ಎಂಥಾದಿದು ಮಾರಾಯ್ರೆ.

ಎಂಥಾದಿದು ಮಾರಾಯ್ರೆ.

ಕವನ

ಎಂಥಾದಿದು ಮಾರಾಯ್ರೆ,
ಹೊಸ ರೋಡ್ ಮಾಡ್ತೇನೆಂದು,
ಹಳೇ ರೋಡ್ಗೆ ಮೇಕಪ್ ಮಾಡಿ,
ಹೊಸ ರೋಡ್ ಬಜೆಟ್ನ ನುಂಗಿ ಬಿಟ್ರ ಮಾರಾಯ್ರೆ.


ಎಂಥಾದಿದು ಮಾರಾಯ್ರೆ,
ಹಾಲಿನ ರೇಟು ಜಾಸ್ತಿ ಆಯ್ತು ಅಂತ,
ಇರೋ ಬರೋ ತಿಂಡಿ ರೇಟು ಸಹ,
ಜಾಸ್ತಿ ಮಾಡಿ ಕುಳಿತಿರಲ್ಲ ಮಾರಾಯ್ರೆ.


ಎಂಥಾದಿದು ಮಾರಾಯ್ರೆ,
ಮೊದಲು ಕಮ್ಮಿ ಅಂಕ ಕೊಟ್ಟು,
ಆಮೇಲೆ ಮರುಗಣನೆಗೆ ಹಣ ಕೇಳಿ,
ಅಂಕವನು ಜಾಸ್ತಿ ಕೊಟ್ಟು ಬಿಟ್ಟರಲ್ಲ ಮಾರಾಯ್ರೆ.


ಎಂಥದಿದು ಮಾರಾಯ್ರೆ,
ಎಲ್ಲ ಕಡೆ ಹಣವೇ ಮುಖ್ಯ,
ಏನೆಂದು ಕರೆಯಲಿ ಇದರ, ಮೋಸಾನ,
ಇಲ್ಲ ಹಣದ ಹೆಬ್ಬಾಸೆನಾ ಮಾರಾಯ್ರೆ.