ಎಕಾಂಗಿ
ಕವನ
ಎಕಾಂಗಿಯಾಗಿದ್ದೆ ನೀ ಬರುವ ಮುಂಚೆ ನಾನಂದು
ಒಂಟಿತನವ ದೂರ ಮಾಡಿದೆ ನೀ ಬಂದು
ಒಂಟಿತನದ ಹಸಿವಿನಿಂದ ಬಳಲಿದ್ದ ನನ್ನ ಹೃದಯಕೆ
ಪ್ರೀತಿ ಪ್ರೇಮದ ಊಟವ ಉಣಬಡಿಸಿ ಸಲಹಿದೆ
ಸುಡುಬಿಸಿಲಿನ ಮರುಭೂಮಿಯಂತಿದ್ದ ಬಾಳಿನಲಿ
ತಂಪನೆ ಮಳೆಬೀಳುವ ಮಲೆನಾಡಿನಂತೆ ನೀ ಬಂದೆ
ಹೋದಕಡೆಯಲ್ಲೆಲ್ಲಾ ಒಂಟಿಯಾಗಿ ಹೋಗುತ್ತಿದ್ದೆ
ನನ್ನ ಜೊತೆ ಜಂಟಿಯಾಗಿ ನಡೆಯಲು ನೀ ಬಂದೆ
ನೀ ನೀಡಿದ ಪ್ರೀತಿ ಇನ್ನೂ ಹಸಿ ಇರುವಾಗಲೇ ಹೊರಟಿರುವೆ
ಎಕಾಂಗಿಯಾಗಿರುವೆ ಮತ್ತೆ ನಾನಿಂದು ನೀ ಬಂದ ಮೇಲೂ
ಚಿತ್ರ ಕೃಪೆ : ಅಂತರ್ಜಾಲ