ಉದ್ಧಾರ

ಉದ್ಧಾರ

ಕವನ

ಉದ್ಯೋಗಸ್ಥ ವಧುವೇ ಬೇಕೆಂದ ವರ
ಉದ್ಧರಿಸಲು ಸಂಸಾರ
ಸಿಗದೆ ವರ್ಗಾವಣೆ ಮದುವೆಯ ನಂತರ
ಇರಬೇಕಾಯಿತು ದೂರ-ದೂರ.

ಪ್ರಾರಂಭವಾಯಿತು ಓಡಾಟ
ಇಬ್ಬರದು ವಾರ-ವಾರ
ವಿನಿಮಯವಾಯಿತು ವಿರಹ
ದೂರವಾಣಿ ಮುಖಾಂತರ.

ಸರಿಯಿತು ಶಾಂತಿ, ನಿದ್ರೆ
ಇಬ್ಬರಿಂದ ದೂರ
ವ್ಯರ್ಥವಾಯಿತು ಹಣ, ಶ್ರಮ,
ಸಮಯ ಇಬ್ಬರ

ಉದ್ಧಾರವಾಯಿತೋ ಇಲ್ಲವೋ ಇಬ್ಬರೂ
ಉದ್ಯೋಗ ಮಾಡುವುದರಿಂದ ಸಂಸಾರ
ಆದದ್ದಂತೂ ನಿಜ ಸಾರಿಗೆ ಸಂಸ್ಥೆ ಹಾಗು
ದೂರವಾಣಿ ಇಲಾಖೆಗಳ ಉದ್ಧಾರ.

Comments