ಎಂಥ ಸಾವ್ ಮಾರ್ರೇ…!

ಎಂಥ ಸಾವ್ ಮಾರ್ರೇ…!

ಕವನ

ಸಾವು ಇಲ್ಲದ ವಯಸ್ಸಿನಲ್ಲೂ

ಸಾಯ ಬೇಕೇ ?

ಬೆಂಗಳೂರಿನ ರಸ್ತೆಗಳಲ್ಲಿ

ನಡೆದಾಡಿ ತಿರುಗಾಡಿ

ಹೊಂಡ ಹೊಂಡಗಳಲ್ಲಿ

ದ್ವಿಚಕ್ರ ವಾಹನಗಳ ಜೊತೆಗೆ ಸಂಚರಿಸಿ , ಯಮ ಲೋಕಕ್ಕೆ

ಟಿಕೆಟ್ ಕಾಯ್ದಿರಿಸಿ !

 

ಯಾರಿಗೆ ಹೇಳಲಿ ನಮ್ಮ ಬವಣೆಯ? 

ಕೇಳುವವರೆಲ್ಲ ,ತೊಂದರೆಗಳ

ಪರಿಹರಿಸುವರೆಲ್ಲ

ಏ ಸಿ ರೋಮಿನಲ್ಲಿ ಕುಳಿತು

ಹಣ ಎಣಿಸುತಲಿಹರು

ಮಹಡಿ ಮನೆ ಅಂತಸ್ತಿನ

ವೈಭೋಗದಲ್ಲಿ ಬಾಳುತಿಹರು!

ಕುರ್ಲಾನ್ ಬೆಡ್ನಲ್ಲಿ ಮಲಗಿಹರು!

 

ಅಧಿಕಾರಿಗಳೇ ಸರಿ ಇಲ್ಲದಿದ್ದರೆ

ನೌಕರರು ಹೇಗೆ ಸರಿ ಇದ್ದಾರು ?

ಆಡಳಿತವೇ ಸರಿ ಇಲ್ಲದ ಮೇಲೆ

ಅಧಿಕಾರಿಗಳು ಹೇಗೆ ಸರಿ ಇದ್ದಾರು ?

ಇವುಗಳ ನಡುವೆಯೇ ಬದುಕು ಸಾವಿನ ನಡುವೆ ಒದ್ದಾಡುವವನು

ಜನಸಾಮಾನ್ಯ ?!

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್