ಉಬುಂಟು ೯.೦೪ - ಹೊಸ ಉಬುಂಟುವಿನಲ್ಲಿ ಹೊಸತು

ಉಬುಂಟು ೯.೦೪ - ಹೊಸ ಉಬುಂಟುವಿನಲ್ಲಿ ಹೊಸತು

ಬರಹ

ಉಬುಂಟುವಿನ ಹೊಸ ಆವೃತ್ತಿ ೯.೦೪ (Jaunty Jacklope) ಈಗ ಡೌನ್ಲೋಡ್ ಮಾಡ್ಕೊಳ್ಲಿಕ್ಕೆ ಲಭ್ಯವಿದೆ. ಹಳೆಯ ಆವೃತ್ತಿಯಲ್ಲಿ ಕಂಡು ಬಂದ ಅನೇಕ ದೋಷಗಳನ್ನು ಸರಿ ಪಡಿಸಿರುವುದೇ ಈ ಆವೃತ್ತಿಯ ವಿಶೇಷ.
ನಾನು ಈ ಆವೃತ್ತಿಯ ಟೆಸ್ಟ್ ರಿಲೀಸ್ ಅಲ್ಪಾ (Alpha) ಸ್ಥಿತಿ ಯಲ್ಲಿದ್ದಾಗಲಿಂದಲೂ ಉಪಯೋಗಿಸುತ್ತಾ ಬಂದಿದ್ದು. ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ.

* ಹತ್ತೇ ಸೆಕೆಂಡುಗಳಲ್ಲಿ ಬೂಟ್ ಆಗುತ್ತೆ. ಯೂಟೂಬ್ ಚೆಕ್ ಮಾಡಿ ಅಲ್ಲಿ ಆಗಲೇ ಅನೇಕ ವಿಡಿಯೋಗಳಿವೆ ಇದನ್ನು ತೋರಿಸಲಿಕ್ಕೆ.

* ನೋಟಿಫಿಕೇಶನ್, ಅಂದ್ರೆ ಚಾಟ್ ಇತ್ಯಾದಿ ಮಾಡುವಾಗ ಬರುವ ಸಂದೇಶಗಳನ್ನು ಸುಂದರವಾಗಿ ತೋರಿಸುವಂತೆ ಮಾಡಲಾಗಿದೆ. ಕೆಳಗೆ ಕೊಟ್ಟಿರುವ ಚಿತ್ರಗಳನ್ನು ನೋಡಿ. ನನ್ನ ಲ್ಯಾಪ್ಟಾಪ್ ನಲ್ಲಿ ಕಂಡು ಬಂದಂತಹವು.

brightnesscontroller1

device_notification gprs

powerinformation  volumecontroller wireless

 

* ಲಾಗಿನ್ ಸ್ಕ್ತೀನ್ ಕೂಡ ಹೊಸ ಮೆರುಗನ್ನು ಪಡೆದು ಕೊಂಡಿದ್ದು, ಉಬುಂಟು ಹುಟ್ಟುಹಾಕಿದ ಮೈಕ್ ಶಟಲ್ವರ್ಥ್ ಮುಂದೆ ಬರುವ ಆವೃತ್ತಿಗಳನ್ನು ಮ್ಯಾಕ್ ಗಿಂತಲೂ ಉತ್ತಮವಾಗಿ ಕಾಣುವಂತೆ ಮಾಡುತ್ತೇವೆ ಎಂದು ಹೇಳಿದ ಮಾತನ್ನು ನಿಜಗೊಳಿಸುವತ್ತ ನಿಜವಾಗಿಯೂ ಸಾಗಿದ್ದಾರೆಯೇ ಅನ್ನೋದನ್ನು ನಿಮ್ಮ ಮುಂದಿಡುತ್ತದೆ.

* ಕನ್ನಡದಲ್ಲಿ ಎಂಬ ಟೈಪ್ ಮಾಡ್ತಿದ್ದಾಗ "ಂ" ಈ ರೀತಿ ಎರಡು ಬಾರಿ ಸೊನ್ನೆ ಸುತ್ತಿರೋದು ಕಂಡು ಬರುತ್ತಿತ್ತು. ಈ ದೋಷ (bug) ಕೂಡ ಸರಿಯಾಗಿದೆ.

* ಗ್ನು/ಲಿನಕ್ಸ್ ನಲ್ಲಿ ಇದುವರೆಗೂ ext3 ಫೈಲ್ ಸಿಸ್ಟಂ ಉಪಯೋಗಿಸುತ್ತಿದ್ದು, ಅದರ ಹೊಸ ಆವೃತ್ತಿ (ext4) ಅನ್ನು ಉಬುಂಟು ನಿಮಗೆ ಲಭ್ಯವಾಗಿಸಿದೆ. ಇದನ್ನ ಉಪಯೋಗಿಸಿ ನೋಡೇ ಬಿಡೋಣ ಎನ್ನುವವರು ಟ್ರೈ ಮಾಡ್ಬಹುದು. ನಾನು ಇದನ್ನಾಗಲೇ ಹಾಕಿಕೊಂಡಿದ್ದು, ಯಾವುದೇ ತೊಂದರೆ ಸಧ್ಯಕ್ಕೆ ಕಂಡು ಬಂದಿಲ್ಲ.

* ಈಮೈಲ್ ಬ್ಯಾಕ್ ಅಫ್ ಮಾಡ್ಲಿಕ್ಕೆ ಎವ್ವಲ್ಯೂಷನ್ ನ ಹೊಸ ಆವೃತ್ತಿ, ಚಾಟ್ ಮಾಡ್ಲಿಕ್ಕೆ ಪಿಡ್ಜಿನ್ ಹೊಸ ಆವೃತ್ತಿ ಸೇರಿಸಲಾಗಿದೆ. ಅಡ್ರೆಸ್ ಬುಕ್ ಅನ್ನು export/import ಮಾಡ್ಕೊಳ್ಳೋದೂ ಸುಲಭ.

* ಹೊಸ್ ಫೈರ್ ಪಾಕ್ಸ್ ಬ್ರೌಸರ್ , ರಿಧಮ್ ಬಾಕ್ಸ್, ಟೋಟೆಮ್ ಪ್ಲೇಯರ್ಗಳ ಆವೃತ್ತಿ ಮತ್ತು ಫೋಟೋ ನೋಡ್ಲಿಕ್ಕೆ, ಅದರೊಡನೆ ಆಟ ಆಡ್ಲಿಕ್ಕೆ F-Spot. 

* ಲ್ಯಾಪ್ಟಾಪ್ ಗಳು ಚಿಕ್ಕದಾಗಿ ನಮ್ಮ ಅಂಗಿಯ ಜೇಬಿಗೇರುತ್ತಿರುವ ಈ ಸಮಯದಲ್ಲಿ ಅದಕ್ಕೆಂದೇ ನೆಟ್ಬುಕ್ ಆವೃತ್ತಿ ಕೂಡ ಈಗ ಲಭ್ಯವಿದೆ. 

ಹೀಗೆ ಹತ್ತು ಹಲವಾರು ತಂತ್ರಾಂಶಗಳನ್ನು ತನ್ನ ಮಡಿಲಿಗೇರಿಸಿ ಕೊಂಡು ಉಬುಂಟು http://ubuntu.com ನಲ್ಲಿ ಕೂತಿದೆ. ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಿ ನೋಡಿ. 

ಉಬುಂಟು Apple ಮ್ಯಾಕ್ ಜೊತೆಗಿನ ಸ್ಪರ್ಧೆಗೆ ಹೇಗೆ ತಯಾರಿ ಮಾಡ್ಕೊಳ್ತಿದೆ ಅಂತ ನೋಡ್ಬೇಕಾ? ಈ ಕೊಂಡಿಯಲ್ಲಿದೆ ನೋಡಿ ಉತ್ತರ.