ಎಚ್ಚರದ ಬೆಳಕು

ಎಚ್ಚರದ ಬೆಳಕು

ಕವನ

ತುಳಿತವನು ಸಹಿಸಿ ಇನ್ನೆಷ್ಟು ದಿನ ಮೌನ|

ಮಾತಾಡು ಮನವೆ ಮಣ್ಣಾಗುವ ಮುನ್ನ|

 

ಪುಟಿದೇಳು ನೀನು ದನಿಯಾಗಿ ಹೋರಾಡು

ದಮನವನು ಮುರಿದು ದ್ವಜವಾಗಿ ಹಾರಾಡು|

 

ಮೇಲಿಲ್ಲ ಕೀಳಿಲ್ಲ ಧೈರ್ಯವಿರೆ ಸೋಲೆಲ್ಲಿ

ಬೆದರಿ ಮುದುದಡಿರು ನಿಲ್ಲು ನಿನ್ನದೇ ಕಾಲಲ್ಲಿ |

 

ಒಳಗಿಹನು ನಾಯಕನು ನೀನವನ ಎಚ್ಚರಿಸು|

ಭಯಬಿಡು ಒಮ್ಮೆ ಹುಲಿಯಾಗಿ  ಅಬ್ಬರಿಸು|

 

ಕಾನೂನು ನೆರಳು ಕಾಯುವುದು ಬೆಳಕಾಗಿ

ದೀನರಿಗೆ ನೆರವಾಗು ಅರಿವಿನ ಗುರುವಾಗಿ|

- *ಕಾ.ವೀ.ಕೃಷ್ಣದಾಸ್*

 

ಚಿತ್ರ್