ಉಳಿ ಬೇಕು
ತೊಟ್ಟಿಕ್ಕುತ್ತಿದೆ ರಕ್ತ
ಧರ್ಮ-ಧರ್ಮಗಳ ನಡುವೆ,
ಹಸಿದ ಧರ್ಮಾಂದರ ಬಾಯಿಗೆ
ರಕ್ತದ ರುಚಿ ಹತ್ತಿದೆ.
ಸೂರ್ಯ ತಿರುಗುವುದು
ಇವರಪ್ಪನ ಮನೆ ಗಂಟಂತೆ !!!
ಚಂದ್ರ ಇವರ ಮಾವನಂತೆ,
ಗ್ರಹ ನಕ್ಷತ್ರ, ಇವರ
ಆಗ್ರಹಕ್ಕೆ ಅಲ್ಲಾಡುತ್ತವಂತೆ,
ಮೂಲೆ ಮೂಲೆಯಲೂ,
ಎಲ್ಲರ ಹೃದಯಕ್ಕೂ
ಬೆಂಕಿ ಹಚ್ಚುವ, ಈ ಎಲ್ಲ ಧರ್ಮ
ಹೇಳುವುದು ಏನನ್ನು?
ಯಾರಿಗೂ ಗೊತ್ತಿಲ್ಲ,
ಧರ್ಮ ಗ್ರಂಥಗಳ ಒಂದು
ಪುಟವನ್ನೂ ಸರಿಯಾಗಿ ಓದದ
ಪುಂಡ ಪುಡಾರಿಗಳು,
ದೇವರನ್ನು ತಮಗೆ ಬೇಕಾದಂತೆ
ಚಿತ್ರಿಸಿಕೊಳ್ಳುವ,
ಮಹಾನ್ ಸ್ವಾಮಿ-ಸಂತ-ಪಾದ್ರಿಗಳು,
ಇವರೆಲ್ಲ ನಮ್ಮ ಸಮಾಜದ
ಪ್ರತಿಬಿಂಭಗಳು,,,,,,,,
ತುಕ್ಕು ಹಿಡಿಯುತ್ತಿದೆ ದೇಶಕ್ಕೆ,
ತಕ್ಕ ಉಳಿ ಬೇಕು,,,,,,
ಧರ್ಮಾಂಧತೆಯನು ಕೆತ್ತಿ ತೆಗೆಯಲು,
Comments
ಉ: ಉಳಿ ಬೇಕು
ಧರ್ಮ ಉಳಿಯಬೇಕು, ಧರ್ಮಾಂಧತೆ ಅಳಿಯಬೇಕು.
In reply to ಉ: ಉಳಿ ಬೇಕು by kavinagaraj
ಉ: ಉಳಿ ಬೇಕು
ಸರಿಯಾಗಿ ಹೇಳಿದಿರಿ ಕವಿಗಳೇ
ಉ: ಉಳಿ ಬೇಕು
ನವೀನ್ ರವರಿಗೆ ವಂದನೆಗಳು
'ಉಳಿ ಬೇಕು' ಒಂದು ಅರ್ಥಪೂರ್ಣ ಜೊತೆಗೆ ವಾಸ್ತವಕ್ಕೆ ಹಿಡಿದ ಕೈಗನ್ನಡಿ. ವರ್ತಮಾನದ ಕಟು ವಾತ್ಸವವನ್ನು ಸರಳವಾಗಿ ಆದರೆ ಅಷ್ಟೇ ಸಮರ್ಥವಾಗಿ ನಿರೂಪಿಸಿದ್ದೀರಿ, ನಿಮ್ಮ ಕೋಪ ನಮಗೆ ಅರ್ಥವಾಗುತ್ತದೆ. ಕವನದ ಕೊನೆ ಸಾಲುಗಳು ಬಹಳ ಅರ್ಥಗರ್ಭಿತ. ಉಳಿಬೇಕು ಎನ್ನುವುದು ನಾವು ಉಳಿಯಬೇಕು ಎನ್ನುವುದು ಒಂದು ಅರ್ಥವಾದರೆ ತುಕ್ಕು ಹಿಡಿದ ದೇಶಕ್ಕೆ ಅದರ ತುಕ್ಕನ್ನು ಕೆತ್ತಿ ತೆಗೆಯಲು ಒಂದು ಉಳಿಬೇಕು ಎನ್ನುವುದು ಇಂದಿನ ಆಶಯ. ಉಳಿಬೇಕು ಎನ್ನುವ ಪದದ ವ್ಯಾಪ್ತಿ ಮತ್ತು ಅದರೆ ಬಳಕೆ ಕವನವನ್ನು ಗರಿ ಗಟ್ಸಿಸಿದೆ, ಧನ್ಯವಾದಗಳು.
In reply to ಉ: ಉಳಿ ಬೇಕು by H A Patil
ಉ: ಉಳಿ ಬೇಕು
ಕವನದ ಆಳ ಹಾಗು, ಶೀರ್ಷಿಕೆಯ ಒಳಾರ್ಥ ಗ್ರಹಿಸಿ ಪ್ರತಿಕ್ರಿಯಿಸಿದ್ದೀರಿ ಪಾಟೀಲರೆ, ಅನಂತ ನಮನಗಳು,
ಉ: ಉಳಿ ಬೇಕು
ಧರ್ಮಾಂದತೆ ಅಳಿಯಲು ನಮ್ಮಂತಹ ಸ್ವಾಮಿಗಳು ಉಳಿ ಬೇಕು.
-ಅಂ.ಭಂ.ಸ್ವಾಮಿ.