನ್ನು ಹಿಡಿದಿರುವ ಕೃಷ್ಣಮೂರ್ತಿ, ಎಲ್ಲರ ಆರಾಧ್ಯ ದೈವವಾಗಿ ಸರ್ವರಿಗೂ ಮಂಗಳವನ್ನು ಉಂಟುಮಾಡುತ್ತಿದ್ದಾನೆ. ವಿಶ್ವದಾದ್ಯಂತ ಕೃಷ್ಣ ಮಠ ಪ್ರಸಿದ್ಧಿ. ಧಾರ್ಮಿಕ ವಿಧಿಗಳಿಗೆ, ದ್ವೈತ ಅಥವ ತತ್ವವಾದಕ್ಕೆ, ಮತ್ತು ತತ್ವಶಾಸ್ತ್ರಾಧ್ಯಯನಕ್ಕೆ, ದಾಸಸಾಹಿತ್ಯಕ್ಕೆ ಕೇಂದ್ರ.
ಹಬ್ಬ ಹರಿದಿನಗಳು :
ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಉಡುಪಿ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಸಮ ವರ್ಷಗಳಲ್ಲಿ ಪ್ರತಿ ೨ ವರ್ಷಕ್ಕೊಮ್ಮೆ, ಪರ್ಯಾಯ ನಡೆಯುತ್ತದೆ. ೨೦೦೬, ೨೦೦೮, ೨೦೧೦. ೧೮ ಜನವರಿ, ಬೆಳಿಗ್ಯೆ ೩ ಗಂಟೆಗೇ ಆರಂಭ. ಈ ಹಬ್ಬದಲ್ಲಿ ’ಟ್ಯಾಬ್ಲೂಗಳು’,ಗಳನ್ನು ವೀಕ್ಷಿಸಲು ಸಾವಿರಾರು ಜನರು ರಸ್ತೆಗಳಲ್ಲಿ ನೆರೆದಿರುತ್ತಾರೆ. ಪ್ರತಿವರ್ಷವೂ ನಡೆಯುವ ಕೃಷ್ಣ ಜನ್ಮಾಷ್ಟಮಿಯದಿನ, ಹುಲಿವೇಷದ ದೃಷ್ಯ ಎಲ್ಲರ ಗಮನ ಸೆಳೆಯುತ್ತದೆ. (ಪಿಲಿ- ತುಳು) ಅಂಗಡಿಗಳಲ್ಲಿ ಬಂದು ವರ್ಗಣಿ-ಹಣ ಸಂಗ್ರಹಿಸುತ್ತಾರೆ. ಶ್ರೀ ’ಲಕ್ಷ್ಮೀವೆಂಕಟೇಶ ದೇವಸ್ಥಾನ’ದಲ್ಲಿ ಭಜನೆ ಸಪ್ತಾಹ ಸತತವಾಗಿ ೭ ದಿನ, ಜರುಗುತ್ತದೆ. ದೇವರನಾಮ ಸಂಕೀರ್ತನೆ ಇರುತ್ತದೆ. ಆಗಸ್ಟ್ ತಿಂಗಳಲ್ಲಿ. ರಥಬೀದಿಯಲ್ಲಿ ರಥೋತ್ಸವ ನಡೆಯುತ್ತದೆ. ಅನೇಕ ಸಂದರ್ಭಗಳಲ್ಲಿ. ಭಕ್ತಾದಿಗಳೆಲ್ಲಾ ಸೇರಿರಥವನ್ನು ಎಳೆಯುತ್ತಾರೆ.
ಉಡುಪಿಯ ಜನಸಂಖ್ಯೆ :
೨೦೦೧ ರ ಜನಸಂಖ್ಯೆಯ ಜನಗಣತಿ, ಪ್ರಕಾರ, (India census) ಉಡುಪಿಯಲ್ಲಿ ೧೧೩,೦೩೯. ಗಂಡಸರು, ೪೯ % ಒಟ್ಟು ಜನಸಂಖ್ಯೆಯ ಭಾಗವಾಗಿದ್ದರು. ೫೧%. ಹೆಂಗಸರು, ಸರಾಸರಿ ವಿದ್ಯಾರ್ಹತೆ, ೮೩%, ದೇಶದ ಸರಾಸ ರಿಗಿಂತಾ, ೫೯.೫ % ; ವಿದ್ಯಾವಂತ ಗಂಡಸರು ೮೬% ಮತ್ತು ವಿದ್ಯಾವಂತ ಮಹಿಳೆಯರು, ೮೧%. ೮ % ಜನ, ೬ ವರ್ಷದ ವಯೋಮಿತಿಯಲ್ಲಿರುವವರು.

ಬಂಟರು, ಮೊಗವೀರರು, ಬಿಲ್ಲವರು, ಕೊಂಕಣಿಗಳು, ಸಾರಸ್ವತ ಬ್ರಾಹ್ಮಣರು, ರಾಜಾಪುರ್ ಸಾರಸ್ವತರು, ಕುಡಲ್ಕರ್, ದೈವಜ್ಞರು, ಶಿವಳ್ಳಿ ಬ್ರಾಹ್ಮಣರು, ಕೋಟ ಬ್ರಾಹ್ಮಣರು, ಕೊರಗರು, ಮಂಗಳೂರಿನ ಕ್ರೈಸ್ತರು,ಮುಂತಾದವರು ಉಡುಪಿಯ ಪ್ರಮುಖ ಜಾತಿವರ್ಗಕ್ಕೆ ಸೇರಿದ ಜನರು.
ಉಡುಪಿಯ ಮುನಿಸಿಪಾಲಿಟಿ :
’ಉಡುಪಿ ಟೌನ್ ಮುನಿಸಿಪಲ್ ಕೌಸಿಲ್” ೧೯೯೫ ರಲ್ಲಿ ಜಾರಿಗೆ ಬಂತು. ಉಡುಪಿಗೆ ಹತ್ತಿರವಾಗಿರುವ ಜಾಗಗಳು, ಮಣಿಪಾಲ್, ಮಲ್ಪೆ, ಮತ್ತು ಸಂತೆಕಟ್ಟೆ, ಎಲ್ಲ ಸೇರಿ, ಸಿಟಿಮುನಿಸಿಪಲ್ ಕೌನ್ಸಿಲ್ ಆಗಿದೆ. ಡಕ್ಷಿಣ ಕನ್ನಡ ಜಿಲ್ಲೆ ೨೫ ಆಗಸ್ಟ್ ೧೯೯೭ ರಲ್ಲಿ, ಉಡುಪಿಯನ್ನು ಪ್ರತ್ಯೇಕಿಸಿ, ಕುಂದಾಪುರ ಮತ್ತು ಕಾರ್ಕಳಗಳನ್ನು ದಕ್ಷಿಣ ಕನ್ನಡದಿಂದ ಬೇರ್ಪಡಿಸಲಾಯಿತು. ಹೊಸದಾಗಿ, ಉಡುಪಿ ಜಿಲ್ಲೆಯನ್ನು ಮಾಡಿದರು.
(UUDA) :
’ದ ಉಡುಪಿ ಅರ್ಬನ್ ಡೆವೆಲಪ್ ಮೆಂಟ್ ಅಥಾರಿಟಿ’ (UUDA) ಉಡುಪಿ ಮತ್ತು ಅದರ ಬದಿಯಲ್ಲಿರುವ ಪ್ರದೇಶಗಳ ’ಟೌನ್ ಪ್ಲಾನಿಂಗ್’ ಮತ್ತು ಕೆಲವು ಜನಹಿತ ಕಾರ್ಯಗಳನ್ನು ನಿರ್ವಹಿಸುತ್ತದೆ. ಉಡುಪಿಯಲ್ಲಿ ತುಳು ಬಹಳ ಪ್ರಮುಖ ಸಂಪರ್ಕ ಭಾಷೆ. ಕನ್ನಡ, ಕೊಂಕಣಿ, ನವಯಾತ್, ಬ್ಯಾರಿ ಭಾಷೆಗಳಿವೆ.
ಪ್ರಮುಖ ಹೈವೇಗಳು ಮತ್ತು ರಸ್ತೆಗಳು :
ನ್ಯಾಶನಲ್ ಹೈವೇ-೧೭ ಉಡುಪಿಮುಖಾಂತರವೇ ಸಾಗುತ್ತದೆ. ಬೇರೆ ಪ್ರಮುಖ ರಸ್ತೆಗಳು, ಸ್ಟೇಟ್ ಹೈವೇಗಳು, ಕೇರಳಕ್ಕೆ, ಧರ್ಮಸ್ಥಳಕ್ಕೆ, ಶಿವಮೊಗ್ಗ, ಶೃಂಗೇರಿಗೆ ಸಂಪರ್ಕ ಕಲ್ಪಿಸುತ್ತವೆ. NH 17 ಮಂಗಳೂರು, ಕಾರ್ವಾರ, ಕುಂದಾಪುರದ ಮುಖಾಂತರ, ನೀಡುತ್ತದೆ. ಖಾಸಗೀ ಮತ್ತು ಸರಕಾರಿ ಬಸ್ ಗಳು, ಉಡುಪಿಗೆ, ಮತ್ತು ಕರ್ನಾಟದ ಎಲ್ಲಾ ಭಾಗಗಳಿಗೂ ಕಲ್ಪಿಸುತ್ತವೆ. ಕೊಂಕಣ್ ರೈಲ್ವೆ,ಸ್ಟೇಶನ್ ಹತ್ತಿರದಲ್ಲೇ ಇದೆ. ’ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ’ ವೆ ಅತಿ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು, ೫೦ ಕಿ. ಮೀ. ದೂರದಲ್ಲಿದೆ. ಉಡುಪಿ, ಸಿಟಿ ಬಸ್ ಸ್ಟಾಂಡ್ ನಿಂದ ಶುರುವಾಗಿ, ೫ ಕಿ. ಮೀ. ದೂರದಲ್ಲಿರುವ ಕಡಲ ತೀರ, ಮಲ್ಪೆ, ಗಂಗೋಲಿ, ಉಡುಪಿಯಿಂದ ೩೬ ಕಿ. ಮೀ.ದೂರದಲ್ಲಿದೆ. ಹೊಸ ಮಂಗಳೂರು ಬಂದರು ೫೦ ಕಿ. ಮೀ. ದೂರದಲ್ಲಿದೆ.
ಉಡುಪಿಯ ಸಾಂಸ್ಕೃತಿಕ ಪರಂಪರೆ :
ಭೂತ ಕೋಲ, ಆಟಿ, ಕಳಂಜ, ಕರಂಗೊಲು, ನಾಗಾರಧಾನೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಇದಲ್ಲದೆ, ದೀಪಾವಳಿ, ದಸರಾ ಮತ್ತು ಕ್ರಿಸ್ಮಸ್ ಯಕ್ಷಗಾನ ತುಂಬಾ ಜನಪ್ರಿಯ. ’ರಥಬೀಧಿ ಗೆಳೆಯರ ತಂಡ,” ಉಡುಪಿಯ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ.
ಎನ್. ಎಚ್. ೧೭, NH 17 ನ್ನು ಅಗಲಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸೂರತ್ಕಲ್ ನಿಂದ ಕುಂದಾಪುರಕ್ಕೆ, ೪ ದಾರಿಗಳನ್ನು ಮಾಡುವ, ದೊಡ್ಡರಸ್ತೆ, ನಗರದ ಮಧ್ಯೆಯಲ್ಲಿ ಹಾದುಹೋಗುತ್ತದೆ. ೨ ಪ್ಲೈಓವರ್ ಗಳು, ಕಿನ್ನಿ ಮುಲ್ಕಿ ಮತ್ತು ಕರಾವಳಿಯ ಸಂಗಮದಲ್ಲಿ ಬರಲಿವೆ. ಇವು ವಾಹನ ಸಂಚಾರಕ್ಕೆ ಸಹಾಯಮಾಡುವ ನಿಟ್ಟಿನಲ್ಲಿ ತೆಗೆದುಕೊಂಡ ಕೆಲವು ಕ್ರಮಗಳು.
ಮಣಿಪಾಲ್ ನಲ್ಲಿ ಭಾರತೀಯ ವಿದ್ಯಾರ್ಥಿಗಳಲ್ಲದೆ, ವಿದೇಶಿ ವಿದ್ಯಾರ್ಥಿಗಳಿದ್ದಾರೆ. ವಿದೇಶಗಳಲ್ಲಿ ನೆಲಸಿದ, ನಮ್ಮ ದೇಶಿಯರು, ಮಣಿಪಾಲ್ ನಲ್ಲಿ ಒಂದು ವಿಮಾನನಿಲ್ದಾಣ ಮಾಡುವ ಬಗ್ಗೆ ಸರಕಾರಕ್ಕೆ ಬೇಡಿಕೆ ಕೊಡುತ್ತಿದ್ದಾರೆ. ’ಕಾಪ್ಟನ್ ಗೋಪಿನಾಥ್’, ಎ. ಟಿ. ಆರ್ ವಿಮಾನಗಳನ್ನು ಇಳಿಸುವ [ATR type aircrafts] ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇದು ಕಾರ್ಯರೂಪಕ್ಕೆ ಬರಬಹುದು.
’ಶಾಪಿಂಗ್ ಮತ್ತು ಮಾಲ್, ’ಮಲ್ಟಿಪ್ಲೆಕ್ಸ್’ ಸಿನಿಮಾಮಂದಿರ’ಗಳ ರಚನೆಗೆ ಒತ್ತಾಯ:
ಮುಖ್ಯಮಂತ್ರಿ ಎಡಿಯೂರಪ್ಪನವರು, ಮೈಸೂರು ಮತ್ತು ಮಂಗಳೂರಿನಲ್ಲಿದಂತೆ, ’ಮಾನೋರೈಲ್” ನ್ನು ಉಡುಪಿಗೂ ವಿಸ್ತರಿಸಲು ಅನುಮತಿ ನೀಡಿದ್ದಾರೆ. ಅತಿ ಹೆಚ್ಚಾಗಿರುವ ಜನಸಂದಣಿಯನ್ನು ನಿಯಂತ್ರಿಸಲು ಇದೊಂದು ಸುಲಭ ಉಪಾಯ. ಉಡುಪಿಯಲ್ಲಿ ಈಗಾಗಲೇ ಒಂದು ಸೂಪರ್ ಮಾರ್ಕೆಟ್, ’ಬಿಗ್ ಬಝಾರ್’ ಬಂದಿದೆ. ಖಾಸಗಿ ಕಟ್ಟಡ ನಿರ್ಮಾಪಕರು, ’ಶಾಪಿಂಗ್ ಮತ್ತು ಮಾಲ್, ’ಮಲ್ಟಿಪ್ಲೆಕ್ಸ್’ ಸಿನಿಮಾಮಂದಿರ’ ಗಳನ್ನು ತೆರೆಯಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಉಡುಪಿಯ ಬಳಿಯಲ್ಲಿರುವ ಪರ್ಯಟಕ ಸ್ಥಳಗಳು :
* ಕೊಲ್ಲೂರು-ಮೂಕಾಂಬಿಕ ಅಮ್ಮನವರ ದೇವಸ್ಥಾನ,
* (ಮರವಂತೆ ಕಡಲ ತೀರ,
* ಮಲ್ಪೆ ಬಂದರು
* ಕಾಪು ದೀಪಸ್ಥಂಭ
* ಕಾರ್ಕಳ ಗೊಮ್ಮಟೇಶ್ವರ ಚತುರ್ಮುಖ ಬಸದಿ
* ಅನಂತಶಯನ ದೇವಸ್ಥಾನ
* ವೇಣೂರಿನ ಗೊಮ್ಮಟೇಶ್ವರ,
* ಅತ್ತೂರಿನ ಸೇಂಟ್ ಲಾರೆನ್ಸ್ ಇಗರ್ಜಿ
* ಸೆಂಟ್ ಮೇರಿ ದ್ವೀಪ
* ಮೂಡುಬಿದರೆಯ ೧,೦೦೦ ಕಂಬಗಳ ಬಸದಿ
* ಮಣಿಪಾಲ್
* ಹೆಬ್ರಿ,
* ಬೆಳಂಜೆ,
* ಬೈಂದೂರ್ ಕೋಸಳ್ಳಿ ಜಲಪಾತ.
* ಹೊಡೆ ಸಮುದ್ರ.
ಉಡುಪಿ ತಾಲ್ಲೂಕಿನ ರಚನೆ :
ಆಗಸ್ಟ್ ೧೯೯೭ ರಲ್ಲಿ, ಉಡುಪಿ, ಕುಂದಾಪುರ, ಮತ್ತು ಕಾರ್ಕಳಗಳನ್ನು ಪ್ರತ್ಯೇಕಿಸಿ, ಉಡುಪಿ ಜಿಲ್ಲೆಗೆ ಸೇರಿಸಿ ಪ್ರತ್ಯೇಕವಾಗಿ , ಉಡುಪಿ ಜಿಲ್ಲೆ ಹೊಸದಾಗಿ ರಚಿಸಲ್ಪಟ್ಟಿತು.೨೦೦೧ ರಲ್ಲಿ ಜನಸಂಖ್ಯೆ ೧,೧೦೯,೪೯೪, ೧೯೯೧ ರಲ್ಲಿ ೬.೮ % ಕಡಿಮೆ. ತುಳು ಹೆಚ್ಚುಮಾತಾಡುವವರು ಇದ್ದಾರೆ. ಅದರಿಂದಾಗಿ ಒಟ್ಟಾರೆ, ತುಳುನಾಡೆಂದು ಕರೆಸಿಕೊಳ್ಳುತ್ತದೆ. ಕನ್ನಡ, ನವಾಯತಿ, ಕೊಂಕಣಿ ಭಾಷೆಗಳು ಮಾತಾಡಲ್ಪಡುತ್ತವೆ. ಮುಂಬೈನಲ್ಲಿ ವಾಸಿಸುತ್ತಿರುವ ಕರಾವಳಿ ಕನ್ನಡದ ಜನ, ತಮ್ಮನ್ನು ತುಳು-ಕನ್ನಡಿಗರೆಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ.
-ಚಿತ್ರ. ಪ್ರಕಾಶ್ ಮತ್ತು ವೆಂಕಟೇಶ್.
.