ಋಷಿಯಾಗುವೆ

ಋಷಿಯಾಗುವೆ

ಕವನ

ಕಡುಗಪ್ಪು ಕತ್ತಲಿರೆ
ಜಗಜಗನೆ ಬೆಳಕು ಇರೆ
ಶೀತವಿರೆ ಉಷ್ಣವಿರೆ
ಹಾರಾಡುವೆ, ನಿನ್ನ
ಹಾಡಾಡುವೆ

ಮಿಂಚು ಇರೆ ಸಿಡಿಲು ಇರೆ
ಅಬ್ಬರದ ಭರತವಿರೆ
ಬಿರುಗಾಳಿ ಬಿರುಸು ಇರೆ
ಈಜಾಡುವೆ, ಈಜಿ
ದಡ ಸೇರುವೆ.

ಧೂಪವಿರೆ ಧೂಮವಿರೆ
ಅಗ್ನಿ ಕಿಡಿಗಾರುತಿರೆ
ದುರ್ಗಮದ ಮಾರ್ಗವಿರೆ
ಜಿಗಿದಾಡುವೆ, ಪುಟಿದು
ಕುಣಿದಾಡುವೆ.

ದುಃಖವಿರೆ ಹರುಷವಿರೆ
ರಾಗವಿರೆ ದ್ವೇಷವಿರೆ
ಒಳಗೊಳಗೆ ತುಡಿತವಿರೆ
ಖುಷಿಯಾಗುವೆ, ನಾನು
ಋಷಿಯಾಗುವೆ :)

Comments