ಉಸಿರಿನ ಚೇತರಿಕೆ

ಉಸಿರಿನ ಚೇತರಿಕೆ

ಕವನ

ರಕ್ತದ ಕೊರತೆಯ ನೀಗಿಸಲು

ನೆತ್ತರು ದಾನವ ಮಾಡುತಿರು

ಅತ್ತರು ತೆರದಲಿ ಘಮಿಸುತಲಿ

ಶಕ್ತನು ಆಗುತ ಮಿಂಚುತಲಿ

 

ರಕ್ತದಾನವು ಮಹಾದಾನವು

ಉಸಿರಿಗೆ ಉಸಿರನು ನೀಡುತಲಿ

ನೊಂದ ಬೆಂದ ಜೀವಗಳ

ಬೆಳಕಿಗೆ ಆಸರೆಯಾಗುತಲಿ

 

ಜಾತಿ ಮತ ರೀತಿ ನೀತಿ

ಭೇದಭಾವವು ನೆತ್ತರಿಗಿಲ್ಲ

ಒಂದೇ ತಾಯಿಯ ಮಕ್ಕಳ ತೆರದಿ

ನರನಾಡಿಯಲಿ ಹರಿಯುವ ತೆರದಿ

 

ಸಮಯಕೆ ಒದಗುತ ರಕ್ತವ ನೀಡುತ

ದೇವನ ಸ್ಥಾನದಿ ನಿಲ್ಲುತಲಿ

ಹಿಮಾಲಯದೆತ್ತರ ಏರುತಲಿ

ಬದುಕಿಗೆ ಆಸರೆ ಜೀವಕೆ ಕಸುವ

ಸದಾ ಕಾಲವು ಬಯಸುತಲಿ

***

ಸರ್ವಮಾನ್ಯ

ಬೇರೆಯವರ ಕಷ್ಟದಲಿ ಸದಾ ನೆರವಾಗು

ಜೀವಕ್ಕೆ ಜೀವ ನೀಡುವ ಮನುಷ್ಯನಾಗು

ರಕ್ತದಾನ ಮಾಡುವ ಗುಣವಂತನಾಗು

ಜೀವದುಸಿರು ನೀಡಿ ಸರ್ವ ಮಾನ್ಯನಾಗು

(ವಿಶ್ವ ರಕ್ತದಾನಿಗಳ ದಿನದ ಸಲುವಾಗಿ...)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್