ಉಭಯಸಂಕಟ
ಬರಹ
ದೂರ ಸಾಗಿದ ಪುಟ್ಟಪಕ್ಶಿ
ಕೂಗಿಟ್ಟಿದೆ ಹಸಿವಿನಿಂದ
ಕುಳಿತಲ್ಲಿಯೇ ರೆಕ್ಕೆಗಳ ಬಡಿಯುತ್ತ
ಕಾಣದಾ ಗೂಡಿಗಿದು ದಾರಿಯಾ ಹುಡುಕುತಿದೆ
ಎದೆಯೊಳಿಣುಕಿದ ಆಸೆ ಗರಿಬಿಚ್ಹಿ
ಓಡುತಿದೆ ಕೈಗೆಟುಕದಂತೆ
ತನ್ನುಸಿರ ಎಳೆಯ ಬಳಸಿ
ಪ್ರಶ್ನಿಸುತ್ತಿದೆ,ಏನೆನ್ನಲಿ?
ಆಧ್ರ್ರ್೯ತೆಯ ನೋಟಮರೆಸಿ
ಏನಾದರೂ ಹೇಳು
ಅರ್ಥವಾದರೂ ಮರಳಿ
ಮುಸುಕೊದ್ದಿ ಮಲಗಿರಲು
ಕಣ್ಣರಳಿಸಿ ಹೇಳುತ್ತೇನೆ ನನ್ನದೇನಿಲ್ಲಾ
ಕುಶಲೋಪರಿಯ ಮತಿನಲೇ ಎಲ್ಲಾ
ನೀತಿಶಾಸ್ತ್ರಗಳ ಒಕ್ಕಣಿಕೆ ಇಲ್ಲಾ
ಬರಿ ಉಭಯ ಸಂಕಟ
ಹಲವು ತೊಳಲಾಟಗಳಾಚೆ
ಓ ದೇವರೇ ನೀನಿದ್ದಲ್ಲಿ
ಅರಿವು ಮೂಡಿಸುವ ಬದುಕೆಡೆಗೆ
ಎಲೆಯಾಗಿ ತೇಲಿಸು
ಬದುಕ ಬಯಕೆಗೆ ಆತ್ಮಸ್ಥ್ಯರ್ಯವ ಮೂಡಿಸು
ಬೆಳಕಿನಣತೆಯ ಬೆಳಗಿಸು.
ಸಿಂಚನಾ