ಋಣ ಸಂದಾಯ..

ಋಣ ಸಂದಾಯ..

ಕವನ

ಮಂದಿ ವಾಸಕೆ ಸೂರು ನಿರ್ಮಿಸೆ

ಅರಸಿ ಜಾಗವ ಒಂದೆಡೆ

ಅಲ್ಲಿ ಬೆಳೆದಿಹ ವೃಕ್ಷ ಕಡಿವರು

ಸಸ್ಯಕೊದಗುವ ಹಿನ್ನಡೆ

 

ಅದುವೆ ಮರಗಳ ಕಾಂಡ ಬಳಸುತ

ಕಿಟಿಕಿ ಬಾಗಿಲು ಸಕಲವ

ಸಾಲದಾದರೆ ಉಳಿದ ಮರಗಳ

ನಡೆಸಿ ಮಾರಣ ಹೋಮವ

 

ಇಲ್ಲಿ ಓರ್ವನು ಮರವನುಳಿಸುತ

ಕಟ್ಟಿಕೊಂಡನು ಕಟ್ಟಡ

ಅವನ ಋಣವನು ಸಲಿಸುತಿರುವುದು

ಬಿಟ್ಟು ರುಚಿಕರ ಕಾಯ್ಗಳ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್