ಉದಯವಾಗಲಿಲ್ಲ

ಉದಯವಾಗಲಿಲ್ಲ

ಕವನ

ಉದಯವಾಗಲಿಲ್ಲ,

ಬಡವನ ಬಡಾ ಆಸೆಗಳು

ಚಿಗುರೊಡೆಯಲಿಲ್ಲ

ಜನಸಾಮಾನ್ಯನ

ಬದುಕಿನ ಕನಸುಗಳು

ಮುರುಟಿ ಹೋದವು 

ಬೇಕಿತ್ತೆ ಇವನಿಗೆ ಸ್ವಾತಂತ್ರ್ಯ ?

ಈ ಗುಲಾಮಿತನಕ್ಕಿಂತ

ಅದೇ ಎಷ್ಟೋ ವಾಸಿಯಾಗಿತ್ತೋ ಏನೋ ?!

 

ಅಂದು ಬಡವನಿಗೆ ಬದುಕಲು

ಕಾಡುಗಳಿದ್ದವು

ಇಂದು ಕಾಡುಗಳಿದ್ದರೂ ಅಲ್ಲಿ

ನಡೆದಾಡುವ ಸ್ವಾತಂತ್ರ್ಯವಿಲ್ಲ

ನಡೆದಾಡುವ ಸ್ವಾತಂತ್ರ್ಯ ಇದ್ದರೂ

ಬಂದೂಕಿನ ಕೊನೆಯ ಬೆನ್ನಿಗೆ ತಾಗಿಸಿ ಕೊಂಡೇ ?

 

ಮಹಾಮಾರಿಯ ಭೀಕರತೆಗೆ ನಿಜವಾಗಿಯೂ ಸತ್ತವನು

ಜನಸಾಮಾನ್ಯ!

ಇವರಿಂದಲೇ ಓಟು ಹಾಕಿಸಿಕೊಂಡು ಗೆದ್ದವನು ಸಾಮಾನ್ಯ ,ಸರಕಾರದ ಕೆಲಸಕ್ಕೆಂದು ಕೊಟ್ಟ ಹಣದಿಂದಲೇ ಏನೂ ಆಗದವನಂತೆ ಮರಳಿ ಬದುಕಿ ಬರುತ್ತಿದ್ದಾನೆ. ಆಡಳಿತ ಅವರ ಕಡೆ ನೋಡದೆ ; ಇನ್ನಾದರೂ ಜನರ ಕಡೆ ತಿರುಗಿ ನೋಡಲಿ ಛಲವಾದಿಯೆ !

 

ಪ್ರಜಾಪ್ರಭುತ್ವ ಈ ದೇಶದಿಂದ ಯಾವತ್ತೋ ಕಾಲ್ಕಿತ್ತಿದೆ

ಉಳ್ಳವರಿಗೆ ಜನಸಾಮಾನ್ಯರ ಸವಲತ್ತುಗಳು ಎನ್ನುವಂತಾಗಿದೆ, 

ಇಲ್ಲಿ ಸಂವಿಧಾನ ಇದೆಯೋ ಎನ್ನುವ ಸಂಶಯ ಬರುತ್ತಿದೆ. ಎಲ್ಲವೂ ಸಂವಿಧಾನದ ಅಡಿಯಲ್ಲಿಯೆಂದು ಹೇಳಿ ರಾಜರ ಆಡಳಿತದ ಆಳ್ವಿಕೆಗೆ ಈ ಸ್ವಾತಂತ್ರ್ಯ ನಾಡು ಒಳಪಟ್ಟಿರುವುದು ನಮ್ಮ ದುರಂತ ದುರಂತ ದುರಂತ !!

-ಹಾ ಮ ಸತೀಶ

 

ಚಿತ್ರ್