ಊಹೆಗೆ ನಿಲುಕದ ಅನಂತದೆಡೆಗೆ ಪಯಣ....

ಊಹೆಗೆ ನಿಲುಕದ ಅನಂತದೆಡೆಗೆ ಪಯಣ....

ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು, ಎಚ್ಚರಿಸುವವರು ಕೆಲವರು, ಹೃದಯ ತಟ್ಟುವವರು ಇದ್ದಾರೆ, ಬೆನ್ನಿಗೆ ಇರಿಯುವವರೂ ಉಂಟು.

ಧೈರ್ಯ ತುಂಬುವವರು,

ಭಯ ಪಡಿಸುವವರು,

ಜೊತೆಯಾಗುವವರು,

ದೂರ ಸರಿಯುವವರು,

ಸ್ವಾಗತಿಸುವವರು,

ವಿರೋಧಿಸುವವರು,

 

ತಪ್ಪು ಅರ್ಥೈಸಿಕೊಂಡವರು,

ನಿಜದ ಅನುಭಾವಿಗಳು,

ಪೂರ್ವಾಗ್ರಹ ಪೀಡಿತರು,

ವಿಶಾಲ ದೃಷ್ಟಿಯವರು,

ಮಜಾ ತೆಗೆದುಕೊಳ್ಳುವವರು,

ಹಿತ ಬಯಸುವವರು,

 

ನಿರ್ಲಿಪ್ತರು - ನಿರ್ಲಕ್ಷ್ಯವಹಿಸುವವರು,

ಹಿಂಸಾವಾದಿಗಳು ಕರುಣಾಮಯಿಗಳು,

ಮೇಲೆತ್ತುವವರು,

ಕೆಳಗೆ ತುಳಿಯುವವರು,

ಸ್ವಾಭಿಮಾನಗಳು,

ಮಾರಿಕೊಂಡವರು,

 

ಮುಖವಾಡ ಧರಿಸಿರುವವರು,

ಸಹಜ ಸ್ವಭಾವದವರು,

ಆಕ್ರೋಶ ನುಡಿಯ ಮಾತುಗಳು

ಮೆಲು ಧ್ವನಿಯ ವಿನಯಿಗಳು,

ನಗುನಗುತ್ತಾ ಅಳಿಸುವವರು,

ಅಳುವಿನಲ್ಲಿ ನಗುತ್ತಾ ಜೊತೆಯಾಗುವವರು,

 

ನಿಜ ವೀರರು,

ರಣ ಹೇಡಿಗಳು,

ಬಹುಮಾನಿಸುವವರು,

ಅವಮಾನಿಸುವವರು,

ಪ್ರೇರೇಪಿಸುವವರು,

ಪ್ರಚೋದಿಸುವವರು,

ತ್ಯಾಗಿಗಳು - ಸ್ವಾರ್ಥಿಗಳು,

ಜಾಣ ಪೆದ್ದರು - ಪೆದ್ದ ಜಾಣರು,

 

ನವ ರಸಗಳು,

64 ವಿದ್ಯೆಗಳು,

ಊಹೆಗೂ ನಿಲುಕದ ಮನಸುಗಳು......

 

18 ರ ಕನಸುಗಳು,

30 ರ  ಆಸೆಗಳು,

50 ರ ಭರವಸೆಗಳು,

70 ರ ನೋವುಗಳು,

ಸಾಮಾಜಿಕ ಜಾಲತಾಣಗಳ ಅಭಿಪ್ರಾಯಗಳು,

 

ಯೇಸುವನ್ನೇ ಶಿಲುಬೆಗೇರಿಸಿದರು,

ಬಸವನನ್ನೇ ಕೊಂದರು,

ಅಬ್ರಹಾಂ ಲಿಂಕನ್ನನ್ನನ್ನೇ ಇಲ್ಲವಾಗಿಸಿದರು,

ಪೈಗಂಬರನನ್ನೇ ಓಡಿಸಿದರು,

ಗಾಂಧಿಗೇ ಗುಂಡಿಕ್ಕಿದರು,

 

ನಮ್ಮ ತನವೂ ಇರಬೇಕು,

ಹೊಂದಾಣಿಕೆಯೂ ಆಗಬೇಕು,

ಸಹಕಾರವೂ ಸಿಗಬೇಕು.....

ವೈವಿಧ್ಯತೆಯೂ ಬೆರೆಯಬೇಕು,

ಅತಿರೇಕಗಳ ನಡುವೆ ಸಮನ್ವಯ.. ‌...

 

ಈ ಎಲ್ಲದರ ನಡುವೆ ‌ವಾಸ್ತವದ ಬದುಕು,

ವ್ಯಾವಹಾರಿಕ ಬದುಕು, ನೆಮ್ಮದಿಯ ಜೀವನದ ಹುಡುಕಾಟ.......

 

ವಯಸ್ಸಿನ ಅಂತರ,

ಹಣಕಾಸಿನ ವ್ಯತ್ಯಾಸ,

ಜಾತಿಯ ಕಂದರ,

ವಿದ್ಯೆಯ ಭಿನ್ನತೆ,

ಅಧಿಕಾರದ ಅಸಮಾನತೆ,

 

ಬದುಕನ್ನು ಬಯಸುವವರಿಗೆ,

ಹೆದರಿಕೆ, ನಾಚಿಕೆ, ಅವಮಾನ,

ಆಸೆ,

ಸಾವನ್ನು ಸ್ವಾಗತಿಸುವವರಿಗೆ...

ಹೀಗೆ ಬದುಕೊಂದು ಊಹೆಗೆ ನಿಲುಕದ ಅನಂತದೆಡೆಗೆ ಪಯಣ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 187 ನೆಯ ದಿನ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರದಲ್ಲಿ ಕಾರವಾರ-ಅಂಕೋಲಾ ನಡುವಿನ ಪಾದಯಾತ್ರೆಯಲ್ಲಿ ಕಂಡ ಕಡಲತೀರದ ದೃಶ್ಯ