ಎತ್ತ ನಡೆ...?

ಎತ್ತ ನಡೆ...?

ಕವನ

ಬುದ್ಧಿವಂತರು ನಾವು ಬುದ್ಧಿವಂತರು 

ಕರಾವಳಿಯ ಜನರೇ ನಾವು ಬುದ್ಧಿವಂತರು 

ಈ ಹೆಸರಂತೆ ಎಲ್ಲೆಲ್ಲೂ 

ಹೆಸರುವಾಸಿ ನಾವು ಬುದ್ಧಿವಂತರು! 

ಜಾತಿ ಧರ್ಮ ಪರಿವಿಲ್ಲದೆ ಬದುಕುವ ಎಲ್ಲರಿಗಿಂತಲೂ ಭಿನ್ನ ನಾವು!

ಹೌದೇ?

"ಎಂಚಿನ ಸಾವು ಮಾರೇ" 

ಎಂದು ಗೊಣಗುತ್ತಾ 

ನಗುವಿನಲ್ಲೇ ಎಲ್ಲವನ್ನೂ 

ಮರೆತು ಬಾಳುವ ನಾವು 

ಇಂದೇಕೆ ಸಾವಿನಲ್ಲಿ ಸುಖ ಕಂಡೆವು?

ಜಾತಿ, ಧರ್ಮ ಕೋಮು ದ್ವೇಷ ಇದರಲ್ಲೇ ನಾವು ಬುದ್ಧಿವಂತರು?

ರಾಜಕೀಯ ಸೋಕು ಇಲ್ಲದೆ ಬದುಕಿದ ನಾವು

ಇಂದೇಕೆ ಹೀಗಾದೆವು?

ದೈವ ದೇವರ ಭಕ್ತಿ ಇದ್ದ ನಾವು ಯಾಕೆ ಅನಾಚಾರ ಪರವಾದೆವು?

ಇಲ್ಲ! ಬುದ್ಧಿವಂತರು ನಾವು 

ಕರಾವಳಿ ಜನರು ನಾವು 

ನಾವು ಭಿನ್ನ, ಆಚಾರ ವಿಚಾರ ವಿಭಿನ್ನ 

ಆದರೂ ಸಾಮರಸ್ಯ ಪ್ರೀತಿ ವಿಶ್ವಾಸಕ್ಕೆ 

ಜಗತ್ತಿಗೇ ಮಾದರಿ ನಾವು!

-ಪ್ರೀಯಾ ನೊರೊನ್ಹಾ ಕುಲಶೇಖರ

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್