ಎದೆಯ ಹಂದರದೊಳಗೆ..
ಕವನ
ನನ್ನೆದೆಯ ಹಂದರದೊಳಗೆ
ನೂರೊಂದು ಕನಸುಗಳ ಸಾಲು
ಕಟ್ಟುಪಾಡಿನ ಕಟ್ಟಳೆಯು
ಸಮಾಜದಲ್ಲಿ ಮಾಮೂಲು..
ಬ್ರಾಹ್ಮಿಯಲಿ ಮಿಂದು ದೀಪವಿಟ್ಟು
ಭಕ್ತಿಯಲಿ ಭಜಿಸಿ ಹೊರಬಿದ್ದೆ
ಕನಸುಗಳ ಜೋಳಿಗೆಯ ಹೆಗಲಿಗೇರಿಸಿ
ಗಲ್ಲಿಗಲ್ಲಿಯ ತಿರುಗಿದ್ದೆ..
ಕುಂತರೂ ನಿಂತರೂ ತಪ್ಪೆಂದು ಹೇಳುವಿರೆ
ಬೆವೆತ ತನು ನನ್ನದಲ್ಲವೇ
ದೂರದಲ್ಲಿ ನಿಂತು ನೋಡಿ ಊಹೆಯನು ಮಾಡುವಿರೆ
ತಿರುಗುವಾ ಕಾಲುಗಳು ನನ್ನದಲ್ಲವೇ..
ನನ್ನೆದೆಯ ಹಂದರದಿ ಹಲವಿಧದ ಚಿಂತೆಗಳು
ನಿಮ್ಮೊಳಗೆ ಸುಖವನ್ನು ನೀವು ಕಾಣುತಲಿರಿ
ಎದೆಗೂಡು ಬಡಿಯುತ್ತ ರಕ್ತವನು ಕಳಿಸುತಿದೆ
ನನ್ನೊಳಗೆ ಚೈತನ್ಯದ ಚಿಲುಮೆಯೊಂದು ಮೂಡಿದೆ..
ಮೇಲು ಕೀಳಿನ ಹಮ್ಮು ಬಿಮ್ಮಿನ
ಮಾತು ವರ್ತನೆ ಅರಿಯೆನು
ಜಾತಿ ಹಂಗಿನ ವರ್ಣ ಪಂಕ್ತಿಯ
ಎದೆಯ ಬಡಿತವ ತಿಳಿಯೆನು..
-ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್