ಋತುಮಾನ
ಕವನ
ಚೈತ್ರ ಚಿಗುರ ಚಿತ್ರ ಚಿತ್ತಾರ ಚೆಂದ
ವೈಶಾಖ ವಿವಿಧ ಹೂ ರಂಗಿನಂದ
ವಸಂತ ಋತು ಭೃಂಗ ಮಕರಂದ ಬಂಧ
ಜೇಷ್ಠ ಮುಂಗಾರು ಭೂರಮೆ ಶೃಂಗಾರ
ಆಷಾಢ ಶಿಳಿ ಗಾಳಿ ತುಂತುರು ಮಳೆಭಾರ
ಗ್ರೀಷ್ಮ ಋತು ನವಹಸಿರ ಸಂಭ್ರಮ ಹಾರ
ಶ್ರಾವಣ ಜಡಿಮಳೆ ಹಬ್ಬಗಳ ಸರಮಾಲೆ
ಭಾದ್ರಪದ ಬೆನಕ ಜೋಕುಮಾರರ ಲೀಲೆ
ವರ್ಷ ಋತು ನೃತ್ಯ ಮಯೂರಿ ಮಳೆ ಮಿಂಚ ಮಾಲೆ
ಆಶ್ವಯುಜ ತೆನೆ ಬಿರಿದು ತೊನೆಯುವ ಕಾಲ
ಕಾರ್ತೀಕ ಪೌರ್ಣಮಿ ಶುಭ್ರ ಆಕಾಶ ಜಾಲ
ಶರದೃತು ಧಾವಂತ ಮೇಘ ಮಾಲೆ
ಮಾರ್ಗಶಿರ ಮಳೆಯಳಿದು ಛಳಿಯೇರೆ
ಪುಷ್ಯದಿಬ್ಬನಿ ಮಬ್ಬ ಮುಂಜಾನೆ ಜಾರೆ
ಹೇಮಂತ ಋತು ಸಂಕ್ರಾಂತಿ ಪುಣ್ಯಧಾರೆ
ಮಾಘ ಮಾಸ ಶಿವ ರಾತ್ರಿ ಭಕ್ತಿ ಸಾಕಾರ
ಫಾಲ್ಗುಣ ಯುಗಾದಿ ನವ ವರ್ಷ ಸಾರ
ಶಿಶಿರ ಋತು ವಿವಿಧ ಫಲ ಸಮೃಧ್ಧಿಯಾಗಾರ