ಎಚ್ಚೆತ್ತುಕೊಳ್ಳಬೇಕಿತ್ತು
ತಪ್ಪು ನಮ್ಮದೇ ಮನುಜ ಎಚ್ಚೆತ್ತುಕೊ?
--------------------------------------------
ಸಾಲುಸಾಲು ಹಕ್ಕಿಗಳು ಸತ್ತು
ಮರದಿಂದ ತಪತಪ ಉದುರಿದಾಗ
ನಾವು ಎಚ್ಚೆತ್ತುಕೊಳ್ಳಬೇಕಿತ್ತು|
ಸಮುದ್ರ ತಟದಲ್ಲಿ ಸವಿರ ಸಾವಿರ
ಮೀನುಗಳು ವಿಲಿವಿಲಿ ಒದ್ದಾಡಿ ಸತ್ತು ಬಿದ್ದಾಗ
ನಾವು ಎಚ್ಚೆತ್ತುಕೊಳ್ಳಬೇಕಿತ್ತು|
ಹಾಲುಕೊಡುವ ಹಸು ಕರುಗಳ ನಿರ್ಲಕ್ಷ್ಯದಿ
ದೂರಮಾಡಿ ಹತ್ಯಮಾಡಿ
ತಿಂದು ತೇಗಿದಾಗ ಎಚ್ಚೆತ್ತುಕೊಳ್ಳಬೇಕಿತ್ತು|
ಕಾಮಧೇನು ಕಲ್ಪವೃಕ್ಷ ಕಂಗಾಲಾಗಿ
ಒಣಗಿ ಒರಗಿ ನರಳಿದಾಗ ಎಚ್ಚೆತ್ತುಕೊಳ್ಳಬೇಕಿತ್ತು||
ನೀರಿರದೆ ಕಾಡು ಒಣಗಿ
ಕಾಡ್ಗಿಚ್ಚು ಹೊತ್ತಿ ಸಹಸ್ರ ಪ್ರಾಣಿಗಳು
ಸಜೀವ ದಹನವಾದಾಗ ಎಚ್ಚೆತ್ತುಕೊಳ್ಳಬೇಕಿತ್ತು|
ಸಾವಿರ ಅಡಿ ಕೊಳವೆ ಬಾವಿ ಕೊರೆದು
ನೀರುತೆಗೆದು ಜೀವಿಸುವಾಗಲಾದರೂ
ಏಕೆ ನೀರು ನಮ್ಮನ್ನು ತೊರೆದು ದೂರಸರಿಯುತ್ತಿದೆ ಎಂದು
ಒಮ್ಮೆಯಾದರೂ ನಾವು ಎಲ್ಲಿ ತಪ್ಪಿದ್ದೇವೆಂದು
ಯೋಚಿಸಿ ಎಚ್ಚೆತ್ತುಕೊಳ್ಳಬೇಕಿತ್ತು|
ಅಕಾಲಿಕ ಆಲಿಕಲ್ಲುಮಳೆ ಜಲಪಳಯವಾದಲೋ
ಬಿಸಿಲ ಬೆಂಕಿಮಳೆಯಾದಲೋನಾವು ನೀವೆಲ್ಲರೂ
ಮುಂಸೂಚನೆ ಅರಿತು ಎಚ್ಚೆತ್ತುಕೊಳ್ಳಬೇಕಿತ್ತು||
ಈಗ ಕರೋನ ಗಾಳಿಗುಂಟ ಬಂದು
ಮನುಕುಲವನ್ನು ಹುಸಿರು ಗಟ್ಟಿ ನರಳಿ ನರಳಿ
ಸಾಯಿಸಿ ಸಾಲು ಸಾಲು ಹೆಣಗಳ ಕೆಡವುತ್ತಿರುವಾಗ
ಜೀವದ ಬೆಲೆಗೊತ್ತಾಗುತ್ತಿದೆಯಾ ಮನುಜ|
ನಿನ್ನ ಜೀವ ಮಾತ್ರ ಜೀವವೇ? ಪ್ರಾಣಿಪಕ್ಷಿ ಗಿಡಮರಗಳು
ಈ ಭೂಮಿಯ ಮಕ್ಕಳಲ್ಲವೇ? ಅವುಗಳಿಗೆ
ಬದುಕುವ ಹಕ್ಕಿಲ್ಲವೆ? ಅವು ನಮ್ಮಂತೆಯೇ ಅಲ್ಲವೇ?
ಗಾಳಿ ಬೆಳಕು ನೀರು ಮಲಿನಮಾಡಿದರ
ಪ್ರತಿಫಲ ನಿನಗೆ ಆಘಾತ ತಂದಾಗ ಅರಿವಾಗುತ್ತಿದೆಯೇ?||
ಅನ್ನಕ್ಕೆ ಹೊಟ್ಟೆಹೊರೆವ ವಿದ್ಯೆ ಕಲಿತು
ಇಲ್ಲಿರುವ ಸಂಪತ್ತನೇ ಮಾರಿ ಅತೀ ಆಸೆಗೆ
ವಿದ್ಯೆ ಗುರು ತಂದೆ ತಾಯಿಗಳಿಗೆ ಅಗೌರವ ತೋರಿ
ಅವರ ಮಾತು ವಿವೇಚನೆ ಮೀರಿ
ಜೀವನಮಾಡಿ ಪ್ರಕೃತಿಯ ಮನಕೆ ಮಿಡಿಯದೆ
ಸುಖಕೆ ಹತ್ತಾರು ಮಕ್ಕಳ ಮಾಡಿಕೊಂಡು
ಹಣ ಒಡವೆ ಆಸ್ತಿ ಅಧಿಕಾರಿ ಒಣ
ಸಂಸಾರದಲ್ಲಿ ತೊಳಲಾಡಿ ಪ್ರಕೃತಿಯ ಧ್ವಂಸಮಾಡಿದ್ದಕ್ಕೆ
ಈಗ ಈ ಕರೋನ ಮಾಹಾಮಾರಿ ಮಾರಣಹೋಮ
ಮಾಡಿ ಭೂಮಿಯನೇ ನರಕಮಾಡುತ್ತಿದೆ ||
ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು
ಹಿತ ಮಿತ ಅರಿಯದಿರೆ ಅಹಿತ ಅರಿತು ಬಾಳದಿರೆ
ಗಾಳಿ ನೀರು ಬೆಳಕು ವಿಧ್ಯೆ ಬುದ್ದಿಯ ಸ್ವಚ್ಛವಾಗಿರದಿರೆ
ನ್ಯಾಯ ನೀತಿ ಅಹಿಂಸೆ ಧರ್ಮದ ತಳಹದಿಯಲಿ ಬಾಳದಿರೆ
ನಮ್ಮ ಮುಂದಿನ ತಲೆಮಾರು ಎಲ್ಲಾ ಕಾಲಿಯಾಗಿ
ಮನಜಮುಕ್ತ ಪ್ರಪಂಚವಾಗಿ ಹೊಸಮನುಜನ ಅವತಾರಕ್ಕೆ ಮಡಿಲ ಸುದ್ಧಮಾಡುವಳು ವಸುಂಧರೆ||