ಉಣ್ಣು, ತಿನ್ನು

ಉಣ್ಣು, ತಿನ್ನು

Comments

ಬರಹ

ಕನ್ನಡದಲ್ಲಿ (ತೆನ್ನುಡಿಯಲ್ಲಿ) ತಿನ್ನುವ ಕ್ರಿಯೆ ಸೂಚಿಸಲು ಉಣ್ಣು ಮತ್ತು ತಿನ್ನು ಎರಡು ಪದಗಳಿವೆ. ಆದರೆ ಇಲ್ಲಿ ಅರ್ಥದಲ್ಲಿ ವ್ಯತ್ಯಾಸವಿದ್ದ ಹಾಗೆ ತೋಱುತ್ತದೆ. ತಿನ್ನು ಅಂದರೆ ಸುಮ್ಮನೆ ಬಾಯಿರುಚಿಗೋ, ಸ್ವಲ್ಪ ಸಮಯ ಹಸಿವು ತಡೆಯಲೋ ತಿನ್ನುವುದು. ಪೋಷಣೆಯ ದೃಷ್ಟಿಯಲ್ಲಿಟ್ಟುಕೊಂಡು ಆಹಾರ ಸೇವಿಸುವುದು ಮಾತ್ರ ಉಣ್ಣುವುದು. ಊಟವೂ ಪೋಷಣೆಗೋಸ್ಕರವೇ. ’ಊಡು’ವಿನ ಕೃದಂತ ಭಾವನಾಮವೇ ಊಟ. ಹಾಗಾಗಿಯೇ ತಾಯಿ ಮಗು ಬೆಳೆಯಲೆಂದೇ ಮೊಲೆಯೂಡುವುದು. ಹಾಗೆಯೇ ನೋಡಿ ’ಉಣ್ಣಿಂ ತಂದ ಕೂೞನೂ ಸಂಗಮದೊಳ್’ ಎಂದ ಕವಿರಾಜಮಾರ್ಗ. ಕಾಟಾಚಾರಕ್ಕೊ ಅಥವಾ ಬೇಱೆಯವರಿಗೆ ಊಟ ಹಾಕಬೇಕೆಂದು ಹೇೞುವಾಗ ’ಕೂೞ್ ತಿನ್ಕೊಂಡು ಹೋಗೋ’ ಎನ್ನುತ್ತೇವೆ. ಮಧ್ಯಾಹ್ನ ’ಏನೋ ಒಂದಿಷ್ಟು ತಿಂದರಾಯ್ತು’ ಎನ್ನುತ್ತೇವೆಯೇ ಹೊಱತು ’ಏನೋ ಉಂಡರಾಯ್ತು’ ಎನ್ನುವುದಿಲ್ಲ. ಹಾಗೆಯೆ ಹೊಟ್ಟೆ ತುಂಬಾ ಉಂಡ ಅನ್ನುತ್ತೇವೆ. (ಸಾಮಾನ್ಯ ತಿಂದ ಅನ್ನೋಲ್ಲ.) ಪೋಷಣೆಯಿಲ್ಲದಿರುವ ತಿಂಡಿ ತಿನ್ನುತ್ತೇವೆ. ಪೋಷಣೆಗೋಸ್ಕರ ಅನ್ನವನ್ನು ಅಚ್ಚಗನ್ನಡದಲ್ಲಿ ಕೂೞನ್ನು ಉಣ್ಣುತ್ತೇವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet