ಉಪೇಂದ್ರನ ಹತ್ತನೇ ಅವತಾರ ( ಇನ್ನೂ ಎತ್ತಲಿ ದಶಾವತಾರಗಳು !) :ಸೂಪರ್ !
ಬರಹ
ಅಂತೂ ಕೊನೆಗೂ ಉಪ್ಪಿ ೧೦ ವರ್ಷಗಳ ನಂತರ ತಲೆಗೆ ಟೋಪಿ ಹಾಕಿದ್ದಾನೆ ,ಅರ್ಥಾತ್ ಆಕ್ಷನ್ ಕಟ್ ಅನ್ನಲಿದ್ದಾನೆ. ಈ ಭಾರಿ ಅದೊಂದು ಒಳ್ಳೆಯ ಚಿತ್ರ ಅಂತು ಕೊಡುತ್ತಾನೆ ಅಂತ ನಂಬಿಕೆ ಇದೆ. ಉಪ್ಪಿ ಇಷ್ಟ ಆಗೋದೇ ಆ ಕಾರಣಕ್ಕೆ . ಮನಸಿನ ಮಾತನ್ನು ಹೇಳುವ ಅಂಜಿಕೆ ಇರುವ , ಇಲ್ಲದಿರುವ ಜನರಿಗೆ ಅವ ಇಷ್ಟ ಆಗ್ತಾನೆ .
ವಿಭಿನ್ನ ಗೆಟಪ್ , ಹಾವ ಭಾವ ,ಚಿತ್ರಿಸುವ ವಿಧಾನ ,ಘಳಿಗೆಗೆ ಒಮ್ಮೆ ಕೊಡುವ ಟ್ವಿಸ್ಟ್ , ಫ್ಯಾಮಿಲಿ ಕೂತು ನೋಡಲಾಗದ ಚಿತ್ರದಲ್ಲಿ ಒಂದು ಅಡಗಿ ಕುಳಿತ ಸಂದೇಶ , ಅಧ್ಯಾತ್ಮ ದ ಟಚ್ ಕೊಟ್ಟು ಎಲ್ಲ ವರ್ಗವನ್ನೂ ಕೊರಿಸಿ ಚಿತ್ರ ನೋಡಿಸುತ್ತಾನೆ . ಅವನ ಚಿತ್ರದಲ್ಲಿ ಅವನು ಹೇಳುವ ಸಂದೇಶದ ಹಿಂದಿರುವ ಮಸಾಲೆ ಮರೆತು ನೋಡಿದರೆ ಚಿತ್ರ "ಸೂಪರ್" !
ಗಣೇಶ್ ಕಾಸರಗೋಡ್ ವಿ.ಕ ದಲ್ಲಿ ಬರೆಯುತ್ತಾರೆ , ಅದೊಂದು ಮಟ ಮಟ ಮಧ್ಯಾನ್ಹ ಉಪೇಂದ್ರ ಅವರ ಆಫೀಸ್ ಗೆ ಬಂದನಂತೆ . ಅದಿನ್ನೂ ಉಪೇಂದ್ರ , ಅನಂತನ ಅವಾಂತರ ದ ಕಾಮಣ್ಣ ನ ಪಾತ್ರ ಮಾಡಿದ್ದ ಅಷ್ಟೇ .
ಅವರು ಹೀಗೆ ಬರೆಯುತ್ತಾರೆ . " ನಾನು ನನ್ನಷ್ಟಕ್ಕೆ ರೂಪ ತಾರ ದ ತಿಂಗಳ ಕೊನೆಯ ಲೇಖನಗಳ ಸರಮಾಲೆಯಲ್ಲಿ ಬಂಧಿಯಾಗಿ ಬರೆಯುತ್ತಾ ಇದ್ದೆ . ಒಬ್ಬ ಸಣಕಲು ದೇಹದ ಕೂದಲು ಸುರುಟಿದ ,ಕನ್ನಡಕ ಹಾಕಿ ನಿಂತ ಹುಡುಗನನ್ನು ಕಂಡೆ . ಅವನನ್ನು ಹಾಗೆ ಮೇಲಿನಿಂದ ಕೆಳಗೆ ದಿಟ್ಟಿಸಿದೆ . ಸವೆದು ಹೋದ ಚಪ್ಪಲುಗಳು ಅವನ ಉಸಿರಿನ ಜೊತೆ ಮೇಲೆಕೆಳಗೆ ಹೋದಂತೆ ಕಾಣಿಸಿತು . ನಾನು ಕೇಳಿದೆ , ಏನಪ್ಪಾ ವಿಚಾರ , ಏನು ಬಂದಿದ್ದು ? ಅವ ಅಂದ, ಸರ್ ನೀವು ಗಣೇಶ್ ಕಾಸರಗೋಡ್ ಅಲ್ವ ?
ಹೌದು ಅಂದೇ ನಾನು ಬರೆಯುವುದನ್ನು ಮುಂದುವರೆಸುತ್ತಾ .
ಸರ್ ,ನಾನು ಉಪೇಂದ್ರ ಅಂತ , ಕಾಶಿನಾಥ್ ಚಿತ್ರದಲ್ಲಿ ಕಾಮಣ್ಣ ನಾನೇ ಸಾರ್ !
ಒಹ್ ! ಹೌದಾ ! ಒಳ್ಳೇದು , ಈಗ ನನ್ನಿಂದ ಏನಾಗಬೇಕಿತ್ತು , ಬರೆಯುವ ಅವಸರದಲ್ಲಿದ್ದೆ ನಾನು .
ಸಾರ್ , ನನ್ನ ಬಗ್ಗೆ ಒಂದು ಅರ್ಟಿಕಾಲ್ ಬರೀತಿರ ಸಾರ್ ರೂಪತಾರ ದಲ್ಲಿ !
ಈಗ ಪೆನ್ನು ಕೆಳಗಿಟ್ಟು, ಮತ್ತೊಮ್ಮೆ ಇವನನ್ನು ನೋಡಿದೆ . . .
ಎಲಾ ಇವನ !
ನಾನು ಹೊಸ ಹುಡುಗ , ಹುಡುಗಿಯರ ಬಗ್ಗೆ ಬರೆಯುತ್ತಿದ್ದುದು ನಿಜ . ಆದ್ರೆ ಈ ತರ ಅಲ್ಲ !
ಯಾಕಪ್ಪ ಈಗ ಸಡನ್ ಆಗಿ ಈ ಯೋಚನೆ ?
ನನ್ನ ವ್ಯಂಗ್ಯ ಅರ್ಥ ಮಾಡಿಲ್ಲ ಅನ್ನಿಸಿ ಹುಡುಗ ಮುಂದುವರಿಸಿದ , ಸಾರ್ ನಾನು ಒಂದು ಫಿಲಂ ನಿರ್ದೇಶನ ಮಾಡಬೇಕು ಅಂತ ಇದ್ದೀನಿ . ನೀವು ಒಂದು ಅರ್ಟಿಕಾಲ್ ಬರೆದ್ರೆ ಮಾತ್ರ ಈಗ ನಂಗೆ ಪ್ರೋಡುಸರ್ ಸಿಗೋದು ಸಾರ್ . ನನಿಗೆ ಯಾರು ಗಾಡ್ ಫಾದರ್ ಇಲ್ಲ ಸಾರ್ ಅಂದ !
೨೦ ರ ಹುಡುಗ ಈ ತರ ಮಾತು ಹೇಳೋದು ನನಗ್ಯಾಕೋ , ಇವನ ಪ್ರಾಯ ದೋಷ( ಆವೇಶ ! ) ಅಂತ ಅನ್ನಿಸಿ , ನಾನು ಸರಿನಪ್ಪ ಬರೆಯೋಣ . ನಿನ್ನ ಫೋಟೋ , ವಿವರ ಕೊಟ್ಟು ಹೋಗು ಅಲ್ಲಿ ! ಅಂದೆ ನಾನು .ಅವನ ಎದುರಿಗೆ ಇಲ್ಲ ಅಂದು ನಿರಾಶೆ ನೋಡುವ ಮನಸ್ಸಾಗಲಿಲ್ಲ . ಹುಡುಗ ಖುಷಿಯಲ್ಲಿ ಫೋಟೋ , ವಿವರಣೆ ಕೊಟ್ಟು , ತನ್ನ ಆ ತುಂಬು ಕೂದಲನ್ನು ಕಾಯಲ್ಲಿ ತೀಡುತ್ತ , ಆ ಸುರುಟಿದ ಅಂಗಿಯನ್ನು ಕಯ್ಯಲ್ಲಿ ಎಳೆಯುತ್ತ , ಆ ಸವೆದ ಚಪ್ಪಲಿಯನ್ನು ಕುಟ್ಟುತ್ತಾ ನನ್ನ ಕೊನೆಯಿಂದ ಹೊರ ನಡೆದ.ಎರಡು ನಿಮಿಷ ಅವನನ್ನೇ ನೋಡುತ್ತಾ ನಿಂತೆ ,ಪೆನ್ನು ಕೆಳಗಿಟ್ಟು .
ಅಷ್ಟೇ !
ನಾನು ಲೇಖನ ಬರೆಯಲೂ ಇಲ್ಲ , ಉಪ್ಪಿ ಮತ್ತೆ ಬರಲೂ ಇಲ್ಲ ! ಇದಾಗಿ ಎರಡು ವರ್ಷ ೧೯೯೨ ರಲ್ಲಿ ೨೪ ರ ಹರೆಯದಲ್ಲಿ ಉಪ್ಪಿಯ ಮೊದಲ ಚಿತ್ರ (ನಿರ್ದೇಶಕನಾಗಿ ) " ತರ್ಲೆ ನನ್ನ ಮಗ " ತೆರೆ ಕಂಡಿತು . ಜಗ್ಗೇಶ್ ಕನ್ನಡ ಚಿತ್ರ ರಂಗ ಕಾಮೆಡಿ ಗೆ ಇನ್ನೊಂದು ಹೆಸರಾದರು .ಉಪೇಂದ್ರ ಪೂರ್ಣ ಪ್ರಮಾಣದ ನಿರ್ದೇಶಕನಾದ .
ಇವತ್ತು ನಾನೇ ಅವನ ಹಿಂದೆ ಮುಂದೆ ಹೋಗಿ ಅವನ ಸಂದರ್ಶನ ಮಾಡಲು ಕಾಯಿತ್ತಿರುತ್ತೇನೆ ! ಆದರೆ ಅವನು ಕೈಗೆ ಸಿಗೋದೆ ಅಪರೂಪ ಕೆಲಸದ ಒತ್ತಡದಲ್ಲಿ ! "
ಅಂತ ಹೇಳಿ ನಿಲ್ಲಿಸುತ್ತಾರೆ ಗಣೇಶರು .
ಅದಾದ ಮೇಲೆ ನಿಮಗೇ ಗೊತ್ತು ಹೇಗೆ ಬದಲಾಯಿತು ಅಂತ . ಶ್ಶ್. . .,ಓಂ , ಆಪರೇಷನ್ ಅಂತ , A , ಸ್ವಸ್ತಿಕ್ , ಉಪೇಂದ್ರ , ಸೂಪರ್ ಸ್ಟಾರ್ (ಹೆಸರಿಗೆ ನಾಗತಿ ! ), ರಕ್ತ ಕಣ್ಣೀರು (ಹೆಸರಿಗೆ ಸಾಧು ! ) ಮಾಡಿ ಈಗ ಹತ್ತು ವರ್ಷ ಬಿಟ್ಟು ಈಗ "ಕ್ಯಾಪ್" ಹಾಕ್ತಾ ಇದ್ದಾನೆ ಹತ್ತನೇ ಅವತಾರ ಎತ್ತಲು ( ಅರ್ಥಾತ್ ಹತ್ತನೇ ಚಿತ್ರ ಎತ್ತಲು ! ) ( A ಚಿತ್ರ ಮಾರಿ ಕಣ್ಣು ಹೋರಿ ಮ್ಯಾಗೆ ಹಾಡಿನಲ್ಲಿ ಹಾಕುವ ದೃಶ್ಯ ಇದೆ ನೋಡಿ ! ಹಾಗೇ ನೆ !!! ) .
ಉಪ್ಪಿ ಯ ಜೀವನ ಕಥೆ ನೂ "ಸೂಪರ್" , ಇಲ್ಲಿಯ ತನಕ ನಿರ್ದೇಶಿಸಿದ ಚಿತ್ರಗಳೂ "ಸೂಪರ್" .
ಈಗ ಬರ್ತಾ ಇರೋ ಚಿತ್ರಾ ದ ಹೆಸರೇ "ಸೂಪರ್ "! ಹೆಸರೂ ಸೂಪರ್ !
ನಾನಂತು ಕ್ಲಾಪ್ ಹಾಕ್ತಾ ಇದ್ದೀನಿ .
ನೀವು ?
ಪ್ರವೀಣ ಸಾಯ
ಚಿತ್ರ ಕೃಪೆ : ದಟ್ಸ್ ಕನ್ನಡ
ವಿ ಸೂ : ಗಣೇಶ್ ಅವರ ಲೇಖನ ಓದಿ ವರ್ಷಗಳಾಗಿವೆ, ಶಬ್ದಗಳು ಅದಲು ಬದಲಾಗಿದ್ದಲ್ಲಿ ಕ್ಷಮಿಸಿ .