ಉದ್ದೇಶ
ನಾ ನಿನ್ನ ಪ್ರೀತಿಸುತ್ತೇನೆ
ನಿನ್ನ ನಯನಗಳಲ್ಲಿ ನನ್ನ ನೊಟವನ್ನು
ಸೇರಿಸಿರಲಿಲ್ಲ(ಸೇರಿಸಲಲ್ಲ)
ಮಾತಿನ ನಡುವೆ ಮಿಂಚಿನ ಸಂಚನು
ಮಾಡಿರಲಿಲ್ಲ(ಮಾಡಲೂ ಅಲ್ಲ)
ನಾ ನಿನ್ನ ಪ್ರೀತಿಸುತಿದ್ದುದು
ನಿನ್ನ ಮೃದು ಮೈಯನು ಸ್ಪರ್ಶಿಸಲೂ ಅಲ್ಲ(ಸ್ಪರ್ಶಿಸಿರಲಿಲ್ಲ)
ಸೇಬು ಗಲ್ಲವ ಚುಂಬಿಸಲೂ ಅಲ್ಲ(ಚುಂಬಿಸಿರಲಿಲ್ಲ)
ನನ್ನ ಬಿರುಕು ಎದೆಯ ಮೇಲೆ ನಿನ್ನ ಸೀರೆಯ
ಹೊದಿಸಿರಲಿಲ್ಲ ತೆರೆಯಲ್ಲೇ ನಿನ್ನಲಿನ
ಮುತ್ತು ಕಳವು ಮಾಡಲೂ ಅಲ್ಲ(ಮಾಡಿರಲೂ ಇಲ್ಲ)
ನಾ ನಿನ್ನ ಪ್ರೀತಿಸುತ್ತಿದ್ದೆ
ನಿನ್ನಿಂದ ಅಗಾದವಾದದ್ದೇನು ಪಡೆಯ ಬೇಕೆಂದಲ್ಲ
ಸೊಗಸು,ಸವಿಸ್ವಪ್ನ ಕಾಣಬೇಕೆಂದಲ್ಲ(ಕಾಣಲೂ ಇಲ್ಲ)
ನಾ ನಿನ್ನ ಪ್ರೀತಿಸುತ್ತಿದ್ದೇನೆ ಈಗಲೂ ಎಂದೆಂದಿಗೂ
ಏಕೆಂದರೆ ಕಸದ ತೊಟ್ಟಿಯಲ್ಲಿದ್ದ ನನ್ನತಂದು
ನಿನ್ನ ಮಮತೆ,ವಾತ್ಸಲ್ಯದ
ಮಡಿಲ ಬೆಚ್ಚನೆಯ ತಾಪದಲ್ಲಿ ಸುಖ ನೀಡಿ
ಹೆತ್ತವರಂತೆ(ಹೆರದಿದ್ದರೂ)ನನ್ನ ಕಾಪಾಡಿದಕ್ಕೆ
ನನ್ನ ದುಗುಡ ದುಮ್ಮಾನತುಂಬಿದ
ಶಿರವಿರಿಸಿ ಕಣ್ಣೀರ ಪನ್ನೀರಲ್ಲಿ ನಿನ್ನ ನಳಿನ ಪಾದತೊಳೆದು
ಚಿರರುಣಿಯಾಗುವ ಬಯಕೆಗಾಗಿ
-ವಿ ಕೃಷ್ಣಮೊರ್ತಿಅಜ್ಜಹಳ್ಳಿ ಬಿ ಎಂ ಎಸ್ ಸಿ ಇ