ಎಂತಹ ಕಾನೂನುಗಳು ಬೇಕು ನಮಗೆ

ಎಂತಹ ಕಾನೂನುಗಳು ಬೇಕು ನಮಗೆ

ಬರಹ

ಎಂತಹ ಕಾನೂನುಗಳು ಬೇಕು ನಮಗೆ

 




 

 


 

 

<<ನಮ್ಮ ರಾಜಕೀಯ ()ವ್ಯವಸ್ಥೆ ಯ ಮುಂದುವರೆದ ಬಾಗ >>

  ಎಂತಹ ಕಾನೂನುಗಳು ಬೇಕು ನಮಗೆ ಎಂದು ಚಿಂತಿಸುವ ಮೊದಲು ಈಗ ಯಾವ ರೀತಿಯ ಕಾನೂನುಗಳಿವೆ ಎಂದು ಯೋಚಿಸೋಣ. ನಮ್ಮ ಪ್ರಜಾಪ್ರಭುತ್ವ ಭಾರತ ಕಾನೂನುಗಳಿಗೊಂದು ವಿಷಿಷ್ಟತೆಯಿದೆ ನಿಮ್ಮ ತಪ್ಪಿಗೆ ಯಾವುದೆ ಕಾನೂನಿನ ಅಡಿ ವಿಚಾರಣೆಗೆ ಒಳಪಡಿಸಿದರು,ನಿಮಗೆ ಮತ್ತೊಂದು ಕಾನೂನಿನ ಅಡಿ ರಕ್ಷಣೆ ದೊರೆಯುತ್ತದೆ. ನಮ್ಮ ಸಂವಿದಾನದ ಯಾವುದೇ ಕಾನೂನಿನ ಕ್ರಮಗಳು ಇನ್ನಾವುದೋ ಕಾನೂನಿನ ಅಡಿಯಲ್ಲಿ ನಿಷ್ಕ್ರಿಯವಾಗಿ ಬಿಡುತ್ತವೆ. ಅಂತೆಯೆ ಹಲವು ನೂರು ಜನರ ಸಾವಿಗೆ ಕಾರಣನಾಗಿರುವ ಕಸಾಬ್ ನಂತವರು ಕಾನೂನೆಂಬ ಕೊಡೆಯ ಅಡಿಯಲ್ಲಿಯೆ ಬದುಕಿದ್ದಾರೆ. ಹಾಗಾಗಿ ನಮ್ಮ ನ್ಯಾಯಲಯಗಳು ಕಾನೂನಿನ ಪರಿದಿಯಲ್ಲಿ ಕರ್ತವ್ಯ ನಿರ್ವಸಿಸುತ್ತವೆ (court of law) ಹೊರತು ನ್ಯಾಯದ ಪರಿದಿಯಲ್ಲಿ (court of justice) ಚಿಂತಿಸುವದಿಲ್ಲ. ಇಂತಹ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ ನಮ್ಮ ರಾಜಕೀಯ ನಾಯಕರು. ಅದಕ್ಕಾಗಿಯೆ ಚಿಂತನೆ ನಮ್ಮ ಕಾನೂನು ಹೇಗಿರಬೇಕು ?



 


. ನಿರ್ದಿಷ್ಟ ಹಾಗು ನೇರವಾಗಿರಬೇಕು ಅಸ್ವಷ್ಟತೆ ಇರಬಾರದು

 


. ಕಾನೂನಿನ ಅಡಿಯಲ್ಲಿ ದೊಡ್ಡವರಿಗೆ ರಕ್ಷಣೆ ಕೊಡುವುದನ್ನು ಬಿಟ್ಟು ಎಲ್ಲರನ್ನು ಸರಿಸಮನಾಗಿ ಕಾಣಬೇಕು

 


ಉದಾ: ಕ್ರಿಮಿನಲ್ ಪೋಲಿಸ್ ಕೇಸುಗಳಿರುವ ರಾಜಕಾರಣಿಗೆ ಚುನಾವಣೆಯಲ್ಲಿ ಸ್ಪರ್ದೆಯಲ್ಲಿ ಅವಕಾಶ ಏಕೆ ಕೊಡಬೇಕು ?

 


ಈ ಹಿನ್ನಲೆಯಲ್ಲಿ ಈಗಿರುವ ಪಕ್ಷಾಂತರಿ ಕಾನೂನು ಈಗ ಸತ್ತ ಸರ್ಪ ಅದರಿಂದ ಯಾರನ್ನು ಹಿಡಿಯಲಾಗದು ಕೆಲವು ನೇರ ಹಾಗು ಸಣ್ಣ ಕಾನೂನೆ ಸಾಕು ಇವರನ್ನೆಲ್ಲ ನಿಯಂತ್ರಿಸಲು

 


ಯಾವುದೆ ರಾಜಕೀಯ ಪಕ್ಷ ಚುನಾವಣೆಯಲ್ಲಿ ತನ್ನ ಪ್ರತಿನಿದಿಯನ್ನು ನಿಲ್ಲಿಸಲು ಕೆಲವು ನಿರ್ಬಂದವಿರಬೇಕು

 


. ಚುನಾವಣೆ ಘೋಷಣೆಯಾದ ದಿನಾಂಕಕ್ಕೆ ಆ ಪಕ್ಷ ಚುನಾವಣಾ ಆಯೋಗದಲ್ಲಿ ನೊಂದಣಿಯಾಗಿ ಆರು(6) ವರ್ಷಗಳಾಗಿರಬೇಕು.

 


.ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ದಿಸಬೇಕಾದಲ್ಲಿ ಆ ವ್ಯಕ್ತಿ ಪಕ್ಷದಲ್ಲಿ ಕನಿಷ್ಟ ಆರುವರ್ಷಗಳ ಪ್ರಾಥಮಿಕ ಸದಸ್ಯತ್ವ ಹೊಂದಿರಬೇಕು

 


ನಂತರ

 


.ಚುನಾವಣೆಯಲ್ಲಿ ಗೆದ್ದ ನಂತರ ಪ್ರತಿನಿದಿಯು ಬೇರೆ ಪಕ್ಷ ಸೇರುವುದಾಗಲಿ ಅಥವ ತನ್ನ ನಿಷ್ಟೆ ತೋರುವದಾಗಲಿ ಅಥವ ತಾನು ಸ್ವತಂತ್ರ ಅಭ್ಯರ್ಥಿಯೆಂದು ಗುರುತಿಸಿಕೊಳ್ಳುವದಾಗಲಿ ಮಾಡಿದಲ್ಲಿ ಅವನ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೇಳುವ ಅದಿಕಾರ ಪಕ್ಷದ ನಾಯಕತ್ವಕ್ಕೆ ಇರುತ್ತದೆ ಹೊರತು ಸರ್ಕಾರದ ಸ್ಪೀಕರ್ಗಲ್ಲ.

 


.ಒಂದು ವೇಳೆ ಅವನು ರಾಜಿನಾಮೆ ನೀಡಲು ಬಯಸಿದರೆ ಅದನ್ನು ಅವನು ಪ್ರತಿನಿದಿಸಿದ ಪಕ್ಷದ ಅಧ್ಯಕ್ಷರು ತಮ್ಮ ಅನುಮತಿ ನೀಡುವುದು ಖಡ್ಡಾಯ.ಪಕ್ಷದ ಆಧ್ಯಕ್ಷರ ಅನುಮತಿಯಿಲ್ಲದ ರಾಜಿನಾಮೆಯನ್ನು ಸ್ಪೀಕರ್ ಆಗಲಿ ರಾಜ್ಯಪಾಲರಾಗಲಿ ಸ್ವೀಕಾರಮಾಡುವಂತಿಲ್ಲ.

 


. ಸ್ವತಂತ್ರ್ಯ ಅಭ್ಯರ್ಥಿ ಎಂದು ಗೆದ್ದಲ್ಲಿ ಅವನು ಸರ್ಕಾರಕ್ಕೆ ತನ್ನ ಮತನೀಡಬಹುದೇ ಹೊರತು ಅವನು ಸರ್ಕಾರದ ಯಾವುದೆ ಪದವಿ ಸ್ಥಾನಗಳನ್ನು ಅಲಂಕರಿಸುವಂತಿಲ್ಲ ಸರ್ಕಾರದ ಬಾಗವಾಗುವಂತಿಲ್ಲ

 


.ಜನರಿಂದ ಚುನಾಯಿತನಾಗದ ಹೊರತು ಯಾರೇ ಆಗಲಿ ಮಂತ್ರಿ, ಮುಖ್ಯಮಂತ್ರಿ ಪ್ರದಾನಮಂತ್ರಿ ಅಥವ ಸರ್ಕಾರದ ಯಾವುದೇ ಹುದ್ದೆ ಸ್ವೀಕರಿಸುವಂತಿಲ್ಲ

 


.ಜೀವಮಾನದಲ್ಲಿ ಗರಿಷ್ಟ ಮೂರು (3) ಬಾರಿ ಚುನಾಯಿತನಾದ ನಂತರ ಅವನು ಯಾವುದೇ ಚುನಾವಣೆಯಲ್ಲಿ ಮತ್ತಾವುದೆ ರಾಜ್ಯದಲ್ಲಿ , ಕ್ಷೇತ್ರಗಳಲ್ಲಿ ಸ್ಪರ್ದಿಸುವಂತಿಲ್ಲ

 


. ಮಂತ್ರಿ ಅಥವ ಮುಖ್ಯಮಂತ್ರಿ, ಪ್ರದಾನಿಯಾಗಲು ೨ ಅಥವ ೩ ನೆ ಅವದಿಯಲ್ಲಿ ಮಾತ್ರ ಅವಕಾಶ ಹೊರತು ಮೊದಲ ಅವದಿಯಲ್ಲಿ ಯಾವುದೇ ಅಹಿಕಾರ ಪದವಿಗಳಿಲ್ಲ

 


ಈ ರೀತಿಯ ನೇರ ಕಾನೂನುಗಳಿಂದ ಯಾವುದನ್ನು ನಿಯಂತ್ರಿಸಲು ಸಾದ್ಯ ಅಲ್ಲವೇ


===================================================================


 




ವಿಡಂಭನೆ:

 


ನಿಮಗೆ ಗೊತ್ತ ? ಶಿರಸ್ತಾಣ (helmet) ವಿಲ್ಲದಿದ್ದರೆ ಟ್ರಾಫಿಕ್ ಪೋಲಿಸರು ಹಿಡಿಯುತ್ತಾರೆ , ಆದರೆ ಚಲಿಸುವ ವಾಹನದಲ್ಲಿ ನಮ್ಮ ಮುಖ ಕಾಣದಂತೆ ಮರೆಮಾಡಿ ಓಡಾಡುವುದು ಕಾನೂನಿನಂತೆ ಕ್ರಿಮಿನಲ್ ಅಪರಾದ